ಭಾರತೀಯ ಮನೆಗಳಲ್ಲಿ ಮನಿಪ್ಲಾಂಟ್ನ್ನು ಮನೆಯಲ್ಲಿ ಬೆಳೆಸೋದನ್ನು ಶುಭಕರ ಎಂದು ಪರಿಗಣಿಸಲಾಗುತ್ತದೆ. ಈ ವಾಸ್ತುಶಾಸ್ತ್ರದಲ್ಲಿ ಉಲ್ಲೇಖವಿದ್ದು, ಜನರು ಮನಿಪ್ಲಾಂಟ್ ಬೆಳೆಸಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಆದರೆ ಕೆಲವೊಮ್ಮೆ ಎಷ್ಟೇ ಆರೈಕೆ ಮಾಡಿದರೂ ಕೂಡ ನಾವು ಮಾಡುವ ಕೆಲವು ತಪ್ಪುಗಳಿಂದ ಗಿಡ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಗಿಡ ಹಾಳಾಗದಂತೆ ಮುನ್ನೆಚ್ಚರಿಗೆ ಇರಲು ಈ ಟಿಪ್ಸ್ಗಳನ್ನ ಫಾಲೋವ್ ಮಾಡಿ ನಂತರ ಮ್ಯಾಜಿಕ್ ನೋಡಿ.

1. ಸರಿಯಾದ ಸೂರ್ಯನ ಬೆಳಕು: ಮನಿ ಪ್ಲಾಂಟ್ಗೆ ನೇರವಾದ ಬಿಸಿಲು ಬೀಳಬಾರದು. ಕಿಟಕಿಯ ಬಳಿ ಅಥವಾ ಮನೆಯೊಳಗೆ ಸಾಧಾರಣ ಬೆಳಕು ಇರುವ ಜಾಗದಲ್ಲಿ ಇಟ್ಟರೆ ಅದು ಚೆನ್ನಾಗಿ ಬೆಳೆಯುತ್ತದೆ.
2.ನೀರು ಹಾಕುವ ವಿಧಾನ: ಕುಂಡದಲ್ಲಿನ ಮಣ್ಣು ಸಂಪೂರ್ಣವಾಗಿ ಒಣಗಿದ ನಂತರವಷ್ಟೇ ನೀರು ಹಾಕಿ. ಅತಿಯಾಗಿ ನೀರು ಹಾಕುವುದರಿಂದ ಬೇರುಗಳು ಕೊಳೆತು ಗಿಡ ಒಣಗಲಾರಂಭಿಸುತ್ತದೆ.

3.ಒಣಗಿದ ಎಲೆಗಳ ವಿಲೇವಾರಿ: ಗಿಡದಲ್ಲಿ ಹಳದಿ ಅಥವಾ ಒಣಗಿದ ಎಲೆಗಳು ಕಂಡುಬಂದರೆ ತಕ್ಷಣ ಅವುಗಳನ್ನು ಕತ್ತರಿಸಿ ತೆಗೆಯಿರಿ. ಇಲ್ಲದಿದ್ದರೆ ಅವು ಗಿಡದ ಉಳಿದ ಭಾಗದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. ಇದರಿಂದ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ.
4.ನೈಸರ್ಗಿಕ ಗೊಬ್ಬರ: ತಿಂಗಳಿಗೊಮ್ಮೆ ಬಳಸಿದ ಚಹಾ ಪುಡಿ ಅಥವಾ ಒಣಗಿದ ಸಗಣಿ ಗೊಬ್ಬರವನ್ನು ಮಣ್ಣಿಗೆ ಸೇರಿಸುವುದರಿಂದ ಗಿಡಕ್ಕೆ ಅಗತ್ಯವಿರುವ ಸಾರಜನಕ (Nitrogen) ದೊರೆತು ಎಲೆಗಳು ಹಸಿರಾಗುತ್ತವೆ. ಚೆನ್ನಾಗಿ ಬೆಳೆಯಲು ಸಹಕಾರಿಯಾಗುತ್ತದೆ.

ಗಾರ್ಡನಿಂಗ್ ತಜ್ಞರ ಪ್ರಕಾರ, ಮನಿ ಪ್ಲಾಂಟ್ಗೆ ಹೆಚ್ಚು ಸಮಯ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮಾಸ್ ಸ್ಟಿಕ್ ಉತ್ತಮ. ಮಾಸ್ ಸ್ಟಿಕ್ ಬೇಗನೆ ಒಣಗಿದರೆ, ಏರಿಯಲ್ ರೂಟ್ಸ್ಗೆ ಪೂರ್ಣ ಪ್ರಮಾಣದ ತೇವಾಂಶ ಸಿಗುವುದಿಲ್ಲ ಮತ್ತು ಎಲೆಗಳು ಚಿಕ್ಕದಾಗಿಯೇ ಉಳಿಯಬಹುದು. ಬಯಸಿದರೆ ಮನೆಯಲ್ಲಿಯೇ ಮಾಸ್ ಸ್ಟಿಕ್ ತಯಾರಿಸಿಕೊಳ್ಳಬಹುದು.
ಮನಿ ಪ್ಲಾಂಟ್ಗೆ ತೇವಾಂಶ (Humidity) ಎಂದರೆ ತುಂಬಾ ಇಷ್ಟ. ಆದ್ದರಿಂದ ವಾರದಲ್ಲಿ ಒಂದೆರಡು ಬಾರಿ ಮಾತ್ರವಲ್ಲದೆ, ಹವಾಮಾನಕ್ಕೆ ಅನುಗುಣವಾಗಿ ಅದರ ಎಲೆಗಳು ಮತ್ತು ಏರಿಯಲ್ ರೂಟ್ಸ್ಗೆ ಲಘುವಾಗಿ ನೀರನ್ನು ಸ್ಪ್ರೇ ಮಾಡುವುದು ಪ್ರಯೋಜನಕಾರಿ. ಇದರಿಂದ ಗಿಡಕ್ಕೆ ತೇವಾಂಶ ಸಿಗುತ್ತಿರುತ್ತದೆ ಮತ್ತು ಬೆಳವಣಿಗೆ ಉತ್ತಮವಾಗುತ್ತದೆ.
ಹೆಚ್ಚಿನ ಮಾಹಿತಿಗೆ ಫಾಲೋವ್ ಮಾಡಿ ಫೋಕಸ್ ಟಿವಿ ಕನ್ನಡ
Read more: https://focustvkannada.com/
