Home Meals: Pavithra Gowda & Darshan | ಪವಿತ್ರಾ ಗೌಡಗೆ ಮನೆಯೂಟ, ದರ್ಶನ್ಗೆ ಯಾಕಿಲ್ಲ?
ರೇಣುಕಾಸ್ವಾಮಿ ಕೊಲೆ ಪ್ರಕರಣದ ಟ್ರಯಲ್ ಆರಂಭವಾಗಿದೆ. ಏತನ್ಮಧ್ಯೆ, ಎ1 ಆರೋಪಿ ಪವಿತ್ರಾಗೌಡ ಸೇರಿದಂತೆ ಮೂವರು ಆರೋಪಿಗಳಿಗೆ ಮನೆಯೂಟದ ಭಾಗ್ಯ ಸಿಕ್ಕಿದೆ. ಆದರೆ ಈ ಭಾಗ್ಯ ಎ2 ದರ್ಶನ್ಗೆ ಮಾತ್ರ ಯಾಕೆ ಸಿಕ್ಕಿಲ್ಲ?
Chitradurga : ಪವಿತ್ರಾ ಜೊತೆಗೆ ಲಕ್ಷ್ಮಣ್ ಹಾಗೂ ನಾಗರಾಜ್ಗೂ ಮನೆಯೂಟ ?
ರೇಣುಕಾಸ್ವಾಮಿ ಕೊಲೆ ಕೇಸ್ ಟ್ರಯಲ್ ನಡೆಯುತ್ತಿದ್ದು, ಇದರ ನಡುವೆಯೇ ಎ1 ಆರೋಪಿ ಪವಿತ್ರಾ ಗೌಡಗೆ ಮನೆ ಊಟ ಸವಿಯುವ ಭಾಗ್ಯ ಸಿಕ್ಕಿದೆ. ಕೋರ್ಟ್ ನಿರ್ದೇಶನದ ಮೇರೆಗೆ ಪವಿತ್ರಾ ಗೌಡಗೆ ಇಂದು ಅಥವಾ ನಾಳೆಯಿಂದ ಮನೆಯೂಟ ಸಿಗುವ ಸಾಧ್ಯತೆ ಇದೆ. ಪವಿತ್ರಾ ಜೊತೆಗೆ ಲಕ್ಷ್ಮಣ್ ಹಾಗೂ ನಾಗರಾಜ್ಗೂ ಮನೆಯೂಟ ಸಿಗಲಿದೆ. ಆದರೆ ದರ್ಶನ್ಗ್ಯಾಕೆ ಮನೆಯೂಟದ ಭಾಗ್ಯ ಇಲ್ಲ ಅನ್ನೋ ಪ್ರಶ್ನೆ ಎದ್ದಿದೆ. ಈ ಹಿಂದೆ ಮನೆಯೂಟದ ಸಲುವಾಗಿ ನಾ ದರ್ಶನ್ ಪಟ್ಟು ಹಿಡಿದಿದ್ದರೂ ಕೂ ಕೋರ್ಟ್ನಲ್ಲಿ ಮನೆಯೂಟಕ್ಕೆ ಪರ್ಮಕಿಶನ್ ಸಿಗಲಿಲ್ಲ.
Renukaswamy Murder Case: ಎ1 ಆರೋಪಿ ಪವಿತ್ರಾ ಗೌಡಗೆ ಮನೆ ಊಟ ಸವಿಯುವ ಭಾಗ್ಯ ಸಿಕ್ಕಿದೆ…!
ಪವಿತ್ರಾ ಗೌಡ ಅವರು ಮನೆಯೂಟಕ್ಕಾಗಿ ಕೋರ್ಟ್ನಲ್ಲಿ ಮನವಿ ಮಾಡಿದ್ದರು. ಅದನ್ನು ಪುರಸ್ಕರಿಸಿದ ಕೋರ್ಟ್ ಎ1 ಆರೋಪಿ ಪವಿತ್ರಾ ಗೌಡಗೆ ಮನೆ ಊಟ ನೀಡಲು ಅನುಮತಿ ನೀಡಿ ಜೈಲಾಧಿಕಾರಿಗಳಿಗೆ ನಿರ್ದೇಶನ ಕೊಟ್ಟಿತ್ತು. ಆದೇಶ ಪ್ರತಿ ತಲುಪಿದ ಬಳಿಕ ಜೈಲಿನ ಕೆಲ ಪ್ರಕ್ರಿಯೆಗಳನ್ನು ನಡೆಸಲಾಗಿದೆ. ಯಾರು ಮನೆಯೂಟ ತರ್ತಾರೆ, ಯಾವಾಗ ತರ್ತಾರೆ ಅವರಿಗೂ ಆರೋಪಿಗೂ ಏನು ಸಂಬಂಧ? ಸೇರಿದಂತೆ ಕೆಲ ಮಾಹಿತಿ ಜೊತೆಗೆ ದಾಖಲೆಗಳು ಪರಿಶೀಲನೆ ನಡೆದಿದೆ. ಈಗಾಗಲೇ ನಾಲ್ವರು ಮನೆಯೂಟ ತರೋದಾಗಿ ವಕೀಲರು ಜೈಲಾಧಿಕಾರಿಗಳಿಗೆ ದಾಖಲೆ ನೀಡಿದ್ದಾರೆ. ಜನವರಿ 2ರಂದು ದಾಖಲೆಗಳು ನೀಡಿದ್ದು ಬಹುತೇಕ ಇವತ್ತು ಅಥವಾ ನಾಳೆ ಮನೆಯೂಟ ಸಿಗೋ ಸಾಧ್ಯತೆ ಇದೆ ಎನ್ನಲಾಗಿದೆ.
ಡಿಜಿಪಿ ಅಲೋಕ್ ಕುಮಾರ್ ಜೈಲಿಗೆ ಭೇಟಿ !!
ಇನ್ನು ರೇಣುಕಾಸ್ವಾಮಿ ಪ್ರಕರಣದ ಟ್ರಯಲ್ ಶುರುವಾಗಿರುವ ಬೆನ್ನಲ್ಲೇ ಪವಿತ್ರಾ ಗೌಡಗೆ ಗಢ ಗಢ ಶುರುವಾಗಿದೆ. ಟ್ರಯಲ್ ಶುರುವಾಗುತ್ತಿದ್ದಂತೆ ಪವಿತ್ರಗೌಡ ದರ್ಶನ್ ಭೇಟಿಗೆ ಶತಪ್ರಯತ್ನ ಮಾಡ್ತಿದ್ದಾರಂತೆ. ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿಗೆ ಭೇಟಿ ಕೊಟ್ಟಾಗ ಪವಿತ್ರಾ ಗೌಡ ಅವರ ಜೊತೆ ಮಾತನಾಡಿ ದರ್ಶನ್ ಭೇಟಿಗೆ ಅವಕಾಶ ಕೇಳಿದ್ದರು ಎನ್ನಲಾಗಿದೆ. ಟ್ರಯಲ್ ಶುರುವಾಗಿದೆ. ಪ್ಲೀಸ್ ಅವಕಾಶ ಕೊಡಿಸಿ ಸಾರ್ ಎಂದು ಪವಿತ್ರಾ ಗೌಡ ಅವರು ಅಲೋಕ್ ಅವರಲ್ಲಿ ಮನವಿ ಮಾಡಿಕೊಂಡರು ಎಂಬ ಸುದ್ದಿ ಕೇಳಿ ಬಂದಿದೆ.
ಪವಿತ್ರಗೌಡ ಆಸೆಗೆ ದರ್ಶನ್ ನಿರಸ ಪ್ರತಿಕ್ರಿಯೆ ??
ಈ ಬಗ್ಗೆ ಕಾನೂನಿನಲ್ಲಿ ಅವಕಾಶ ಇದೆಯೋ ಎಂದು ಅದರ ಬಗ್ಗೆ ನೋಡೊದಾಗಿ ಅಲೋಕ್ ಕುಮಾರ್ ಅವರು ಪವಿತ್ರಾ ಗೌಡಗೆ ಹೇಳಿದ್ದಾರೆಂತೆ. ಆದರೆ, ಪವಿತ್ರಾ ಗೌಡ ದರ್ಶನ್ ಅವರನ್ನು ಭೇಟಿ ಮಾಡಲೇಬೇಕು ಎಂದು ಪದೇ ಪದೇ ಯತ್ನಿಸುತ್ತಿದ್ದಾರಂತೆ. ಆದರೆ ಪವಿತ್ರಗೌಡ ಆಸೆಗೆ ದರ್ಶನ್ ನಿರಸ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಯಾವುದೇ ಕಾರಣಕ್ಕೂ ಭೇಟಿ ಮಾಡಲ್ಲ. ನಿನ್ನಿಂದಲೇ ಈ ಪರಿಸ್ಥಿತಿಗೆ ಬಂದಿದ್ದೇನೆ ಅಂತ ದರ್ಶನ್ ಹೇಳ್ತಿದ್ದಾರಂತೆ. ಅದೇನೇ ಇರಲಿ ಯಾರಿಂದ ಯಾರು ಯಾವ ಸ್ಥಿತಿಗೆ ಬಂದ್ರೋ ಇಲ್ವೋ, ಆದ್ರೆ ಒಂದು ಜೀವ ಹೋಗಿದ್ದೂ ಆಯ್ತು. ದರ್ಶನ್, ಪವಿತ್ರಾ ಸೆರೆವಾಸದಲ್ಲಿ ಇರುವಂತಾಯ್ತು.
