Karnataka Chitradurga Bus and truck collision Accident | ಹೊರಟಿದ್ದು ಊರಿಗೆ, ತಲುಪಿದ್ದು ಬಾರದೂರಿಗೆ …!

Karnataka Chitradurga Bus and truck collision Accident | ಹೊರಟಿದ್ದು ಊರಿಗೆ, ತಲುಪಿದ್ದು ಬಾರದೂರಿಗೆ ...!

ಕಂಟೇನರ್ ಲಾರಿಯೊಂದು ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ, ಬಸ್ಸಿನಲ್ಲಿದ್ದ 9 ಮಂದಿ ಸಜೀವ ದಹನವಾದ ಘಟನೆ ಚಿತ್ರದುರ್ಗದ ಗೋರ್ಲತ್ತು ಬಳಿ ಸಂಭವಿಸಿದೆ.  29 ಮಂದಿ ಇದ್ದ ಖಾಸಗಿ ಬಸ್ಸು ಗೋಕರ್ಣಕ್ಕೆ ತೆರಳುತ್ತಿತ್ತು. ಘಟನಾ ಸ್ಥಳಕ್ಕೆ ಪೊಲೀಸ್ರು ತೆರಳಿ, ರಕ್ಷಣಾ ಕಾರ್ಯ ನಡೆಸಿದರು.

ರೋಡ್ ಡಿವೈಡರ್ ಗೆ ಡಿಕ್ಕಿ ಹೊಡೆದ ಕಂಟೇನರ್ ಲಾರಿ ಬಳಿಕ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸೊಂದು ಹೊತ್ತಿ ಉರಿದಿರುವ ಘಟನೆ ಚಿತ್ರದುರ್ಗದ ಬಳಿ ನಡೆದಿದೆ.   ನಸುಕಿನ 3 ಗಂಟೆ ವೇಳೆಯಲ್ಲಿ ಹಿರಿಯೂರು ತಾಲೂಕಿನ ಗೋಲ್ರತ್ತು ಕ್ರಾಸ್ ಬಳಿ ದುರಂತ ಸಂಭವಿಸಿದೆ.  ಬಸ್ ದುರಂತದಲ್ಲಿ 9 ಮಂದಿ ಪ್ರಯಾಣಿಕರು ಸಜೀವವಾಗಿ ದಹನವಾಗಿದ್ದಾರೆ.

ಸುಮಾರು 29 ಮಂದಿ ಪ್ರಯಾಣಿಕರನ್ನೊತ್ತ ಸೀ ಬರ್ಡ್ ಸ್ಲೀಪರ್ ಕೋಚ್ ಬಸ್ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸುತ್ತಿತ್ತು.  ಈ ವೇಳೆ ಎದುರಿನಿಂದ ಬರುತ್ತಿದ್ದ ಕಂಟೇನರ್ ಲಾರಿ, ರೋಡ್ ಡಿವೈಡರ್ ಗೆ ಡಿಕ್ಕಿ ಹೊಡೆದು, ಬಳಿಕ ಬಸ್ಸಿಗೆ ಡಿಕ್ಕಿ ಹೊಡೆದಿದ್ದರಿಂದ ಕ್ಷಣ ಮಾತ್ರದಲ್ಲಿ ಬಸ್ಸಿನ ಡಿಸೇಲ್ ಟ್ಯಾಂಕ್ ಸಿಡಿದು ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಯಿತು. ಈ ವೇಳೆ ಹಲವರು ಬಸ್ಸಿನ ಗಾಜು ಹೊಡೆದು ಹೊರಬಂದ್ರೆ, ಇನ್ನೂ ಕೆಲವರು ಬಸ್ಸಿನಿಂದ ಹೊರಬರಲಾಗದೆ ಸುಟ್ಟು ಕರಕಲಾದ್ರು. ಬಸ್ಸಿನಲ್ಲಿದ್ದವರು ಹೆಚ್ಚಿನ ಪೈಕಿ ಗೋಕರ್ಣಕ್ಕೆ ಸೇರಿದವರಾಗಿದ್ದಾರೆ. 

ಬೆಂಗಳೂರಿನನಿಂದ ಖಾಸಗಿ ಸೀಬರ್ಡ್ ಸ್ಲೀಪರ್ ಬಸ್‌, ಶಿವಮೊಗ್ಗ ಮತ್ತು ಹೊನ್ನಾವರ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ತೆರಳುತ್ತಿತ್ತು. 32 ಆಸನ ಸಾಮರ್ಥ್ಯದ ಬಸ್‌ನಲ್ಲಿ 29 ಆಸನಗಳು ಕಾಯ್ದಿರಿಸಲಾಗಿದ್ದು, 25 ಪ್ರಯಾಣಿಕರು ಗೋಕರ್ಣಕ್ಕೆ, ಇಬ್ಬರು ಕುಮಟಾಕ್ಕೆ ಮತ್ತು ಇಬ್ಬರು ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದರು. ಅಪಘಾತದ ಮಾಹಿತಿ ದೊರೆತ ತಕ್ಷಣ ಎಸ್.ಪಿ. ರಣದೀಪ್ ಮಂಡಾರು ಮತ್ತು ತುಮಕೂರಿನ ಎಸ್.ಪಿ. ಅಶೋಕ್ ಸ್ಥಳಕ್ಕೆ ದಾವಿಸಿ ರಕ್ಷಣಾ ಕಾರ್ಯಗಳನ್ನು ನಡೆಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿನಂದಿಸುವ ಕಾರ್ಯಾಚರಣೆ ನಡೆಸಿ,

9 ಮಂದಿ ಗಾಯಾಳುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಿರಿಯೂರು, ಶಿರಾಗೆ ಸಮೀಪದ ಆಸ್ಪತ್ರೆಗಳಿಗೆ ಹಾಗೂ ಜಿಲ್ಲಾ ಆಸ್ಪತ್ರೆಗೆ  ಗಾಯಾಳುಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ಬೆಂಗಳೂರಿಗೆ ರವಾನಿಸಲಾಗಿದೆ.

ಬಸ್​​ನಲ್ಲಿ 15 ಮಹಿಳೆಯರು ಹಾಗೂ 14 ಪುರುಷರು ಪ್ರಯಾಣಿಸುತ್ತಿದ್ದ ಮಾಹಿತಿ ದೊರೆತಿದೆ. ಮಂಜುನಾಥ್​, ಸಂಧ್ಯಾ, ಶಶಾಂಕ್​, ದಿಲೀಪ್​, ಪ್ರೀತೀಶ್ವರನ್​, ವಿ.ಬಿಂದು, ಕೆ.ಕವಿತಾ, ಅನಿರುದ್ಧ್ ಬೆನರ್ಜಿ, ಅಮೃತಾ, ಇಶಾ, ಸೂರಜ್​, ಮಾನಸ, ಮಿಲನಾ, ಹೇಮರಾಜ್​ಕುಮಾರ್, ಕಲ್ಪನಾ ಪ್ರಜಾಪತಿ, ಎಂ.ಶಶಿಕಾಂತ್​, ವಿಜಯ್ ಭಂಡಾರಿ, ನವ್ಯಾ, ಅಭಿಷೇಕ್​, ಹೆಚ್​.ಕಿರಣ್ ಪಾಲ್​, ಎಂ.ಕೀರ್ತನ್​​, ಜಿ.ನಂದಿತಾ, ಹೆಚ್​.ದೇವಿಕಾ, ಮೇಘರಾಜ್​, ಎಸ್​.ಎನ್​.ಮಸ್ರತ್​ಉನ್ನೀಸಾ, ಸಯಿದ್ ಜಮೀರ್​​ ಗೌಸ್​, ಎಸ್​ಗಗನಶ್ರೀ, ರಶ್ಮಿ ಮಹಲೆ, ಆರ್​.ರಕ್ಷಿತಾ ಬಸ್​​ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮೃತ ದೇಹಗಳು ಸುಟ್ಟು ಕರಕಲಾಗಿರುವುದರಿಂದ ಮೃತದೇಹಗಳ ಪತ್ತೆ  ಹಚ್ಚಬೇಕಿದೆ.

ದುರಂತ ಸಂಭವಿಸಿದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸುಮಾರು 30 ಕಿಲೋಮೀಟರ್‌ಗಳಷ್ಟು ಉದ್ದಕ್ಕೆ ಸಂಚಾರ ದಟ್ಟಣೆ ಉಂಟಾಗಿದೆ. ಮುಂಬೈಗೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಬೆಂಕಿ ನಂದಿಸುವ ಕಾರ್ಯಾಚರಣೆ ಮತ್ತು ಸುಟ್ಟು ಕರಕಲಾದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಭರದಿಂದ ಸಾಗಿದೆ. ಘಟನೆಗೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Also Read : Why the Protest Against Prakash Rai? | ಪ್ರಕಾಶ್ ರೈ ವಿರುದ್ಧ ಉಗ್ರ ಹೋರಾಟ.!?

===============

Leave a Reply

Your email address will not be published. Required fields are marked *