Muda Case | Krishna Back in Court |ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸ್ನೇಹಮಯಿ ಕೃಷ್ಣ ಮತ್ತೆ ಕೋರ್ಟಿಗೆ
ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಪಾರು ಮಾಡುವ ಯತ್ನ ನಡೆಯುತ್ತಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಇದೇ ವೇಳೆ ಪ್ರಕರಣದ ವಿಚಾರಣೆ ಜನವರಿ 5ಕ್ಕೆ ಮುಂದೂಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮೈಸೂರು ಮುಡಾ ಸೈಟ್ ಆಕ್ರಮ ಆರೋಪ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಜನವರಿ 5ಕ್ಕೆ ಮುಂದೂಡಿದೆ. ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಬಿ. ರಿಪೋರ್ಟ್ ಸಲ್ಲಿಸಿದ್ದನ್ನು ಪ್ರಶ್ನಿಸಿ, ಸ್ನೇಮ ಕೃಷ್ಣ ಸಲ್ಲಿಸಿರುವ ಅರ್ಜಿ ವಿಚಾರಣೆ ಬೆಂಗಳೂರಿನ ಸೆಷನ್ಸ್ ಕೋರ್ಟ್ನಲ್ಲಿ ನಡೆಯಿತು.
Also Read : Reckless Wheeling: BJP Legislator Draws Criticism | ಆಪಾಯಕಾರಿ ವೀಲಿಂಗ್… ಬಿಜೆಪಿ ಶಾಸಕರ ವೀರಾವೇಶ.
ತನಿಖೆ ಪೂರ್ಣಗೊಂಡಿದ್ದರೂ, ವಿಚಾರಣೆಬಾಕಿ ಇದೆ ಅಂತ ಅಧಿಕಾರಿಗಳು ಸುಳ್ಳು ಹೇಳ್ತಿದ್ದಾರೆಂದು ಕೃಷ್ಣ ಅರೋಪಿಸಿದ್ರು. ಅಲ್ಲದೆ, ಪ್ರಕರಣದ ಎ1 ಆರೋಪಿಯಾಗಿರುವ ಸಿಎಂ ಅವರನ್ನು ನಿರಪರಾಧಿ ಎಂಬು ಬಿಂಬಿಸುವ ಪ್ರಯತ್ನ ನಡೀತಿದೆ. ಆರೋಪ ಸಾಬೀತಾದರೆ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕಾಗುತ್ತೆ ಅಂದರು. ತನಿಖಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೇ ಪ್ರಕರಣ ದಾಖಲಿಸಲು ಸ್ನೇಹಮಯಿಕೃಷ್ಣ ಕೋರಿದರು. ಈ ಕುರಿತ ವಿಚಾರಣೆಯನ್ನು ಕೋರ್ಟ್ ಜನವರಿ 5ಕ್ಕೆ ಮುಂದೂಡಿದೆ.
ಮುಡಾ ಪ್ರಕರಣದ ತನಿಖಾಧಿಕಾರಿ ಎಡಿಜಿಪಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಅಂತಿಮ ವರದಿ ಸಲ್ಲಿಸಲು ಅಂತಿದೆ. ಆರೋಪಿ ವಿರುದ್ಧ ಆರೋಪ ಸಾಬೀತಾಗದ ಕಾರಣ. ಅಂತಿಮ ವರದಿ ಸಲ್ಲಿಸಲು ಅನುಮತಿ ಕೋರಲಾಗಿದೆ ಎಂದು ಪತ್ರ ಬರೆದಿದ್ದಾರೆ. ಪ್ರಕರಣದ ಎ1 ರಿಂದ ಎ4 ಆರೋಪಿಗಳವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ, ಆರೋಪ ಸಾಬೀತಾಗಾದ ಹಿನ್ನಲೆಯಲ್ಲಿ ಅಂತಿಮ ವರದಿ ಸಲ್ಲಿಸಲು ಅಂತಾ ನಮೂನೆ ಇದೆ.ಎಲ್ಲಾ ಕಡೆಯು ಅಂತಿಮ ವರದಿ ಅಂತಾ ಇದೆ. ಹಾಗಾದರೆ, ಅಂತಿಮ ವರದಿ ಅಂದ್ರೆ ಅರ್ಥ ಏನು? ತನಿಖೆ ಪೂರ್ಣಗೊಂಡ ಬಳಿಕ ಅಂತಿಮ ವರದಿ ಸಲ್ಲಿಸಬೇಕು ಎಂದು ಸ್ನೇಹಮಯಿ ಕೃಷ್ಣ ವಾದಿಸಿದರು.
ತನಿಖೆ ಬಾಕಿ ಇದೇ ಎಂದು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ಆದ್ರೆ, ತನಿಖೆ ಪೂರ್ಣಗೊಂಡಿದೆ. ಅಂತಿಮ ವರದಿ ಎಂದು ಅವರೇ ಸಲ್ಲಿಸಿದ್ದಾರೆ. ಎಸ್ಪಿ ನ್ಯಾಯಾಲಯಕ್ಕೆ ದಾರಿ ತಪ್ಪಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಎ1 ಆರೋಪಿ ಹಾಲಿ ಸಿಎಂ ಆಗಿರೋದ್ರಿಂದಅವರನ್ನ ನಿರಪರಾಧಿ ಅಂತ ತೋರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸ್ನೇಹಮಯಿ ಕೃಷ್ಣ ದೂರಿದ್ದಾರೆ. ತನಿಖಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೇ ಪ್ರಕರಣ ದಾಖಲಿಸಲು ಕೋರಿದರು.
============
