Headlines

Hiriyur By-Election 2026 Battle: ಹಿರಿಯೂರು ಟಿಕೆಟ್‌ ಜೆಡಿಎಸ್‌ಗೋ? ಬಿಜೆಪಿಗೋ?

ಚಿತ್ರದುರ್ಗದ ಹಿರಿಯೂರು ಉಪಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹಿರಿಯೂರು ಉಪಚುನಾವಣೆಯ ಅಖಾಡ ಮತ್ತೆ ರಂಗೇರಿದ್ದು, ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಪಕ್ಷಗಳ ನಡುವೆ ಟಿಕೆಟ್‌ಗಾಗಿ ಪೈಪೋಟಿ ಶುರುವಾಗಿದೆ. ಹಿರಿಯೂರಿನಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕುಮಾರಸ್ವಾಮಿ ಒಲವು ತೋರಿದ್ದು, ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.



ಈಗಾಗಲೇ ಹಿರಿಯೂರು ಕ್ಷೇತ್ರದ ಮೇಲೆ ಎರಡೂ ಪಕ್ಷಗಳು ಕಣ್ಣಿಟ್ಟಿದ್ದು, ದೋಸ್ತಿ ನಾಯಕರ ನಡುವೆ ಟಿಕೆಟ್‌ ಗೊಂದಲ ಉಂಟಾಗಿದೆಯಾ ಎಂಬ ಚರ್ಚೆ ಶುರುವಾಗಿದೆ. ಬಿಜೆಪಿ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಸಿದ್ಧತೆ ನಡೆಸಿದರೆ, ಜೆಡಿಎಸ್‌ ಕೂಡ ತನ್ನ ಪಟ್ಟು ಸಡಿಲಿಸಲು ಸಿದ್ಧವಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಹಿರಿಯೂರು ಉಪಚುನಾವಣೆಯಲ್ಲಿ ದೋಸ್ತಿ ಪಕ್ಷಗಳ ನಡುವೆ ಫ್ರೆಂಡ್ಲಿ ಫೈಟ್‌ ನಡೆಯುತ್ತಾ ಎಂಬ ಕುತೂಹಲ ಮೂಡಿದೆ. ಈ ಬೆಳವಣಿಗೆ ಕಾಂಗ್ರೆಸ್‌ಗೆ ರಾಜಕೀಯವಾಗಿ ಲಾಭ ತಂದುಕೊಡುತ್ತಾ ಎಂಬ ಪ್ರಶ್ನೆಯೂ ಈಗ ಮುನ್ನೆಲೆಗೆ ಬಂದಿದೆ.


ಈ ಬೈ ಎಲೆಕ್ಷನ್‌ ದೋಸ್ತಿಗಳ ಮಧ್ಯೆ ಮೆಗಾ ಫೈಟ್‌ ನಡೆಯುತ್ತಾ ಅನ್ನುವಂತಹ ಚರ್ಚೆ ಶುರುವಾಗಿದೆ. ಅದರ ಜೊತೆಗೆ ಹಿರಿಯೂರು ಟಿಕೆಟ್‌ ಜೆಡಿಎಸ್‌ಗೋ? ಬಿಜೆಪಿಗೋ? ಅನ್ನುವಂತಹ ಕುತೂಹಲ ಮೂಡಿಸ್ತಾ ಇದೆ. ಇದರ ನಡುವೆ ದಳ ಅಭ್ಯರ್ಥಿ ಕಣಕ್ಕಿಳಿಸಲು ಹೆಚ್‌ಡಿಕೆ ಪ್ಲಾನ್ ಮಾಡ್ತಾ ಇದ್ದು ಹಿರಿಯೂರು ಬಿಟ್ಟುಕೊಡಲು ಬಿಜೆಪಿ ಹಿಂದೇಟು ಹಾಕ್ತಾ ಇದೆ.


ದೋಸ್ತಿಗಳು ಮೊನ್ನೆ ನಡೆದ ಪರಿಷತ್‌ ಚುನಾವಣೆ ಗೆದ್ದಾಯ್ತು ಈಗ ಹಿರಿಯೂರು ಮೇಲೆ ಕಣ್ಣಿಟ್ಟಿದೆ. ಮಾಜಿ ಸಚಿವ ಡಿ. ಸುಧಾಕರ್ ನಿಧನದಿಂದ ತೆರವಾಗಿರೋ ಚಿತ್ರದುರ್ಗದ ಹಿರಿಯೂರು ಕ್ಷೇತ್ರಕ್ಕೆ ಶೀಘ್ರದಲ್ಲೇ ಬೈ ಎಲೆಕ್ಷನ್‌ ದಿನಾಂಕ ಘೋಷಣೆಯಾಗಲಿದೆ. ಆದ್ರೆ ಹಿರಿಯೂರಲ್ಲಿ ನಾವೇ ಸ್ಪರ್ಧಿಸ್ತೀವಿ ಅಂತ ಕುಮಾರಣ್ಣ ಮೈತ್ರಿ ಸಮರ ಸಾರಿದ್ದಾರಂತೆ. ಇದ್ರಿಂದ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ. ಹಾಗಾದ್ರೆ ದೋಸ್ತಿ ಖತಂ ಆಗುತ್ತಾ? ಅನ್ನುವಂತಹ ಚರ್ಚೆಗಳು ಶುರುವಾಗಿದೆ.

ಅದರ ಜೊತೆಗೆ ಹಿರಿಯೂರು ಕ್ಷೇತ್ರದಲ್ಲಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಲು ಒತ್ತಾಯ ಮಾಡಲಾಗ್ತಾ ಇದ್ದು, ಮೊನ್ನೆ ಸತೀಶ್‌ ಜಾರಕಿಹೊಳಿ ನಡೆಸಿದ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಇದರ ಹಿಂದೆ ಪೂರ್ಣೀಮಾ ಶ್ರೀನಿವಾಸ್‌ ಅವರಿಗೆ ಟಿಕೆಟ್‌ ನೀಡಿದ್ರೆ ಅಹಿಂತ ವರ್ಗ ಒಟ್ಟಾಗುತ್ತೆ ಅನ್ನುವಂತಹ ಚರ್ಚೆ ಶುರುವಾಗಿದೆ.


Follow the Focus TV YouTube channel for more news: https://www.youtube.com/@FocusKarnataka

Leave a Reply

Your email address will not be published. Required fields are marked *