Story of a Stranger Professor; Daytime lesson-Nighttime Theft Job | ಹಗಲು ಪಾಠ – ರಾತ್ರಿ ಕಳ್ಳತನ, ಪ್ರೊ.ಮೇಡಂರ ವಿಚಿತ್ರ ಕಹಾನಿ..!
ಆಕೆ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್… ವಿಕೇಂಡ್ ನಲ್ಲಿ ಮದುವೆ ಚೌಟ್ರಿಗಳಲ್ಲಿ ಕಳ್ಳಿ.. ಬೆಂಗಳೂರಿನಲ್ಲಿ ಹೀಗೊಬ್ಳು ಪ್ರೊಫೆಸರ್ ಕಂ ಚಿನ್ನಾಭರಣ ಕಳ್ಳಿ, ಖಾಕಿ ಬಲೆಗೆ ಬಿದ್ದಿದ್ದಾಳೆ.
ಮಲೆನಾಡು ಶಿವಮೊಗ್ಗ ಮೂಲದ ಕನ್ನಡ ಪ್ರೊಫೆಸರ್ ರೇವತಿ.. ಹಾಲಿ ಬೆಂಗಳೂರಿನ ಕೆ.ಆರ್. ಪುರಂ ನಿವಾಸಿ, ಬೆಳ್ಳಂದೂರು ಬಳಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಪಾಠ ಮಾಡೋ ಪ್ರೊಫೆಸರ್. ಕಾಲೇಜಿನಲ್ಲಿ 6 ದಿಗಳ ಕಾಲ ಪಾಠ ಮಾಡುವ ಕಾಯಕ. ವಿಕೇಂಡ್ ನಲ್ಲಿ ಮದುವೆ ಮನೆಗಳಿಗೆ ತೆರಳಿ ಕಳ್ಳತನ ಮಾಡುವಪ್ರವೃತ್ತಿ. ನಗರದ ಚೌಟ್ರಿಗಳಲ್ಲಿ ಯಾವುದಾದ್ರೂ ಮದುವೆ ನಡೆಯುತ್ತಿದ್ರೆ ಸಾಕು, ಸಂಬಂಧಿಕರ ಸೋಗಿನಲ್ಲಿ ಎಂಟ್ರಿ ನೀಡುವ ರೇವತಿ, ಸಂಶಯ ಬಾರದಂತೆ ನಗ-ನಾಣ್ಯ ದೋಚಿ ಎಸ್ಕೇಪ್ ಆಗ್ತಾಳೆ. ಹೀಗೆ ಎಸ್ಕೇಪ್ ಆಗ್ತಿದ್ದ ಕಳ್ಳಿ ಕೊನೆಗೂ ಬೆಂಗಳೂರಿನ ಬಸವನಗುಡಿ ಪೊಲೀಸ್ರ ಬಲೆಗೆ ಬಿದ್ದಿದ್ದಾಳೆ.ಆರೋಪಿಯಿಂದ ಪೊಲೀಸ್ರು 262 ಗ್ರಾಂ ಚಿನ್ನಾಭರಣವಶಪಡಿಸಿಕೊಂಡಿದ್ದಾರೆ.
ಮದುವೆ ಮನೆಯಲ್ಲಿಸ್ನೇಹದ ಮಾತುಗಳನ್ನಾಡಿ ಸಂದೇಹ ಬಾರದಂತೆ ನಡೆದುಕೊಂಡು, ಹಣ, ಚಿನ್ನಾಭರಣ ಇಡುವ ಸ್ಥಳ ಪತ್ತೆಹಚ್ಚುತ್ತಾಳೆ. ಬಳಿಕ ತನ್ನ ಕೈಚಳಕ ತೋರಿ ಆರೋಪಿ ಪರಾರಿಯಾಗ್ತಾಳೆ. ಅಲ್ಲೇ ಕಳ್ಳತನ, ಅಲ್ಲೇ ಊಟಮಾಡಿರೇವತಿ ಆರಾಮಾಗಿ ಹೊರಬರುತ್ತಾಳೆ. ಕಳೆದ ನವೆಂಬರ್ 25ರಂದು ಬಸವನಗುಡಿಯ ದ್ವಾರಕನಾಥ್ ಕಲ್ಯಾಣ ಮಂಟಪದಲ್ಲಿರೇವತಿ ಇದೇ ರೀತಿಯ ಕೃತ್ಯ ಎಸಗಿದ್ದಳು. ದೂರು ಬಂದ ಹಿನ್ನಲೆಯಲ್ಲಿ ಬಸವನಗುಡಿ ಪೊಲೀಸ್ರು, ಸಿಸಿಟಿವಿ ದೃಶ್ಯಗಳ್ನಾಧರಿಸಿ ಸಾಕ್ಷ್ಯಗಳನ್ನಾಧರಿಸಿ ರೇವತಿಯನ್ನು ಬಂಧಿಸಿದ್ದಾರೆ.
ಬೆಂಗಳೂರು ಮಾತ್ರವಲ್ಲದೇ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ರೇವತಿ ಕಳ್ಳತನ ಮಾಡಿದ್ದಾಳೆ. ಒಟ್ಟು ಮೂರು ಕಳ್ಳತನ ಪ್ರಕರಣಗಳಲ್ಲಿ ಆಕೆ ಭಾಗಿಯಾಗಿದ್ದಾಳೆ. ಆರೋಪಿಯಿಂದ 262 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಕಾಲೇಜಿನಪ್ರೊಫೆಸರ್ ಕೃತ್ಯದಿಂದ ನಾಗರಿಕ ಸಮಾಜದಲ್ಲಿ ಅಘಾತ ಮೂಡಿಸಿದೆ. ಪೊಲೀಸ್ರು ಈ ರೀತಿಯ ಕಳ್ಳತನಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಸಲಹೆ ನೀಡಿದ್ದಾರೆ.
Also Read : ಜ್ಯೋತಿಷಿ ಸ್ಫೋಟಕ ಭವಿಷ್ಯ ಡಿಕೆ ಸಿಎಂ, ಸತೀಶ್ ಅಧ್ಯಕ್ಷ | Astrology makes a shocking comment on KA politics…!
=============
