Kabir’s Eye on Muslims | ಮುಸ್ಲಿಮರ ಮೇಲೆ ಕಬೀರ್ ಕಣ್ಣು. ಆಪ್ತನ ಮೇಲೆ ಮಮತಾ ಕೆಂಗಣ್ಣು!

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಮಮತಾ ಬ್ಯಾನರ್ಜಿ ಎಲ್ಲಾ ವರ್ಗದ ಮತ ಕ್ರೂಢೀಕರಣಕ್ಕೆ ಯತ್ನಿಸುತ್ತಿದ್ರೆ,  ಬಾಬ್ರಿ ಮಸೀದಿ ಹೆಸರಿನಲ್ಲಿ ಟಿಎಂಸಿ ಉಚ್ಚಾಟಿತ ಶಾಸಕ ಹುಮಯೂನ್ ಕಬೀರ್ ಅಲ್ಪಸಂಖ್ಯಾತರ ಕಸಿಯಲು ಪ್ಲ್ಯಾನ್ ಮಾಡಿದ್ದಾರೆ. ಇವರಿಬ್ಬರ ವೋಟ್ ಪ್ಲ್ಯಾನ್ ನೋಡೋಣ ಬನ್ನಿ…

ಪಶ್ಚಿಮ ಬಂಗಾಲ ವಿಧಾನಸಭೆಗೆ 2026ರಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಟಿಸಿಎಂ ಪಕ್ಷದಿಂದ ಶಾಸಕ ಕಬೀರ್ ಹುಮಯೂನ್ ರನ್ನು ಉಚ್ಚಾಟಿಸಿದ ಬಳಿಕ ಜನತಾರ್ ಉನ್ಯನ್ ಎಂಬ ಹೊಸ ಪಕ್ಷವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಬೆಲ್ದಂಗಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕಬೀರ್, 2026 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಸ್ಪರ್ಧಿಸಲಿರುವ 8 ಅಭ್ಯರ್ಥಿಗಳ ಹೆಸರು ಪ್ರಕಟಿಸಿದರು. ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರ ಮತ್ತು ಬೆಲ್ದಂಗಾ ಎಂಬ 2 ಸ್ಥಾನಗಳಿಂದ ತಾವು ಸ್ಪರ್ಧಿಸುವುದಾಗಿ ಮತ್ತು ಶೀಘ್ರದಲ್ಲೇ ಇತರೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. 2025ರ ಡಿಸೆಂಬರ್ 6 ರಂದು ಮುರ್ಷಿದಾಬಾದ್ ನಲ್ಲಿ ಬಾಬ್ರಿ ಮಸೀದಿ ಸ್ಥಾಪಿಸುವುದಾಗಿ ಕಬೀರ್ ಹೇಳಿಕೆ ಬೆನ್ನಲ್ಲೇ ಆತನನ್ನು ಟಿಸಿಎಂನಿಂದ ಉಚ್ಚಾಟಿಸಲಾಗಿತ್ತು.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅನ್ನು ಸಾಂಪ್ರದಾಯಿಕವಾಗಿ ಬೆಂಬಲಿಸುವ ಅಲ್ಪಸಂಖ್ಯಾತರು ಒಗ್ಗಟ್ಟಿನಿಂದ ಇರಬೇಕೆಂದು ಮನವಿ ಮಾಡಿದ್ದಾರೆ.

ಇತ್ತೀಚಿಗೆ ಟಿಎಂಸಿಯಿಂದ ಸಸ್ಪೆಂಡ್ ಆದ ಶಾಸಕ ಹುಮಾಯೂನ್ ಕಬೀರ್, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ತಿಂಗಳು ಬಾಕಿ ಇರುವಾಗ ಹೊಸ ಪಕ್ಷ ಘೋಷಿಸಿದ್ದು, ಇದು ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸುವ ಸಾಧ್ಯತೆ ಇದೆ ಎಂದಿದಾರೆ.

ತೃಣಮೂಲ ಕಾಂಗ್ರೆಸ್ ಬೂತ್ ಮಟ್ಟದ ಏಜೆಂಟ್‌ಗಳ ಸಭೆಯಲ್ಲಿ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, ಅಲ್ಪಸಂಖ್ಯಾತರು ಭಯಭೀತರಾಗದಂತೆ ಮನವಿ ಮಾಡಿದರು.  ಬಿಜೆಪಿ ವಿರುದ್ಧ ನಿರ್ಧಾರ ತೆಗೆದುಕೊಂಡು ಎಲ್ಲರೂ ಒಗ್ಗಟ್ಟಾಗಬೇಕು. ಬಿಜೆಪಿ ಹಾಗೂ ನಿಮ್ಮ ನಡುವೆ ವಿಭಜನೆಯ ರಾಜಕೀಯ ಮಾಡಲು ಪ್ರಯತ್ನಿಸುತ್ತಿದೆ. ಆದರೆ,  ನೀವು ಅವರ ವಿರುದ್ಧ ಒಗ್ಗಟ್ಟಾಗಿರಬೇಕು ಎಂದು ಮಮತಾ ಮನವಿ ಮಾಡಿದ್ದಾರೆ.

============

Leave a Reply

Your email address will not be published. Required fields are marked *