ತಲೆಬಾಗದ ಸಹೋದರರು ಡಿಕೆಗೆ ಬಳ್ಳಾರಿಯಲ್ಲೂ ಹಿನ್ನಡೆ.! | Dominance of the Reddy Brothers.
ಇದು ಇಬ್ಬರು ಮದಗಜಗಳ ಮಹಾ ಕಾಳಗ. ಇಬ್ಬರಲ್ಲಿ ಯಾರೊಬ್ಬರೂ ಕಡಿಮೆ ಅಲ್ಲ. ಇಬ್ಬರೂ ಸಮಬಲದ ಪರಾಕ್ರಮಿಗಳು. ಒಬ್ಬರು ಸೇರು ಅಂದ್ರೆ ಮತ್ತೊಬ್ಬರು ಸವ್ವಾಸೇರು ಅಂತಾರೆ. ಇದು ಒಂದೆರಡು ವರ್ಷದ ಕಾಳಗ ಅಲ್ವೇ ಅಲ್ಲ. ದಶಕಗಳದ್ದು.ನಾನಾ ನೀನಾ ಅಂತಾ ಪ್ರತಿಷ್ಠೆಯ ಸಮರಕ್ಕಿಳಿಯುತ್ತಾ ಬಂದಿದ್ದಾರೆ. ಇದು ಅವರ ಬೆಂಬಲಿಗರಲ್ಲೂ ಜಿದ್ದು ಬೆಳೆಯುವಂತೆ ಮಾಡಿದೆ. ಇಷ್ಟಕ್ಕೂ ನಾವು ಹೇಳುತ್ತಿರುವುದು ಬೇರೆ ಯಾರ ಸ್ಟೋರಿನೂ ಅಲ್ಲ. ಇಟ್ ಈಸ್ ನನ್ ಅದರ್ ದ್ಯಾನ್ ಡಿಕೆ ಶಿವಕುಮಾರ್ & ಜನಾರ್ದನರೆಡ್ಡಿ. ಇವರಿಬ್ಬರೂ ದಶಕಗಳಿಂದ ಪರಸ್ಪರ ಜಿದ್ದಿಗೆ ಬಿದ್ದಿದ್ದಾರೆ. ನಾನಾ ನೀನಾ ಅಂತಾ ರಾಜಕೀಯ ಬದ್ಧವೈರಿಗಳಾಗಿದ್ದಾರೆ. ಇದು ಕರ್ನಾಟಕದ ಸಾಕಷ್ಟು ಜನರಿಗೆ ತಿಳಿಯದ ವಿಷವೇನಲ್ಲ,
ALSO READ: Ballari Banner War; 26 Accused have been Arrested | ರೆಡ್ಡಿಗಳ ರಕ್ತ ಚರಿತ್ರೆ, 26 ಮಂದಿ ಅಂದರ್ !!
