Why the Protest Against Prakash Rai? | ಪ್ರಕಾಶ್ ರೈ ವಿರುದ್ಧ ಉಗ್ರ ಹೋರಾಟ.!?
ಬೆಂಗಳೂರಿನ 17ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆರಂಭದಲ್ಲೇ ವಿಘ್ನಗಳು ಎದುರಾಗಿವೆ. ಈ ಬಾರಿಯ ಚಲನಚಿತ್ರೋತ್ಸವಕ್ಕೆ ರಾಯಭಾರಿಯನ್ನಾಗಿ ಹಿರಿಯ ನಟ ಪ್ರಕಾಶ್ ರಾಜ್ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಆದ್ರೆ, ರಾಜ್ಯ ಸರ್ಕಾರದ ಈ ನಡೆಯನ್ನು ಬಿಜೆಪಿ ವಿರೋಧಿಸಿದ್ದು, ಈ ಕೂಡಲೇ ರಾಯಭಾರಿಯನ್ನು ಬದಲಿಸಿ ಎಂದು ಆಗ್ರಹಿಸಿದೆ.
ಮುಂದಿನ ವರ್ಷ ನಡೆಯಲಿರುವ 17ನೇ ಆವೃತ್ತಿಯ ಅಂತಾರಾಷ್ಟ್ರೋಯ ಚಲನಚಿತ್ರೋತ್ಸವಕ್ಕೆ ಪಂಚ ಭಾಷಾ ನಟ ಪ್ರಕಾಶ್ ರಾಜ್ ರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಇದಕ್ಕೆ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸಿದೆ. ಸಿನಿಮೋತ್ಸವಕ್ಕೆ ಪ್ರಕಾಶ್ ರಾಜ್ ಬೇಡ. ಕೂಡಲೇ ಬದಲಿಸಿ ಬೇರೆಯವರನ್ನು ಆಯ್ಕೆ ಮಾಡಿ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಈ ಮೂಲಕ ಜನವರಿ 29 ರಿಂದ ಫೆಬ್ರವರಿ 6ರವರಗೆ ನಡೆಯಲಿರುವ 17ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ.
Why Did Bengaluru Film Fest Pick Prakash Raj as Its Brand Face? | ಸಿನಿಮೋತ್ಸವಕ್ಕೆ ಪ್ರಕಾಶ್ ರಾಜ್ ಯಾಕೆ? ರಾಯಭಾರಿ ಬದಲಿಗೆ ಬಿಜೆಪಿ ಎಚ್ಚರಿಕೆ…!
ಸದಾ ಕನ್ನಡದ ವಿರೋಧ ಮಾಡುವವರು, ಎಡಪಂಥಿಯರನ್ನೇ ಕಾಂಗ್ರೆಸ್ ಸರ್ಕಾರ ಪ್ರೊತ್ಸಾಹಿಸುವುದು. ಪ್ರಕಾಶ್ ರಾಜ್ ಕಾಂಟ್ರವರ್ಶಿಯಲ್ ಕ್ಯಾರೆಕ್ಟರ್. ನಟ ಪ್ರಕಾಶ್ ರಾಜ್ ಕನ್ನಡದವರೇ ಆಗಿದ್ರೂ, ಕನ್ನಡ ಪರ ಕೆಲಸ ಮಾಡಿಲ್ಲ. ಕನ್ನಡದ ನೆಲ, ಜಲ, ಭಾಷೆ ವಿಚಾರದಲ್ಲಿ ವಿರೋಧ ಮಾಡುತ್ತಾರೆ. ಕನ್ನಡದ ಅಸ್ಮಿತೆ ಪರ ಎಂದೂ ಕೆಲಸ ಮಾಡಿಲ್ಲ. ಈ ಕೂಡಲೇ ಚಲನಚಿತ್ರೋತ್ಸವದ ರಾಯಭಾರಿಯನ್ನು ಬದಲಿಸಿ ಎಂದು ಚಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
ಎಡಪಂಥೀಯ ಚಟುವಟಿಕೆಯಲ್ಲಿ ಸಕ್ರಿಯವಾಗಿರೋರಿಗೆ ಕಾಂಗ್ರಸ್ ಸರ್ಕಾರ ಮಾನ್ಯತೆ ನೀಡುತ್ತದೆ. ಇದು ಕಾಂಗ್ರೆಸ್ ಪಕ್ಷದ ತಪ್ಪು ನಡೆ. ಈ ನಿಲುವನ್ನು ಸರ್ಕಾರ ಬದಲಿಸಿಕೊಳ್ಳಬೇಕು ಎಂದು ಚಲವಾದಿ ಅವರು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ಆದರೆ, ಇದೇ ಬಿಜೆಪಿ ಸರ್ಕಾರ 2019-2023ರ ಅವಧಿಯಲ್ಲಿ ಕನ್ನಡ ಚಲನಚಿತ್ರ ಅಕಾಡೆಮಿಗೆ ಹಿರಿಯ ನಟ ಸುನಿಲ್ ಪುರಾಣಿಕ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದಾಗ ಕಾಂಗ್ರೆಸ್ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ, 2021ರ ಚಲನಚಿತ್ರೋತ್ಸವದಲ್ಲಿ ಸುಮಾರು 4.50 ಕೋಟಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪ ಮಾಡಲಾಗಿತ್ತು.
ಸುನಿಲ್ ಪುರಾಣಿಕ್ ಬಲಪಂಥಿಯರಾಗಿದ್ದು, ಅವರನ್ನು ಕನ್ನಡ ಚಲನಚಿತ್ರ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು. ಇದೀಗ ಕಾಂಗ್ರೆಸ್ ಸರ್ಕಾರದ ನಡೆಯನ್ನು ಬಿಜೆಪಿ ವಿರೋಧಿಸಿದೆ. ಈ ಬಲ, ಎಡ ಪಂಥಿಯ ಕಿತ್ತಾಟದ ನಡುವೆ ಕನ್ನಡ ಪ್ರೇಮಿಗಳಿಗೆ ಚಲನಚಿತ್ರೋತ್ಸವದಲ್ಲಿ ಅನ್ಯಾಯವಾಗದಿರಲಿ ಎಂಬುದೇ ಫೋಕಸ್ ಟಿವಿಯ ಆಶಯವಾಗಿದೆ.
Also Read : Thackeray Brothers Unity | Maharastra Story | ಕೆಟ್ಟ ಮೇಲೆ ಬಂತು ಬುದ್ಧಿ, ಠಾಕ್ರೆ ಸಹೋದರರ ಒಗ್ಗಟ್ಟು…!
