Headlines

ಡೊನಾಲ್ಡ್ ಟ್ರಂಪ್‌ಗೆ ಮುಖಭಂಗ, ಅಮೆರಿಕದ ಚುನಾವಣೆ ಗೆದ್ದ ಭಟ್ಕಳದ ಅಳಿಯ

ಅಮೆರಿಕಾದ ಮಧ್ಯಂತರ ಚುನಾವಣೆಯಲ್ಲಿ ಅಮೆರಿಕಾದ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಹೀನಾಯ ಸೋಲನ್ನ ಕಂಡಿದ್ದಾರೆ. ಅಮೆರಿಕದ ಮಿಶಿಗನ್ ಸೆನೆಟ್ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿತ ಅಭ್ಯರ್ಥಿಯನ್ನು ಸೋಲಿಸಿ ಡಾ. ಅಬ್ದುಲ್ ಅಲ್ ಸಯೀದ್ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಇವರು ಅಮೆರಿಕದ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ಮತ್ತು ಈಜಿಪ್ಟ್ ಮೂಲದ ಅಮೆರಿಕನ್ ಆಗಿದ್ದಾರೆ.


ಯಾರು ಈ ಅಲ್ ಸಯೀದ್?
ಅಲ್ ಸಯೀದ್ ಅವರ ತಂದೆ ಮೊಹಮ್ಮದ್ ಅಲ್ ಸಯೀದ್ ಶಿಕ್ಷಣಕ್ಕಾಗಿ ಅಮೆರಿಕಾಗೆ ವಲಸೆ ಬಂದಿದ್ದರು. ಅಬ್ದುಲ್ ಅಲ್ ಸಯೀದ್ ಅವರ ತಾಯಿ ಫತ್ತೆನ್-ಅಲ್-ಕೆಮಿ ನರ್ಸ್ ಆಗಿ ಕೆಲಸ ಮಾಡಿದ್ದಾರೆ. 31ನೇ ಅಕ್ಟೋಬರ್ 1984ರಂದು ಮಿಶಿಗನ್‌ನ ಹಿಲ್ಸ್‌ನಲ್ಲ ಜನಿಸಿದರು. ಓದಿನಲ್ಲಿ ಚುರುಕಾಗಿದ್ದ ಅಲ್-ಸಯೀದ್ ಜೀವಶಾಸ್ತ್ರ ಮತ್ತು ರಾಜಕೀಯ ಶಾಸ್ತ್ರದಲ್ಲಿ ಮಿಶಿಯನ್ ಯುನಿವರ್ಸಿಟಿಯಿಂದ ಪದವಿಯನ್ನು ಪಡೆದುಕೊಂಡಿದ್ದಾರೆ.

ಕರ್ನಾಟಕದ ಭಟ್ಕಳದ ಅಳಿಯ ಡಾಕ್ಟರ್ ಅಬ್ದುಲ್ ಅಲ್ ಸಯೀದ್ (Abdul El-Sayed) ಅಮೆರಿಕದಲ್ಲಿ ಸೆನೆಟರ್ ಆಗಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ (Michigan Senate battle) ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಮೈಕ್ ರೋಜರ್ಸ್ ಅವರನ್ನು ಅಬ್ದುಲ್ ಅಲ್ ಸಯೀದ್ ಸೋಲಿಸುವ ಮೂಲಕ ಗೆಲುವನ್ನು ದಾಖಲಿಸಿದ್ದಾರೆ.

ಸೆನೆಟರ್ ಆಗಿರುವ ಅಬ್ದುಲ್ ಅಲ್ ಸಯೀದ್ ಅವರ ಪತ್ನಿ ಡಾ.ಸಾರಾ ಜುಕಾಕು ಭಟ್ಕಳ ಮೂಲದವರು. ಡಾಕ್ಟರ್ ಸಾರಾ ಅಮೆರಿಕದ ಖ್ಯಾತ ವೈದ್ಯ ಡಾ.ತಯ್ಯಬ್ ಜುಕಾಕ್ ಅವರ ಪುತ್ರಿಯಾಗಿದ್ದಾರೆ. ಡಾ.ತಯ್ಯಬ್ ಅವರ ತಂದೆ ದಿ.ಶಂಸುದ್ಧೀನ್ ಅವರು ಭಟ್ಕಳದಲ್ಲಿ ಹಿರಿಯ ಸಾಮಾಜಿಕ ಹೋರಾಟಗಾರ ಮತ್ತು ರಾಜಕೀಯ ಮುಖಂಡರಾಗಿ ಗುರುತಿಸಿಕೊಂಡಿದ್ದರು. 2006ರಲ್ಲಿ ಅಬ್ದುಲ್ ಅಲ್ ಸಯೀದ್ ಮತ್ತು ಸಾರಾ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನೋ ಹಾಗೆ ತಮ್ಮ ಪಕ್ಷದ ಸೋಲಿನ ಬಗ್ಗೆ ‘ತಾನು ಈ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರಲಿಲ್ಲ, ಒಂದು ವೇಳೆ ತಾನು ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಇದ್ದಿದ್ದರೆ, ಭಾರಿ ಬಹುಮತ ಮತ್ತು ದೊಡ್ಡ ಅಂತರದಿಂದ ಗೆಲ್ಲುತ್ತಿದ್ದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *