Headlines

ಕೃಪಾ ಆಳ್ವಾಗೂ ಕೇರಳದ ಮಹಿಳೆಗೂ ಏನು ಸಂಬಂಧ? ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಕೆಂಡಾಮಂಡಲ

ಬೆಂಗಳೂರು: ಇಂದು ಎಚ್‌.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿರುವ ‘ಸ್ಟಿಂಗ್ ಆಪರೇಷನ್’ ಪ್ರಕರಣದಲ್ಲಿ ತಮ್ಮ ಹೆಸರು ತಳಕು ಹಾಕಲು ಯತ್ನಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರಿಯಾಂಕ್ ಖರ್ಗೆ ಮೇಲೆ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಪ್ರಿಯಾಂಕ್ ಖರ್ಗೆ ಬಳಿ ಟ್ರೇಲರ್ ಇರಬಹುದು, ಆದರೆ ಅಸಲಿ ಪಿಕ್ಚರ್ ನಮ್ಮ ಬಳಿ ಇದೆ , ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಲು ಪೊಲೀಸರು ತರಾತುರಿಯಲ್ಲಿ ತನ್ನ ಮೇಲೆ ಕಟ್ಟುಕಥೆ ಹೆಣೆಯುತ್ತಿದ್ದಾರೆ ಎಂದು ಖರ್ಗೆ ವಿರುದ್ದ ಆರೋಪವನ್ನ ಮಾಡಿದ್ದಾರೆ.

ಬೆಂಗಳೂರಿನ ಜೆ.ಪಿ. ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವರಾದ ಸಾ.ರಾ. ಮಹೇಶ್, ವೆಂಕಟ್ ರಾವ್ ನಾಡಗೌಡ ಹಾಗೂ ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಮಂಜೇಗೌಡ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು. ಈ ವೇಳೆ ಕುಮಾರಸ್ವಾಮಿ ಅವರು ಹಳೆಯ ವಿಡಿಯೋ ತುಣುಕುಗಳು ಮತ್ತು ದಾಖಲೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ತಿರುಗೇಟು ನೀಡಿದರು.



ಪೊಲೀಸ್ ಕಮಿಷನರ್ ಕಚೇರಿ ಅಕ್ಟೋಬರ್ 29ರಂದು ಪ್ರಕಟಣೆ ಹೊರಡಿಸಿ, ಲೈಂಗಿಕ ದೌರ್ಜನ್ಯದ ವಿಚಾರ ಕಟ್ಟುಕಥೆ, ಘಟನೆಯೇ ನಡೆದಿಲ್ಲ ಎಂದು ಹೇಳಿದೆ. ಎಫ್‌ಎಸ್‌ಎಲ್ ವರದಿ ಬರುವ ಮುನ್ನವೇ ಘಟನೆ ನಡೆದಿಲ್ಲ ಎಂದು ಪೊಲೀಸರೇ ತೀರ್ಮಾನಿಸಿರುವುದು ಸಿದ್ದರಾಮಯ್ಯ ಅವರನ್ನು ರಕ್ಷಿಸಿ ಸರ್ಕಾರ ಉಳಿಸಿಕೊಳ್ಳುವ ತಂತ್ರವಲ್ಲದೆ ಮತ್ತೇನು? 2011ರಲ್ಲಿ ಚಿತ್ರೀಕರಣ ಅಂತ ಉಲ್ಲೇಖಿಸಿದ್ದು, 2026ಕ್ಕೆ ಈ ವಿಡಿಯೋ ಯಾಕೆ ಮುನ್ನೆಲೆಗೆ ಬಂತು? 2011ರ ಘಟನೆಗೆ ಕುಮಾರಸ್ವಾಮಿ ಕಾರಣರಲ್ಲ 2023ರ ಘಟನೆಗೂ ಕುಮಾರಸ್ವಾಮಿ ಕಾರಣರಲ್ಲ. ಕೃಪಾ ಆಳ್ವಾ ಜೊತೆ ಸೇರಿ ಮಾಡಿದ್ದು ಯಾರು ಕೇರಳ ಹೆಣ್ಣು ಮಗಳನ್ನ ಕೂರಿಸಿ ಮಾತಾಡಿಸಿದ್ದಾರೆ. ಹೆಣ್ಣು ಮಗಳಿಂದ ಮಾತನಾಡಿಸಿದ ವ್ಯಕ್ತಿಯ ವಿಚಾರಣೆ ಆಗಿದ್ಯಾ? ಕೃಪಾ ಆಳ್ವಾಗೂ ಕೇರಳ ಹೆಣ್ಣುಮಗಳಿಗೂ ಸಂಬಂಧ ಏನು? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್‌ ಬಗ್ಗೆ ಮಾತನಾಡಿದ್ದು “ಮಿಸ್ಟರ್ ಡಿಕೆ ಶಿವಕುಮಾರ್, ನೀವು ಬ್ಲಾಕ್ ಮೇಲ್ ಮಾಡ್ಕೊಂಡೆ ಬಂದಿದ್ದು” ಎಂದು ಡಿಕೆಶಿ ಅವರು ಸದನದಲ್ಲಿ ಈ ಹಿಂದೆ ಮಾತಾಡಿದ್ದನ್ನ ಮೊಬೈಲ್‌ನಲ್ಲಿ ತೋರಿಸಿದರು.

ಹೆಚ್ಚಿನ ಮಾಹಿತಿಗಾಗಿ ನೋಡಿ ಪೋಕಸ್‌ ಟಿವಿ ಕನ್ನಡ: https://www.youtube.com/@FocusKarnataka/

Leave a Reply

Your email address will not be published. Required fields are marked *