Reckless Wheeling: BJP Legislator Draws Criticism | ಆಪಾಯಕಾರಿ ವೀಲಿಂಗ್… ಬಿಜೆಪಿ ಶಾಸಕರ ವೀರಾವೇಶ.

ನಗರಗಳಲ್ಲಿ ಪುಂಡರ ಬೈಕ್ ವೀಲ್ಹಿಂಗ್ ವ್ಯಾಪಕವಾಗಿದೆ.  ಅದಕ್ಕೆ ಪುಷ್ಟಿ ನೀಡುವಂತೆ ಬೈಕ್ ಕಂಪನಿ ಜಾಹೀರಾತು ಪೂರಕವಾಗಿದ್ದು ಎಲ್ಲಡೆ ರಾರಾಜಿಸುತ್ತಿದೆ.  ಈ ಜಾಹೀರಾತು ಇದೀಗ ಜನಪ್ರತಿನಿಧಿಗಳ ಕಣ್ಣು ಕೆಂಪಗಾಗಿಸಿದೆ.

ಬೈಕ್ ವೀಲ್ಹಿಂಗ್ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ವೀಲ್ಹಿಂಗ್ ಮಾಡುವ ಮೂಲಕ ಯುವಕರು ಜೀವ-ಜೀವನ ಕಳೆದುಕೊಳ್ಳುತ್ತಿದ್ದಾರೆ.  ಪ್ರಮುಖವಾಗಿ ಯುವ ಸಮುದಾಯ ವೀಲ್ಲಿಂಗ್ ನಡೆಸುವ ಮೂಲಕ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿರುವುದಕ್ಕೆ ವ್ಯಾಪಕ  ಆಕ್ರೋಶ ವ್ಯಕ್ತವಾಗಿದೆ.

ಆಪಾಯಕಾರಿ ಹಾಗೂ ಪ್ರಚೋದನಾಕಾರಿ ವೀಲ್ಹಿಂಗ್ ಜಾಹೀರಾತು ನೀಡುವ ಕಂಪನಿಗಳ ವಿರುದ್ಧ ಬಿಜೆಪಿ ಶಾಸಕ ಸುರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ‘ಜಗ ನೋಡುತ್ತೆ ನೀನು ತೋರ್ಸು’ ಮತ್ತು ‘LONG LIVE THE THRILL’ ಎಂಬ ಶೀರ್ಷಿಕೆಯಡಿ  ವೀಲ್ಹಿಂಗ್ ಮಾಡುತ್ತಿರುವ ಪಲ್ಸರ್ ಬೈಕ್ ಪೋಟೋ ಹಾಕಿ ಬಜಾಜ್ ಕಂಪನಿ ನೀಡಿರುವ ಜಾಹೀರಾತು ಉಲ್ಲೇಖಿಸಿ ಶಾಸಕ ಸುರೇಶ್ ಕುಮಾರ್ ಆ ಕಂಪನಿ ವಿರುದ್ದ ಕ್ರಮಕ್ಕೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ದ್ವಿಚಕ್ರ ವಾಹನಗಳಲ್ಲಿ  ಯುವಕರು ವೀಲ್ಹಿಂಗ್ ಮಾಡೋದು ಒಂದು ಪಿಡುಗಾಗಿದೆ.  ಪೊಲೀಸ್ರ ಅಂಕಿ-ಅಂಶಗಳ ಪ್ರಕಾರ ವೀಲ್ಹಿಂಗ್ ನಿಂದ ಸಂಭವಿಸುತ್ತರುವ ಅಪಘಾತಗಳ ಸಂಖ್ಯೆ ಹಾಗೂ ಪರಿಣಾಮ ಎರಡು ಅಪಾಯಕಾರಿಯಾಗಿದೆ. ಹೀಗಿರುವಾಗ ಬಜಾಜ್ ಮೋಟಾರು ಕಂಪನಿ, ಪಲ್ಸರ್ ವಾಹನ ಜಾಹೀರಾತಿಗಾಗಿ ಈ ರೀತಿಯ ಜಾಹೀರಾತು ನೀಡೋದು ಎಷ್ಟು ಸರಿ ಎಂದು ಶಾಸಕ ಸುರೇಶ್ ಕುಮಾರ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಒಟ್ಟಾರೆ, ವೀಲ್ಹಿಂಗ್ ಬಗ್ಗೆ ಜನಪ್ರತಿನಿಧಿಯೊಬ್ಬರು ಎತ್ತಿರುವ ದನಿ ನಿಜಕ್ಕೂ ಶ್ಲಾಘನೀಯ. ಅದ್ರೆ ಸರ್ಕಾರದ ಕ್ರಮವೇನು ಎಂಬುದು ಮಾತ್ರ ಕುತೂಹಲ ಕೆರಳಿಸಿದೆ.

============

Leave a Reply

Your email address will not be published. Required fields are marked *