ಬೆಂಗಳೂರು (ನ.20): ರಾಜಧಾನಿಯಲ್ಲಿ ಚಿನ್ನದ ದರ ಸತತ ಎರಡನೇ ದಿನವೂ ಗಮನಾರ್ಹವಾಗಿ ಇಳಿಕೆ ಕಂಡಿದ್ದು, ಆಭರಣ ಖರೀದಿಸಲು ಕಾಯುತ್ತಿದ್ದ ಗ್ರಾಹಕರಿಗೆ ಸ್ವಲ್ಪ ನಿರಾಳತೆ ಸಿಕ್ಕಿದೆ. ನವೆಂಬರ್ 20ರ ಶುಕ್ರವಾರ 24 ಕ್ಯಾರಟ್ ಹಾಗೂ 22 ಕ್ಯಾರಟ್ ಎರಡೂ ಚಿನ್ನದ ದರಗಳಲ್ಲಿ ದೊಡ್ಡ ಇಳಿಕೆ ದಾಖಲಾಗಿದೆ. ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯೂ ಕಡಿಮೆಯಾಗಿದೆ.
24 ಕ್ಯಾರಟ್ ಚಿನ್ನ
ಗುಡ್‌ರಿಟರ್ನ್ಸ್ ಪ್ರಕಟಿಸಿದ ಬೆಂಗಳೂರಿನ ದರಗಳ ಪ್ರಕಾರ, ನವೆಂಬರ್ 19ರಂದು ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 257 ರೂಪಾಯಿ ಕಡಿಮೆಯಾಗಿತ್ತು. ನವೆಂಬರ್ 20ರಂದು ಪ್ರತಿ ಗ್ರಾಂಗೆ ಮತ್ತೆ 512 ರೂಪಾಯಿ ಇಳಿದು, ದರ 12,557 ರೂಪಾಯಿಗೆ ತಲುಪಿದೆ. 10 ಗ್ರಾಂ ಚಿನ್ನದ ಬೆಲೆ ಒಂದೇ ದಿನದಲ್ಲಿ 5,120 ರೂಪಾಯಿ ಇಳಿದು, ಈಗ 1,25,570 ರೂಪಾಯಿ ಆಗಿದೆ.
22 ಕ್ಯಾರಟ್ ಚಿನ್ನ
ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸುವ 22 ಕ್ಯಾರಟ್ ಚಿನ್ನದ ದರವೂ ಗಣನೀಯವಾಗಿ ಕುಸಿದಿದೆ. ನವೆಂಬರ್ 19ರಂದು ಪ್ರತಿ ಗ್ರಾಂಗೆ 235 ರೂಪಾಯಿ ಇಳಿಕೆಯಾಗಿದ್ದರೆ, ನವೆಂಬರ್ 20ರಂದು ಮತ್ತೆ 470 ರೂಪಾಯಿ ಕಡಿಮೆಯಾಗಿ ಒಂದು ಗ್ರಾಂ ಬೆಲೆ 11,510 ರೂಪಾಯಿ ಆಗಿದೆ. 10 ಗ್ರಾಂಗೆ 4,700 ರೂಪಾಯಿ ಇಳಿಕೆಯಾಗಿ, ಪ್ರಸ್ತುತ ದರ 1,15,100 ರೂಪಾಯಿಗೆ ತಲುಪಿದೆ.
ಬೆಂಗಳೂರಿನಲ್ಲಿ ಚಿನ್ನದ ದರ (10 ಗ್ರಾಂಗೆ):
ಬೆಂಗಳೂರಿನಲ್ಲಿ ಚಿನ್ನದ ದರ (10 ಗ್ರಾಂಗೆ):
- 18 ಕ್ಯಾರೆಟ್: ₹94,180
22 ಕ್ಯಾರೆಟ್: ₹1,15,100
ಚೆನ್ನೈ : 24K – ₹1,25,570
ದೆಹಲಿ : 24K – ₹1,30,830
ಜೈಪುರ : 24K – ₹1,30,830
ಮುಂಬೈ : 24K – ₹1,25,570
ಕೋಲ್ಕತ್ತಾ: 24K – ₹1,25,570
ಹೈದರಾಬಾದ್: 24K – ₹1,33,480
ಚಿನ್ನದ ಬೆಲೆ ಕುಸಿತ (HEADER)
ಸೆಪ್ಟೆಂಬರ್
ಚಿನ್ನ 1 ಗ್ರಾಂ 1 0 ಗ್ರಾಂ
24 ಕ್ಯಾರೆಟ್ 15693 1,56,930
22 ಕ್ಯಾರೆಟ್ 14385 1,43,850
ಅಕ್ಟೋಬರ್
ಚಿನ್ನ 1 ಗ್ರಾಂ 10 ಗ್ರಾಂ
24 ಕ್ಯಾರೆಟ್ 15,016 1,50,168
22 ಕ್ಯಾರೆಟ್ 13,755 1,37,554
ನವೆಂಬರ್
ಚಿನ್ನ 1 ಗ್ರಾಂ 10 ಗ್ರಾಂ
24 ಕ್ಯಾರೆಟ್ 12,557 ₹1,25,570
22 ಕ್ಯಾರೆಟ್ 11,510 ₹1,15,100
ಚಿನ್ನ ಖರೀದಿಸಲು ಯೋಜಿಸುತ್ತಿರುವವರು ಖರೀದಿಗೂ ಮುನ್ನ ಸ್ಥಳೀಯ ಆಭರಣ ಮಳಿಗೆಗಳಲ್ಲಿ ಅಂದಿನ ದರವನ್ನು ಖಚಿತಪಡಿಸಿಕೊಳ್ಳುವುದು ಉತ್ತಮ. ಪ್ರಕಟಿಸಿರುವ ದರಗಳು ಸೂಚಕ ದರಗಳಾಗಿದ್ದು, ಜಿಎಸ್‌ಟಿ, ಟಿಸಿಎಸ್, ಮೇಕಿಂಗ್ ಚಾರ್ಜ್ ಹಾಗೂ ಇತರ ಶುಲ್ಕಗಳು ಇದರಲ್ಲಿ ಸೇರಿರುವುದಿಲ್ಲ. ಆಭರಣದ ಅಂತಿಮ ಬೆಲೆ ಈ ಶುಲ್ಕಗಳ ಆಧಾರದ ಮೇಲೆ ಬದಲಾಗಬಹುದು.
