Film Festival at Lulu Mall | ಸಿನಿಮೋತ್ಸವದ ಸ್ಪ್ಯಾನರ್‌ ಹಿಡಿದ ಡಿಕೆ, ಫಿಲಂ ಫೆಸ್ಟಿವಲ್‌ ಶಿಫ್ಟ್‌ ಆಗಿದ್ದೇಕೆ?

Film Festival at Lulu Mall | ಸಿನಿಮೋತ್ಸವದ ಸ್ಪ್ಯಾನರ್‌ ಹಿಡಿದ ಡಿಕೆ, ಫಿಲಂ ಫೆಸ್ಟಿವಲ್‌ ಶಿಫ್ಟ್‌ ಆಗಿದ್ದೇಕೆ?

ಬೆಂಗಳೂರಿನ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು, ಅಚ್ಚರಿಯೆಂದರೆ ಈ ವರ್ಷದ ಸಿನಿಮೋತ್ಸವ ಲುಲೂ ಮಾಲ್‌ನಲ್ಲಿ ನಡೆಯಲಿದೆ. ಈ ಬಾರಿ ಒರಾಯನ್‌ ಮಾಲ್‌ ಅನ್ನು ಕೈ ಬಿಟ್ಟಿದ್ದೇಕೆ..? ಲುಲೂ ಮಾಲ್‌ನಲ್ಲಿ ಫಿಲಂ ಫೆಸಿವಲ್‌ ಆಯೋಜಿಸಲು ಕಾರಣವೇನು..?

ಸಿಲಿಕಾನ್ ಸಿಟಿ ಬೆಂಗಳೂರು ಮತ್ತೆ ಸಿನಿಮೋತ್ಸವಕ್ಕೆ ಸಜ್ಜಾಗಿದೆ. 17ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2026ರ ಜನವರಿ 29 ರಿಂದ ಫೆಬ್ರವರಿ 6 ರವರೆಗೆ ನಡೆಯಲಿದೆ. ಕಳೆದ ಹಲವು ವರ್ಷಗಳಿಂದ ಒರಾಯನ್‌ ಮಾಲ್‌ನಲ್ಲಿ ಚಲನಚಿತ್ರೋತ್ಸವ ನಡೆಯುತ್ತಿತ್ತು. ಆದ್ರೆ ಈ ಬಾರಿ ಲುಲೂ ಮಾಲ್‌ನಲ್ಲಿ ಸಿನಿಮೋತ್ಸವ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ಡಿಸಿಎಂ ಡಿಕೆ ಶಿವಕುಮಾರ್‌ ಒಡೆತನದ ಲುಲೂ ಮಾಲ್‌ಗೆ ಫಿಲಂ ಫೆಸ್ಟಿವಲ್‌ ಶಿಫ್ಟ್‌ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಈ ಹಿಂದೆ ಸಿನಿಮಾ ಇಂಡಸ್ಟ್ರಿಯ ನಟ್ಟು ಬೋಲ್ಟು ಟೈಟ್‌ ಮಾಡ್ಬೇಕು ಎಂದಿದ್ದ ಡಿಕೆ ಇದೀಗ ಚಲನಚಿತ್ರೋತ್ಸವವನ್ನು ತಮ್ಮದೇ ಒಡೆತನದ ಲುಲೂ ಮಾಲ್‌ನಲ್ಲಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದೇನಾ ಡಿಕೆ ನೀಡಿದ್ದ ಹೇಳಿಕೆಯ ಹಿಂದಿನ ಗುಟ್ಟು ಎಂಬ ಪ್ರಶ್ನೆ ಎಲ್ಲೆಡೆ ಸದ್ದು ಮಾಡುತ್ತಿದೆ. ಕಳೆದ ಹಲವು ವರ್ಷಗಳಿಂದ ಒರಾಯನ್‌ ಮಾಲ್‌ನಲ್ಲಿ ಮಾತ್ರವೇ ಚಿತ್ರೋತ್ಸವವನ್ನು ಏರ್ಪಡಿಸಲಾಗುತ್ತಿತ್ತು. ಆದರೆ, ಈ ಬಾರಿ ಸರ್ಕಾರ ಸ್ಥಳ ಬದಲಾವಣೆ ಮಾಡಿರುವುದಕ್ಕೆ ಡಿಕೆ ಅವರ ಕೈವಾಡವೇ ಕಾರಣ ಎನ್ನಲಾಗುತ್ತಿದೆ.

ಕಳೆದ ವರ್ಷ ಒರಾಯನ್‌ ನಲ್ಲಿ ಫಿಲ್ಮ್‌ ಫೆಸ್ಟಿವಲ್‌ ನಡೆದಾಗ ಇದೇ ಡಿಸಿಎಂ ಡಿಕೆ ಶಿವಕುಮಾರ್‌ ಮಾತನಾಡಿ, ಚಿತ್ರರಂಗದಲ್ಲಿ ಯಾರ್ಯಾರಿಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಅನ್ನೋದು ಗೊತ್ತಿದೆ. ಇದನ್ನು ವಾರ್ನಿಂಗ್ ಅಂತಾ ಆದ್ರೂ ಅಂದುಕೊಳ್ಳಿ, ಮನವಿ ಅಂತಾ ಆದ್ರೂ ಅಂದುಕೊಳ್ಳಿ ಎಂದಿದ್ದರು. ಈ ಮಾತು ಸ್ಯಾಂಡಲ್‌ವುಡ್‌ ನಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಫಿಲಂ ಫೆಸ್ಟಿವಲ್‌ ಅನ್ನು ಡಿಸಿಎಂ ತಮ್ಮ ಒಡೆತನದ ಮಾಲ್‌ನಲ್ಲಿ ಯಾಕೆ ನಡೆಸಿಕೊಡಲು ಮುಂದಾಗಿದ್ದಾರೆ. ಇದರ ಹಿಂದಿನ ರಾಜಕೀಯದಾಟ ಏನಿರಬಹುದು ಎಂಬ ಅನುಮಾನ ಮೂಡಿದೆ.

ಚಿತ್ರೋತ್ಸವದ ರಾಯಭಾರಿಯಾಗಿ ಬಹುಭಾಷಾ ನಟ ಪ್ರಕಾಶ್‌ ರೈ  ಆಯ್ಕೆಯಾಗಿದ್ದು, ಒಂಭತ್ತು ದಿನಗಳ ಕಾಲ ಈ ಸಿನಿ ಹಬ್ಬ ಇರಲಿದೆ. ಮೂರು ಕಡೆಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದ್ದು, ಲುಲು ಮಾಲ್, ಚಾಮರಾಜಪೇಟೆಯ ಡಾ.ರಾಜ್ಕುಮಾರ್ ಭವನ ಮತ್ತು ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ.

ಬೆಂಗಳೂರಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಲ್ಲಿಯವರೆಗೆ 110 ಸಿನಿಮಾಗಳು ಆಯ್ಕೆ ಆಗಿದ್ದು, ಈ ವರ್ಷ ಮಹಿಳಾ ಸಬಲೀಕರಣ ಥೀಮ್ ಬಗ್ಗೆ ಚರ್ಚೆ ನಡೆಯಲಿದೆ. 60ಕ್ಕೂ ಹೆಚ್ಚು ದೇಶಗಳ 200 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಒಟ್ಟು 400ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ರಾಜಾಜಿನಗರದ ಲುಲು ಮಾಲ್‌ನ ಸಿನಿಪೊಲಿಸ್‌ನ 11 ಸ್ಕ್ರೀನ್‌ಗಳು ಚಿತ್ರೋತ್ಸವದ ಪ್ರಧಾನ ಕೇಂದ್ರವಾಗಿರಲಿವೆ. ಒಟ್ನಲ್ಲಿ ಡಿಕೆ ಅವರ ಲುಲೂ ಮಾಲ್‌ನಲ್ಲೇ ಯಾಕೆ ಫಿಲಂ ಫೆಸ್ಟಿವಲ್‌ ಆಯೋಜಿಸಿರುವುದು ಎಂಬ ಪ್ರಶ್ನೆಗೆ ಡಿಸಿಎಂ ಅವರೇ ಉತ್ತರಿಸಬೇಕಾಗಿದೆ.

Leave a Reply

Your email address will not be published. Required fields are marked *