New Year Celebration Guidlines | ಹೊಸ ವರ್ಷಕ್ಕೆ ಕಠಿಣ ರೂಲ್ಸ್ ಕಾನೂನು ಮೀರಿದ್ರೆ ದಂಡಾಸ್ತ್ರ…!
ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಹೊಸ ವರ್ಷಾಚರಣೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ. ಪೊಲೀಸ್ರ ಮಾರ್ಗಸೂಚಿ ಏನು ನೋಡೋಣ ಬನ್ನಿ…..
ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಬಾಕಿ ಇದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಬೆಂಗಳೂರು ನಗರ ಪೊಲೀಸ್ರು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷಾಚರಣೆಗೆ 10 ಲಕ್ಷ ಮಂದಿ ಪಾಲ್ಗೊಳ್ಳುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ನಗರದ ಪ್ರಮುಖ ಸ್ಥಳಗಳಾದ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಎಂ.ಜಿ.ರೋಡ್, ಇಂದಿರಾ ನಗರ, ನೀಲಾದ್ರಿ ರೋಡ್, ಹೆಚ್ಎಸ್ಆರ್ ಲೇಔಟ್, ಕೋರಮಂಗಲ, ಬಾಣಸವಾಡಿ ಭಾಗದಲ್ಲಿ ಲಕ್ಷ ಲಕ್ಷ ಮಂದಿ ಸೇರಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಈ ಹಿನ್ನೆಲೆ ಪೊಲೀಸರು ಮುಂಜಾಗೃತ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ದೊಡ್ಡಮಟ್ಟದಲ್ಲಿ ಭದ್ರತೆ ಕೈಗೊಳ್ಳಲಾಗಿದೆ.
ಶಾಂತಿ ಸುವ್ಯವಸ್ಥೆ ಕಾಪಾಡಲು, ಸಾರ್ವಜನಿಕ ಶಾಂತಿಗೆ ಧಕ್ಕೆಯಾಗುವ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ. ಅಕ್ರಮ ಚಟುವಟಿಕೆ, ಗಲಾಟೆ, ಗೂಂಡಾಗಿರಿ, ಮದ್ಯಪಾನ ಮಾಡಿ, ಸಾರ್ವಜನಿಕವಾಗಿ ಅಶಾಂತಿ ಸೃಷ್ಟಿಸುವವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ವರ್ತನೆ, ಶಬ್ದ ಮಾಲಿನ್ಯ, ಅಪಾಯಕಾರಿ ಸ್ಟಂಟ್, ಅಕ್ರಮ ಪಾರ್ಟಿ ಮಾಡುವುದಕ್ಕೆ ನಿರ್ಬಂಧವಿಧಿಸಲಾಗಿದೆ. ಹೋಟೆಲ್, ಪಬ್, ಕ್ಲಬ್, ರೆಸಾರ್ಟ್ಗಳಿಗೆ ನಿಗದಿತ ಸಮಯದ ಮಿತಿ ವಿಧಿಸಲಾಗಿದೆ.ಡಿಜೆ, ಲೌಡ್ಸ್ಪೀಕರ್ ಬಳಕೆಗೆ ಅನುಮತಿ ಹಾಗೂ ಸಮಯ ಮಿತಿ ಕಡ್ಡಾಯವಾಗಿದೆ.
ಮದ್ಯಪಾನ ಮಾಡಿ, ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ದಂಡ ಹಾಗೂ ಪ್ರಕರಣ ದಾಖಲು. ಮಹಿಳೆಯರ ಸುರಕ್ಷತೆಗೆ ವಿಶೇಷ ಗಮನ ನೀಡಿ ಪೆಟ್ರೋಲಿಂಗ್ ಹೆಚ್ಚಿಸಲಾಗಿದೆ. CCTV, ಡ್ರೋನ್, ಇತರೆ ತಾಂತ್ರಿಕ ಸಾಧನಗಳ ಮೂಲಕ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ. ಅಹಿತಕರ ಘಟನೆ ನಡೆದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಹೊಸ ವರ್ಷದ ಭದ್ರತೆಗಾಗಿ 20ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ಸಂಭ್ರಮಾಚರಣೆ ಬಳಿಕ ಕುಡಿದು ವಾಹನ ಚಾಲನೆ ಹಾಗೂ ವ್ಲೀಲಿಂಗ್ ಮಾಡುತ್ತಾರೆ. ಕುಡಿದ ಅಮಲಿನಲ್ಲಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸಿ, ಸಾವು ನೋವುಗಳಾಗುತ್ತವೆ. ಹೀಗಾಗಿ 2025 ಡಿ.31ರ ರಾತ್ರಿ 11 ಗಂಟೆಯಿಂದ 2026 ಜ.1ರ ಬೆಳಿಗ್ಗೆ 6ರವರೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮೇಲ್ಸೇತುವೆ ಹೊರತು ಪಡಿಸಿ, ಬೆಂಗಳೂರು ನಗರದ 50ಕ್ಕೂ ಹೆಚ್ಚು ಮೇಲ್ಸೇತುವೆಗಳನ್ನು ಬಂದ್ ಮಾಡಲಾಗಿರುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಸೇತುವೆ ಮೇಲೆ ಬೈಕ್ಗಳ ಸಂಚಾರವನ್ನು ನಿಷೇಧಿಸಲಾಗಿದೆ.
=================
Related Article : 2026 New Year Rules | Celebration Break | ಹೊಸ ವರ್ಷಾಚರಣೆಗೆ ರೂಲ್ ಸೆಲಬ್ರೇಷನ್ಸ್ಗೆ ಬ್ರೇಕ್ | Focus TV Kannada
