Negligence of Transport Department | ಸಾರಿಗೆ ಇಲಾಖೆ ನಿರ್ಲಕ್ಷ್ಯ ಮಾಲೀಕರ ಬಸ್‌ ಮಾಫಿಯಾ!

Negligence of Transport Department | ಸಾರಿಗೆ ಇಲಾಖೆ ನಿರ್ಲಕ್ಷ್ಯ ಮಾಲೀಕರ ಬಸ್‌ ಮಾಫಿಯಾ!

ಸಾರಿಗೆ ಇಲಾಖೆ ಕರ್ಮಕಾಂಡ …….!

ಸಾರಿಗೆ ಇಲಾಖೆ ಕರ್ಮಕಾಂಡ ಖಾಸಗಿ ಬಸ್ ದುರಂತಗಳಲ್ಲಿ ಅನಾವರಣಗೊಂಡಿದೆ. ಒಂದೆಡೆ ಬಸ್ ಮಾಲೀಕರ ಮಾಫಿಯಾ, ಮತ್ತೊಂದೆಡೆ ಸಾರಿಗೆ ಇಲಾಖೆ ನಿರ್ಲಕ್ಷ್ಯ ಬಹಿರಂಗವಾಗಿದೆ.

ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸು ಸುಟ್ಟು ಕರಕಲಾದ ಘಟನೆ ನಡೆದಿದೆ. ಚಿತ್ರದುರ್ಗದ ಹಿರಿಯೂರು ತಾಲೂಕಿನ ಜವರನಹಳ್ಳಿ ಬಳಿಯ ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಈ ಹಿಂದೆ ಹೈದ್ರಾಬಾದಿನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಸೊಂದು ಕರ್ನೂಲ್ ಬಳಿ ಬೆಂಕಿಗೆ ಬಲಿಯಾಗಿ 20 ಮಂದಿ ಮೃತಪಟ್ಟಿದ್ದರು. ಈ ಘಟನೆಗೆ ಚಾಲಕನು ಕುಡಿದು ಬಸ್ ಓಡಿಸುತ್ತಿದ್ದದ್ದೇ ಕಾರಣವೆಂದು ಆರೋಪಿಸಲಾಗಿದೆ.  ಈ ವೇಳೆ  ವೇಮೂರಿ ಕಾವೇರಿ ಬಸ್‌ ಸಂಸ್ಥೆಗೆ ಸೇರಿದ ಬಸ್ ಅಕ್ರಮ ಬಯಲಾಗಿದೆ.  ಕಳೆದ ಕೆಲ ದಿನಗಳ ಹಿಂದೆ ರಾಜಸ್ಥಾನದಲ್ಲೂ ಇದೇ ರೀತಿಯ ಬಸ್‌ ದುರಂತ ಸಂಭವಿಸಿತ್ತು.

ಖಾಸಗಿ ಬಸ್ ಗಳ ದುರಂತಗಳಿಗೆ ಕಾರಣವೇನು? ಎಂಬುದನ್ನು ನೋಡುವುದಾದ್ರೆ, ಖಾಸಗಿ ಬಸ್ಸುಗಳ ಮಾಫಿಯಾ ಒಂದೆಡೆಯಾದ್ರೆ, ಮತ್ತೊಂದೆಡೆ ಖಾಸಗಿ ಬಸ್ಸುಗಳು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇರೋದು ಮತ್ತೊಂದು ಕಾರಣವಾಗಿದೆ.  ಜೊತೆಗೆ ಅನಧಿಕೃತವಾಗಿ ಬಸ್ಸುಗಳ ಕಾರ್ಯಾಚರಣೆ, ಪ್ರಯಾಣಿಕರಿಂದ ಅತಿಯಾದ ದರ ವಸೂಲಿ, ಸಾರಿಗೆ ನಿಯಮಗಳ ಉಲ್ಲಂಘನೆ ಪ್ರಕರಣಗಳು ಬಹಿರಂಗವಾಗಿವೆ.  ಈ ವೇಳೆ ಅನೇಕ ಖಾಸಗಿ ಬಸ್ಸುಗಳನ್ನು ವಶಕ್ಕೆ ಪಡೆದು ಸಾರಿಗೆ ಇಲಾಖೆ ಹಲವು ರೀತಿಯಲ್ಲಿ ದಂಡ ವಿಧಿಸಿದೆ.  ಅಲ್ಲದೇ, ಬಸ್ಸುಗಳನ್ನು ಫಿಟ್ ನೆಸ್ ಪರೀಕ್ಷೆಗೊಳಪಡಿಸದೇ ಇರೋದು,  ಬಸ್ಸಿನಲ್ಲಿ ತುರ್ತು ನಿರ್ಗಮನ ವ್ಯವಸ್ಥೆ ಇಲ್ಲದಿರೋದು,  ಅಗ್ನಿಶಾಮಕ ವ್ಯವಸ್ಥೆ ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಲ್ಲದಿರೋದು, ಅಗತ್ಯ ಸುರಕ್ಷತಾ ಸಾಧನಗಳ ಕೊರತೆ ಕೂಡ ಕಾರಣವಾಗಿದೆ.  ಪ್ರಯಾಣಿಕರ ಬಸ್ಸುಗಳಲ್ಲಿ ಅಕ್ರಮವಾಗಿ ಸರಕು ಸಾಗಣೆ, ಬಸ್ಸಿನಲ್ಲಿ ಅಧಿಕ ಪ್ರಯಾಣಿಕರನ್ನು ತುಂಬುವುದು ಹಾಗೂ ವೇಗವಾಗಿ ಬಸ್ ಓಡಿಸುವುದು ಸೇರಿದಂತೆ ಹಲವು ಕಾರಣಗಳು ಸೇರಿವೆ.

Negligence of Transport Department | ಸಾರಿಗೆ ಇಲಾಖೆ ನಿರ್ಲಕ್ಷ್ಯ ಮಾಲೀಕರ ಬಸ್‌ ಮಾಫಿಯಾ!

ಕರ್ನೂಲ್ ಬಳಿಯ ದುರಂತದಲ್ಲಿ ಬಸ್ಸಿನ ಮಾಲೀಕ ವಿನೋದ್ ಕುಮಾರ್.  ಈತ ಹಿಮಾಚಲ ಪ್ರದೇಶದ ಡಿಯು-ಡಾಮನ್ ಸಾರಿಗೆ ಇಲಾಖೆಯಿಂದ ತನ್ನ ಬಸ್ಸಿಗೆ ಅನುಮತಿ ಪಡೆದಿದ್ದನು.  ಏಕೆಂದ್ರೆ, ನೆರೆಯ ತೆಲಂಗಾಣದಲ್ಲಿ ಇಲ್ಲವೇ ಕರ್ನಾಟಕದಲ್ಲೂಆತ ಬಸ್ಸಿಗೆ ಪರವಾನಗಿ ಪಡೆಯಬಹುದಾಗಿತ್ತು. ಆದ್ರೆ ಇದ್ರ ಬಸ್ ಮಾಲೀಕ ಆಯ್ಕೆ ಮಾಡಿಕೊಂಡಿದ್ದು ಕೇಂದ್ರಾಡಳಿತ ಪ್ರದೇಶವಾದ ಡಿಯು ಹಾಗೂ ಡಾಮನ್ ಸಾರಿಗೆ ಕೇಂದ್ರವನ್ನು. ಇಲ್ಲಿ ಸೀಟರ್ ಬಸ್ ಲೈಸನ್ಸ್ ಗೆ ಪ್ರತಿ ಸೀಟಿಗೆ ಕೇವಲ 450 ರೂ. ಮಾತ್ರ ಇದೆ. ಅದೇ ಸ್ಲೀಪರ್‌ ಗಾದರೆ 800 ರೂಪಾಯಿ. ಇದು ಆಂಧ್ರ, ತೆಲಂಗಾಣದಲ್ಲಾದರೆ ಸೀಟರ್‌ ದರ ಪ್ರತಿ ಸೀಟಿಗೆ 4500 ರೂಪಾಯಿ, ಸ್ಲೀಪರ್‌ಗಾದರೆ ಪ್ರತಿ ಸೀಟಿಗೆ ಬರೋಬ್ಬರು 12,000 ರೂಪಾಯಿ. ಹೀಗಾಗಿಯೇ ಕಿಲ್ಲರ್‌ ವೇಣೂರಿ ಕಾವೇರಿ ಬಸ್‌ ಮಾಲೀಕ ವಿನೋದ್‌ ಕುಮಾರ್‌ ತೆಲುಗು ರಾಜ್ಯಗಳ ಬದಲಿಗೆ ಡಿಯು ಡಾಮನ್‌ನಿಂದ ಸಾರಿಗೆ ಅನುಮತಿ ಪಡೆದಿದ್ದರು. ಅಲ್ಲದೆ, ಇನ್ನೊಂದು ಪ್ರಮುಖ ತಪ್ಪೆಂದರೆ. ಅದು ಸೀಟರ್‌ ಬಸ್ಸನ್ನೇ ಸ್ಲೀಪರ್‌ ಆಗಿ ಬದಲಿಸಿದ್ದು ಮತ್ತೊಂದು ದುರಂತವಾಗಿದೆ.   ಈತ ಬಸ್ಸನ್ನು ನಿರ್ಮಾಣ ಮಾಡಿಸಿದ್ದು ಒಡಿಶಾದಲ್ಲಿ. ಸಿಟ್ಟಿಂಗ್‌ ಸಾಮರ್ಥ್ಯದ ಬಸ್ಸಿನಲ್ಲಿ ಸ್ಲೀಪರ್‌ ಸಾಮರ್ಥ್ಯಕ್ಕೆ ಹೆಚ್ಚಿಸಿದರೆ ಏನಾಗುತ್ತದೆ. ಇದಕ್ಕೆ ಬಸ್‌ ಬ್ಯಾಲೆನ್ಸ್‌ ಕಳೆದುಕೊಂಡು ಸುಮಾರು 20 ಜನರ ದುರ್ಮರಣಕ್ಕೆ ಕಾರಣವಾಯ್ತು.

ಕರ್ನಾಟಕದಲ್ಲಿ ಹಲವು ಬಸ್ ಗಳು ಅಪಘಾತಕ್ಕೀಡಾಗುತ್ತಿದ್ದೂ ಕೂಡ ಸರ್ಕಾರವಾಗಲಿ, ಸಾರಿಗೆ ಇಲಾಖೆ ಸಚಿವರಾಗಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ಕೆಲವು ಲಕ್ಷ  ರೂಪಾಯಿಗಳ ಪರಿಹಾರ ಕೊಟ್ಟು ಸರ್ಕಾರ ಕೈತೊಳೆದುಕೊಂಡು ಬಿಡುತ್ತದೆ.

ಒಂದೆಡೆ ಶಕ್ತಿ ಯೋಜನೆಯಿಂದ ಇಲಾಖೆಗೆ ಹಣ ಕೂಡ ಬರುತ್ತಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಇಲಾಖೆ ಬಗ್ಗೆ ನಿರ್ಲಿಪ್ತರಾಗಿದ್ದಾರೆ.  ಸಾರಿಗೆ ಸಚಿವರು ಯಾವುದೇ ವಿಚಾರಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ.  ಜೊತೆಗೆ ಖಾಸಗಿ ಬಸ್ಸುಗಳ ಮಾಲೀಕರಿಂದ ನಿಯಮ ಉಲ್ಲಂಘನೆಯಾಗುತ್ತಿದ್ದರೂ ಕೂಡ ಆರ್ ಟಿಓ ಅಧಿಕಾರಿಗಳು ಲಂಚ ಪಡೆದು ಕೈಚಲ್ಲುತ್ತಾರೆ. ಒಟ್ಟಾರೆ, ಈ ಎಲ್ಲಾ ನಿಯಮಗಳ ಉಲ್ಲಂಘನೆಯಾಗುತ್ತಿದ್ದರೂ ಕೂಡ ಸಾರಿಗೆ ಇಲಾಖೆ ಮೌನಕ್ಕೆ ಶರಣಾಗಿದೆ.

Also Read : Karnataka Chitradurga Bus and truck collision | Accident | ಹೊರಟಿದ್ದು ಊರಿಗೆ, ತಲುಪಿದ್ದು ಬಾರದೂರಿಗೆ …!

============ 

Leave a Reply

Your email address will not be published. Required fields are marked *