ಇತ್ತೀಚಿಗೆ ರಾಜ್ಯ ರಾಜಕಾರಣದಲ್ಲಿ ಅಂದರೆ ಕಾಂಗ್ರೆಸ್ನಲ್ಲಿ ಕೆಲವು ಗೊಂದಲಗಳು ಚರ್ಚೆಗಳು ಆರಂಭವಾಗ್ತಾ ಇದ್ದು ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷವನ್ನ ತೊರೆಯುತ್ತಾರಾ ಅನ್ನುವಂತಹ ಚರ್ಚೆಗಳು ಆರಂಭವಾಗಿದೆ. ಕಾರಣ ಏನು ಅಂದ್ರೆ ಒಂದು ಸ್ಟಿಂಗ್ ಆಪರೇಷನ್ ಇನ್ನೊಂದು ಸಿದ್ದರಾಮಯ್ಯನವರು ತಮ್ಮದೇ ಪಕ್ಷದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿ ಮೂಲೆಗುಂಪಾಗುತ್ತಿದ್ದಾರಾ ಅನ್ನುವಂತಹ ಚರ್ಚೆಗಳು ಆರಂಭವಾಗುತ್ತಿದೆ. ಇಂದು ನಾಲ್ಕು ಗಂಟೆಗೆ ರಾಹುಲ್ ಜೊತೆಗೆ ಸಿದ್ದರಾಮಯ್ಯ ಸಭೆ ನಡೆಸಲು ಮುಂದಾಗಿದ್ದಾರೆ. ಸಭೆಯಲ್ಲಿ ಸ್ಟಿಂಗ್ಗೆ ಸಂಬಂಧಪಟ್ಟಂತೆ ಚರ್ಚೆಗಳು ನಡೆಯಬಹುದು. ಈ ಚರ್ಚೆ ಭಾರೀ ಕುತೂಹಲವನ್ನ ಸೃಷ್ಠಿ ಮಾಡ್ತಾ ಇದೆ. ಇದು ಬಾರೀ ಚರ್ಚೆಗೂ ಕಾರಣವಾಗಬಹುದು.
ಇದಕ್ಕೂ ಮೊದಲೆ ಸಿದ್ದರಾಮಯ್ಯ ಅವರು ತಾವು 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಘೋಷಣೆಯನ್ನ ಮಾಡಿದ್ದರು. ಆದರೆ, ತಾವು ಸಾರ್ವಜನಿಕ ಜೀವನದಲ್ಲಿ ಮುಂದುವರಿಯಲಿದ್ದು, ಕಾಂಗ್ರೆಸ್ ಪಕ್ಷ ಮತ್ತು ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದ್ದರು.
ಮೇ 20226ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯ ಭೆಕಾದ ಸಂದರ್ಭದಲ್ಲೂ ಕೂಡ ಹೈಕಮಾಂಡ್ನಿಂದ ನೀಡಲಾದ ರಾಜ್ಯಸಭಾ ಸ್ಥಾನವನ್ನ ತಿರಸ್ಕರಿಸಿ ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ ರಾಜ್ಯದಲ್ಲಿ ಜನರಿಗೆ ಸೇವೆ ಮಾಡಬೇಕು ಎಂದಿದ್ದರು. ಹಾಗಾಗೀ ನಿಜವಾಗಿಯೂ ಸಿದ್ದರಾಮಯ್ಯನವರು ರಾಜಕೀಯ ನಿವೃತ್ತಿಯನ್ನ ಹೊಂದುತ್ತಾರಾ? ಸ್ಟಿಂಗ್ ಆಪರೇಷನ್ ಪ್ರಕರಣ ತನ್ನ ಪಕ್ಷದಲ್ಲಿ ತಮಗೆ ಆಗ್ತಾ ಇರುವಂತಹ ಅಸಮಾಧಾನ, ಶಾಸಕರಿಂದ ನಿರ್ಲಕ್ಷ್ಯ ಇದೆಲ್ಲದರಿಂದ ಬೇಸತ್ತು ರಾಜ್ಯ ರಾಜಕಾರಣಕ್ಕೆ ಸಿದ್ದರಾಮಯ್ಯ ಗುಡ್ಬೈ ಹೇಳಬಹುದಾ ಅನ್ನುವಂತದ್ದು ಈಗ ಒಳ ರಾಜಕೀಯದಲ್ಲಿ ನಡಿತಾ ಇರುವಂತಹ ಚರ್ಚೆ. ಆದರೆ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹಾಗೇ ಸಿದ್ದರಾಮಯ್ಯನವರು ಸಹ ಕಾಂಗ್ರೆಸ್ ಪಕ್ಷವನ್ನ ಬಿಡುತ್ತೇನೆ ಎಂದು ಎಲ್ಲೂ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ. ಆದರೆ ಇದರ ಬಗ್ಗೆ ರಾಜಕೀಯ ಒಲಯದಲ್ಲಿ ಬಾರೀ ಚರ್ಚೆಗೆ ಗ್ರಾಸವಾಗ್ತಾ ಇದೆ.
ರಾಜಕೀಯದಲ್ಲಿ ಕೇಳಿಬರುತ್ತಿರುವ “ಸ್ಟಿಂಗ್ ಆಪರೇಷನ್” ವಿವಾದಗಳಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರು ಅಸಮಾಧಾನಗೊಂಡಿದ್ದಾರೆ ಎಂಬ ಚರ್ಚೆಗಳು ಮಾಧ್ಯಮಗಳಲ್ಲಿ ನಡೆಯುತ್ತಿವೆಯಾದರೂ, ಅವರು ಪಕ್ಷ ತೊರೆಯುತ್ತಾರೆ ಎಂಬ ಸುದ್ದಿಗಳು ಕೇವಲ ರಾಜಕೀಯ ವದಂತಿಗಳಾಗಿವೆ. ಅವರ ಆಪ್ತರು ಮತ್ತು ಪಕ್ಷದ ನಾಯಕರು ಸಿದ್ದರಾಮಯ್ಯ ಅವರು ಕಾಂಗ್ರೆಸ್ನಲ್ಲೇ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
