ನಾಳೆ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ! ಬೆಂಗಳೂರು ಮತ್ತು ಮೈಸೂರಿನಲ್ಲಿ ಪ್ರಧಾನಿ ಅವರಿಂದ ಸಾಲು ಸಾಲು ಕಾರ್ಯಕ್ರಮಗಳು ನಡೆಯಲಿವೆ. ಬೆಂಗಳೂರಿನ ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋಗೆ ಮೋದಿ ಚಾಲನೆ ನೀಡಲಿದ್ದು, ಹಾಗಾದ್ರೆ ಪ್ರಧಾನಿ ಮೋದಿ ಅವರ ನಾಳಿನ ಕಂಪ್ಲೀಟ್ ಶೆಡ್ಯೂಲ್ ಏನು?
ಬೆಂಗಳೂರು,ನ.12- ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ರಾಜ್ಯದಲ್ಲಿ 15,600 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ನಗರ ಸಾರಿಗೆ, ರೈಲ್ವೆ, ವಿದ್ಯುತ್ ಪ್ರಸರಣ, ನವೀಕರಿಸಬಹುದಾದ ಇಂಧನ, ಪೆಟ್ರೋಲಿಯಂ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖ ಯೋಜನೆಗಳು ಈ ಕಾರ್ಯಕ್ರಮದಲ್ಲಿ ಸೇರಿವೆ.
ಬೆಂಗಳೂರು,ನ.12- ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ರಾಜ್ಯದಲ್ಲಿ 15,600 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ನಗರ ಸಾರಿಗೆ, ರೈಲ್ವೆ, ವಿದ್ಯುತ್ ಪ್ರಸರಣ, ನವೀಕರಿಸಬಹುದಾದ ಇಂಧನ, ಪೆಟ್ರೋಲಿಯಂ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖ ಯೋಜನೆಗಳು ಈ ಕಾರ್ಯಕ್ರಮದಲ್ಲಿ ಸೇರಿವೆ.
ನಾಳೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಪ್ರವಾಸ ಮಾಡ್ತಾ ಇದ್ದು ಬೆಂಗಳೂರು, ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಬಾಗಿಯಾಗಲಿದ್ದಾರೆ.
ಬೆಳಗ್ಗೆ 10.05ಕ್ಕೆ HAL ಏರ್‌ಪೋರ್ಟ್‌ಗೆ ಆಗಮನ ಬೆಳಗ್ಗೆ 10.45ಕ್ಕೆ ಪ್ರಶಾಂತಿ ಕಟೀರಂ ಸುವರ್ಣ ಮಹೋತ್ಸವ ಮಧ್ಯಾಹ್ನ 12.40 ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಆಗಮನ ಮಧ್ಯಾಹ್ನ 1.15ಕ್ಕೆ IIMB ಆಡಿಟೋರಿಯಂ, ಬೆಂಗಳೂರು ಮಧ್ಯಾಹ್ನ 2.00 ವಂದೇ ಭಾರತ್ ರೈಲಿಗೆ ಚಾಲನೆ ಮಧ್ಯಾಹ್ನ 2.30 ಹೆಲಿಕಾಫ್ಟರ್ ಮೂಲಕ ಮೈಸೂರಿಗೆ ಅದಾದ ಬಳಿಕ ಸಂಜೆ 6 ಗಂಟೆಗೆ ಮೈಸೂರಿಂದ ದೆಹಲಿಗೆ ಪ್ರಯಾಣ ಮಾಡಲಿದ್ದಾರೆ.
ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ. ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ. ಮಂಗಳೂರಿನ ಭೂಗತ LGP ಸಂಗ್ರಹಗಾರ ಲೋಕಾರ್ಪಣೆ. ಮೈಸೂರ್ ಪ್ಲಾನೆಟೋರಿಮ್ ಉದ್ಘಾಟನೆ. ಬೆಂಗಳೂರು ಮಂಗಳೂರು ಮಂದಾಗಾವ್ ವಂದೇ ಭಾರತ ಐಷಾರಾಮಿ ರೈಲಿಗೆ ಚಾಲನೆ ನೀಡಲಿದ್ದಾರೆ ಅದರ ಜೊತೆಗೆಬೆಳಗ್ಗೆ 10.45 ಕ್ಕೆ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವದಲ್ಲಿ ಭಾಗಿಯಾಗಿ ಮಧ್ಯಾಹ್ನ 12.45 ಕ್ಕೆ ಕಾಳೇನ ಅಗ್ರಹಾರ ಟು ತಾವರೆಕೆರೆ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ ಮಾಡಲಿದ್ದಾರೆ.
ಸುಮಾರು ₹3,470 ವೆಚ್ಚದ 7.05 ಕಿಮೀ ಉದ್ದದ ಮೆಟ್ರೋ ಮಾರ್ಗ ಇದಾಗಿದ್ದು ತಾವರೆಕೆರೆ ಇಂದ ಐಐಎಂ ನಿಲ್ದಾಣವರೆಗೂ ಮೆಟ್ರೋದಲ್ಲಿ ಪ್ರಯಾಣ ಮಾಡಲಿದ್ದಾರೆ. ಬಳಿಕ ಬೆಂಗಳೂರಿನ ₹15,600 ಕೋಟಿಯ ವಿವಿಧ ಅಭಿವೃದ್ಧಿ ಯೋಜನೆಗೆ ಚಾಲನೆ ಮಾಡಲಿದ್ದು, ಇನ್ನು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಪ್ರಧಾನಿ ಮೋದಿ.
ಕರ್ನಾಟಕ ಪ್ರವಾಸದ ಅಂತಿಮ ಹಂತದಲ್ಲಿ ಪ್ರಧಾನಿ ಮೋದಿ ಅವರು ಮೈಸೂರಿಗೆ ತೆರಳಲಿದ್ದು, ಮಧ್ಯಾಹ್ನ ಸುಮಾರು 3.30ಕ್ಕೆ ಏಕ್ ಪೇಡ್ ಮಾ ಕೆ ನಾಮ್ ಅಭಿಯಾನದ ಭಾಗವಾಗಿ ಭಾರತ ಒನ್‌ನಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಿಯಾವಾಕಿ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಥಳೀಯ ಸಸ್ಯ ಪ್ರಭೇದಗಳಿಂದ ದಟ್ಟವಾದ ನಗರ ಅರಣ್ಯ ಬೆಳೆಸುವುದು ಭಾರತ ವನ್‌ನ ಉದ್ದೇಶವಾಗಿದೆ.
