Headlines

Belonging: A Journey of Love: ದೇಶದಲ್ಲಿ ಸದ್ದು ಮಾಡ್ತಾ ಇದೆ ಸೋನಿಯಾ ಗಾಂಧಿ ಆತ್ಮಕಥನ

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ದೇಶಾದ್ಯಂತ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಪುಸ್ತಕದ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿದೆ. ದೇಶಾದ್ಯಂತ ಸೋನಿಯಾ ಗಾಂಧಿ ಆತ್ಮಕಥೆ ಪುಸ್ತಕ ಭಾರೀ ಸದ್ದನ್ನ ಮಾಡ್ತಾ ಇದೆ. ಇಟಲಿಯಲ್ಲಿ ಜನಿಸಿದ ಸೋನಿಯಾ ಗಾಂಧಿ ಅವರು ಭಾರತದ ಪ್ರಭಾವಶಾಲಿ ರಾಜಕೀಯ ಕುಟುಂಬದೊಂದಿಗೆ ಬೆರೆತ ಹಾದಿ, ರಾಜೀವ್ ಗಾಂಧಿ ಅವರೊಂದಿಗಿನ ಒಡನಾಟ, ವೈಯಕ್ತಿಕ ಬದುಕಿನ ಏಳು-ಬ ಬೀಳುಗಳು, ಮತ್ತು ಐದು ದಶಕಗಳ ರಾಜಕೀಯ ಪಯಣವನ್ನು ಈ ಕೃತಿಯಲ್ಲಿ ಹಂಚಿಕೊಂಡಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ನವೆಂಬರ್ 10ರಂದು ದೇಶಾದ್ಯಂತ ಬಿಡುಗಡೆಯಾದ ಅವರ ಹೊಸ ಆತ್ಮಕಥನ ‘ಬಿಲಾಂಗಿಂಗ್:ಎ ಜರ್ನಿ ಆಫ್ ಲವ್’ (Belonging: A Journey of Love) ಕೃತಿಯಲ್ಲಿ, ಆ ನಿರ್ಣಾಯಕ ರಾಜಕೀಯ ನಿರ್ಧಾರದ ಹಿಂದಿನ ಸಂಗತಿಗಳನ್ನು ವಿವರವಾಗಿ ಹಂಚಿಕೊಂಡಿದ್ದಾರೆ. 2014ರ ಯುಪಿಎ ಸರ್ಕಾರದ ಸೋಲಿಗೆ ಕಾರಣ ಏನಾಗಿತ್ತು? ಯಾರಾಗಿದ್ದರು ಎಂಬುದನ್ನ ಬಿಚ್ಚಿಟ್ಟಿದ್ದಾರೆ.

ದೇಶದಲ್ಲಿ 2011-12ರಲ್ಲಿ ನಡೆದಿದ್ದ ‘ಭ್ರಷ್ಟಾಚಾರ ವಿರುದ್ಧ ಭಾರತ’ ಚಳವಳಿಯನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ರಹಸ್ಯವಾಗಿ ಆಯೋಜಿಸಿದ್ದವು, ಬೆಂಬಲವನ್ನೂ ನೀಡಿದ್ದವು.. ಈ ಹೋರಾಟದ ಮುಂಚೂಣಿಯಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆಗೆ ರಾಜಕೀಯ ಪಕ್ಷಗಳೊಂದಿಗೆ ನಂಟು ಇತ್ತು ಎಂದು ಸೋನಿಯಾ ಗಾಂಧಿ ತಮ್ಮ ಆತ್ಮಕಥೆ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಣ್ಣ ಹಜಾರೆ ತಿರುಗೇಟು ಕೊಟ್ಟಿದ್ದಾರೆ.

2014ರ ಯುಪಿಎ ಸರ್ಕಾರದ ಸೋಲಿಗೆ ಅಣ್ಣಾ ಹಜಾರೆ ಕಾರಣರಾದ್ರಾ? ಜಂತರ್ ಮಂತರ್‌ನಲ್ಲಿ ಅಣ್ಣಾ ಹಜಾರೆ ಹೋರಾಟವೇ ಯುಪಿಎ ಪಕ್ಷ ಸೋಲೋದಕ್ಕೆ ಮುಳುವಾಯ್ತು, 2011ರಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಭ್ರಷ್ಟಾಚಾರ ವಿರೋಧಿ ಚಳವಳಿ ನಡೆದಿದ್ದು
ಜನಲೋಕಪಾಲ್ ಕಾಯ್ದೆಗಾಗಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಮಾಡಿದ್ರು ಇದೇ ಯುಪಿಎ ಸರ್ಕಾರ ಸೋಲಿಗೆ ಪ್ರಮುಖ ಕಾರಣ ಹಾಗೇ ಅಣ್ಣಾ ಹಜಾರೆಗೆ ಬಿಜೆಪಿ, ಆರ್‌ಎಸ್‌ಎಸ್ ಬೆಂಬಲವನ್ನೂ ನೀಡಿದ್ದವು ಎಂದ ಸೋನಿಯಾ ಗಾಂಧಿ ಆರೋಪವನ್ನ ಮಾಡಿದ್ದಾರೆ.

ಸೋನಿಯಾ ಗಾಂಧಿ ಆರೋಪಕ್ಕೆ ಅಣ್ಣಾ ಹಜಾರೆ ತಿರುಗೇಟನ್ನ ನೀಡಿದ್ದು ʼನಾನು ಸಮಾಜ ಮತ್ತು ದೇಶದ ಹಿತಕ್ಕಾಗಿ ಕೆಲಸ ಮಾಡುತ್ತೇನೆ ಯಾವುದೇ ರಾಜಕೀಯ ಪಕ್ಷದೊಂದಿಗೆ ನನಗೆ ಸಂಬಂಧವಿಲ್ಲ’ ಬಿಜೆಪಿ ಅಥವಾ ಆರ್‌ಎಸ್‌ಎಸ್‌ನೊಂದಿಗೆ ನನಗೆ ಯಾವುದೇ ಸಂಪರ್ಕ ಇಲ್ಲ. ಅವರ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿಯೂ ಇಲ್ಲ. ನಾನು ಮಾಡುವುದೆಲ್ಲವೂ ನನ್ನ ಸಮಾಜಕ್ಕೆ ಮತ್ತು ದೇಶಕ್ಕಾಗಿ. ನನ್ನ ಹೋರಾಟದಿಂದ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ 2014ರ ಚುನಾವಣೆಯಲ್ಲಿ ಸೋತಿತ್ತು ಎಂದು ಹೇಳಿಕೊಳ್ಳಲು ಏನು ಆಧಾರ ಇದೆ’ ಎಂದು ಅವರು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *