ಭಾರತದಲ್ಲಿ ಬಂಗಾರ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ನಮ್ಮಲ್ಲಿ ಬಂಗಾರ ಎಂದರೆ ಅದೊಂದು ಒಳ್ಳೆ ಹೂಡಿಕೆ ಹಾಗೇ ಪ್ರತಿಷ್ಟೆಯ ಪ್ರಶ್ನೆ. ಭಾರತೀಯರಿಗೆ ಬಂಗಾರ ಎಂದರೆ ಅದೊಂದು ರೀತಿಯಲ್ಲಿ ಭಾರೀ ವ್ಯಾಮೋಹ. ಯಾವುದೇ ಶುಭಕಾರ್ಯವಿರಲಿ ಮನೆಗಳಲ್ಲಿ ಬಂಗಾರದ ಆಭರಣಗಳು ಇರಲೇಬೇಕು. ಇಲ್ಲವೆಂದರೆ ಅದೇನೋ ಖಾಲಿತನ. ಪ್ರತಿಷ್ಟೆಗೆ ಕುಂದು ಬಂದಂತೆ. ಇತ್ತೀಚಿನ ಚಿನ್ನ ಬೆಳ್ಳಿ ದರ ಗಮನಿಸಿದರೆ ಏರುತ್ತಲೇ ಇದೆ.

ಎಷ್ಟೇ ಬೆಲೆ ಏರಿಕೆಯಾದರೂ ಚಿನ್ನದ ಮೇಲಿನ ಹೂಡಿಕೆ ಹಾಗೂ ವ್ಯಾಮೋಹ ಎಂದಿಗೂ ಕಡಿಮೆಯಾಗುವುದಿಲ್ಲ. ಆದರೆ, ಆಭರಣ ಖರೀದಿಗೆ ಅಂಗಡಿಗೆ ಹೋಗುವ ಮುನ್ನ ಮಾರುಕಟ್ಟೆಯಲ್ಲಿನ ನಿಖರ ದರ ತಿಳಿದುಕೊಳ್ಳುವುದು ಜಾಣತನ. ಒಂದು ವೇಳೆ ತಿಳಿಯದೇ ಚಿನ್ನದ ಅಂಗಡಿಗೆ ಭೇಟಿ ಕೊಟ್ಟರೆ ನೀವು ಯಾಮಾರುವುದು ಖಚಿತ.
ಇಗಂತೂ ಹಬ್ಬದ ಸೀಸನ್ ಹಾಗೇ ಮದುವೆ, ಶುಭ ಕಾರ್ಯಗಳು ಆರಂಭವಾಗುತ್ತಿವೆ. ಮಾರುಕಟ್ಟೆಯಲ್ಲಿ ಬಂಗಾರದ ಬೇಡಿಕೆ ಮತ್ತೆ ಹೆಚ್ಚಾಗಿದೆ. ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯ್ತಿದ್ದವರಿಗೆ ಇದು ಬೆಸ್ಟ್ ಟೈಮ್ ಆಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ತೀವ್ರವಾಗಿ ಏರಿಕೆಯಾಗಿದ್ದ ಚಿನ್ನ-ಬೆಳ್ಳಿ ಬೆಲೆಗಳು ಈಗ ಇದ್ದಕ್ಕಿದ್ದಂತೆ ಕಡಿಮೆಯಾಗ್ತಿದೆ. ಅಕ್ಟೋಬರ್ ತಿಂಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ತೀವ್ರವಾಗಿ ಇಳಿದಿದ್ದು, ಆಭರಣಗಳನ್ನ ಖರೀದಿಸಲು ಬಯಸುವವರಿಗೆ ಸಂತಸ ತಂದಿದೆ. ಹೂಡಿಕೆಗಾಗಿ ಚಿನ್ನ ಮತ್ತು ಬೆಳ್ಳಿಯನ್ನ ಖರೀದಿಸಲು ಬಯಸುವವರು ಸಹ ಇಂದಿನ ಬೆಲೆಗಳ ಆಧಾರದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.
bullions.co.in ವರದಿ ಪ್ರಕಾರ, ಅಕ್ಟೋಬರ್ 1 ರಂದು ಮಾರುಕಟ್ಟೆಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,50,500 ರೂ. ಆಗಿತ್ತು. ಆದ್ರೆ ನವೆಂಬರ್ 1 ರ ಹೊತ್ತಿಗೆ ಈ ಬೆಲೆ 1,38,810 ರೂ.ಗೆ ಇಳಿದಿತ್ತು. ಅಂದರೆ ಕೇವಲ ಒಂದು ತಿಂಗಳಲ್ಲಿ 10 ಗ್ರಾಂ ಚಿನ್ನದ ಬೆಲೆ 11,690 ರೂ.ಗಳಷ್ಟು ಕಡಿಮೆಯಾಗಿದೆ.
ಬೆಳ್ಳಿ ಬೆಲೆಯೂ ತೀವ್ರವಾಗಿ ಕುಸಿದಿದೆ. ಕಳೆದ ಕೆಲವು ತಿಂಗಳುಗಳಿಂದ ಬೆಳ್ಳಿ ಬೆಲೆಗಳು ನಿರಂತರವಾಗಿ ಕುಸಿಯುತ್ತಿದ್ದರೂ, ಅಕ್ಟೋಬರ್ ತಿಂಗಳಲ್ಲಿ ಕುಸಿತವು ಹೆಚ್ಚುತಿದೆ. ಅಕ್ಟೋಬರ್ 1 ರಂದು ಹೈದರಾಬಾದ್ ಬುಲಿಯನ್ ಮಾರುಕಟ್ಟೆಯಲ್ಲಿ ಒಂದು ಕಿಲೋ ಬೆಳ್ಳಿಯ ಬೆಲೆ 2,26,520 ರೂ. ಆಗಿತ್ತು. ನವೆಂಬರ್ 1 ರ ಹೊತ್ತಿಗೆ ಅದು 1,79,400 ರೂ.ಗೆ ಇಳಿದಿತ್ತು. ಅಂದರೆ ಒಂದೇ ತಿಂಗಳಲ್ಲಿ ಪ್ರತಿ ಕಿಲೋ ಬೆಳ್ಳಿಗೆ 47,120 ರೂ. ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ ಆಗಿದ್ದು, ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ.

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಪಟ್ಟಿ: *
ಬೆಂಗಳೂರು – 13,937 ರೂಪಾಯಿ
ದೆಹಲಿ – 13,952 ರೂಪಾಯಿ
ಚೆನ್ನೈ- 13,937 ರೂಪಾಯಿ
ಮುಂಬೈ- 13,937 ರೂಪಾಯಿ
ಹೈದರಾಬಾದ್ – 13,937 ರೂಪಾಯಿ
ಅಹಮದಾಬಾದ್ – 13,942 ರೂಪಾಯಿ
ಪುಣೆ – 13,937 ರೂಪಾಯಿ
ಕೋಲ್ಕತ್ತಾ – 13,937 ರೂಪಾಯಿ
ಗಮನಿಸಿ: ಮೇಲೆ ನೀಡಿರುವ ಮೂಲ ದರಗಳಲ್ಲಿ ಜಿಎಸ್ಟಿ ಮತ್ತು ಮೇಕಿಂಗ್ ಚಾರ್ಜಸ್ ಸೇರಿರುವುದಿಲ್ಲ. ಹಾಗಾಗಿ ಚಿನ್ನ ಖರೀದಿಸಿದ ನಂತರ ಅಂತಿಮ ಬಿಲ್ನಲ್ಲಿ ಸ್ವಲ್ಪ ಬದಲಾವಣೆಯಾಗಬಹುದು.
Read More: https://focustvkannada.com/%e0%b2%b0%e0%b2%be%e0%b2%9c%e0%b3%8d%e0%b2%af-%e0%b2%b0%e0%b2%be%e0%b2%9c%e0%b2%95%e0%b2%be%e0%b2%b0%e0%b2%a3%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%95%e0%b3%8b%e0%b2%b2%e0%b2%be%e0%b2%b9/
ಹೆಚ್ಚಿನ ಮಾಹಿತಿಗೆ ನೋಡಿ ಪೋಕಸ್ ಟಿವಿ: https://studio.youtube.com/channel/UC0VkJ7xPDDkPdfnYQz3L-wA
