DK Entry: Ballari Banner War | ಬಳ್ಳಾರಿ ಬಾಬುಗಳ ಬಡಿದಾಟಕ್ಕೆ ಬಂಡೆ ಎಂಟ್ರಿ
ಬಳ್ಳಾರಿ ಬಾಬುಗಳ ಪ್ರತಿಷ್ಠೆಯ ಬ್ಯಾನರ್ ಬಡಿದಾಟ ರಾಜಕೀಯ ಸ್ವರೂಪ ತಾಳಿದೆ. ಕಾಂಗ್ರೆಸ್ ಬಿಜೆಪಿ ನಾಯಕರ ವಾಗ್ಯುದ್ಧಕ್ಕೆ ದಾರಿ ಮಾಡಿದೆ. ಆರೋಪ, ಪ್ರತ್ಯಾರೋಪಗಳು ಕಾವೇರಿವೆ. ಕಾಂಗ್ರೆಸ್ ಶಾಸಕ ಭರತ್‌ರೆಡ್ಡಿ ಹಾಗೂ ಬಿಜೆಪಿ ಶಾಸಕ ಜನಾರ್ದನರೆಡ್ಡಿ ಪರಸ್ಪರ ದೂರುಗಳನ್ನು ನೀಡಿದ್ದಾರೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿಗರ ಸಂಘರ್ಷಕ್ಕೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಬ್ಯಾನರ್ ಬಡಿದಾಟಕ್ಕೆ ಎಂಟ್ರಿಯಾಗಿದ್ದಾರೆ. ರೆಡ್ಡಿ, ರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೌದು, ಬಳ್ಳಾರಿ ಬಾಬುಗಳ ಬ್ಯಾನರ್ ಬಡಿದಾಟ ಬಡಪಾಯಿಯನ್ನು ಬಲಿ ಪಡೆದಿದೆ. ರೆಡ್ಡಿಗಳ ರಕ್ತ ರಾಜಕಾರಣ ಗಣಿ ನೆಲದಲ್ಲಿ ನೆತ್ತರೋಕುಳಿ ಹರಿಸಿದೆ. ಭರತ್ ರೆಡ್ಡಿ ಬೆಂಬಲಿಗ ರಾಜಶೇಖರ್ ರೆಡ್ಡಿ ದೇಹಕ್ಕೆ ಗುಂಡು ಹಾರಿಸಿದ್ದು ಯಾರ ಬಂದೂಕಿನಿಂದ ಎಂಬುದನ್ನು ಪತ್ತೆ ಮಾಡುವುದೇ ಪೊಲೀಸರಿಗೆ ಚಾಲೆಂಜಿಂಗ್ ಆಗಿದೆ. ಇದು ಬಳ್ಳಾರಿಯ ಪೊಲೀಸರಿಗೆ ಸಂಕಷ್ಟವಾಗಿದೆ. ಎಸ್‌ಪಿ ಪವನ್ ನೆಜ್ಜೂರು ಅಮಾನತಾಗಿದ್ದಾರೆ. ಇದು ಬಳ್ಳಾರಿ ಪೊಲೀಸರ ಆತಂಕ ಹೆಚ್ಚಿಸಿದೆ. ಈ ಬೆನ್ನಲ್ಲೇ ಪೊಲೀಸರು ತನಿಖೆಗೆ ಮತ್ತಷ್ಟು ವೇಗ ನೀಡಿದ್ದಾರೆ.
ಮಾಜಿ ಸಚಿವ ಜನಾರ್ದನರೆಡ್ಡಿ ಗಂಭೀರ ಆರೋಪ….?
ಜನಾರ್ದನರೆಡ್ಡಿಯವರು ಗಲಾಟೆ ಮೂಲಕ ನನ್ನನ್ನು ಮುಗಿಸಲು ಷಡ್ಯಂತ್ರ ನಡೆದಿದೆ. ದೇವರ ದಯೆಯಿಂದ ನನಗೆ ಏನೂ ಆಗಿಲ್ಲ ಎಂದು ಮಾಜಿ ಸಚಿವ ಜನಾರ್ದನರೆಡ್ಡಿ ಗಂಭೀರ ಆರೋಪ ಮಾಡಿದ್ದರು. ಇನ್ನೂ ಮುಖ್ಯವಾಗಿ ಹಿಂದಿನ ಬಿಜೆಪಿ ಸರ್ಕಾರದ ಆಡಳಿತ ವೇಳೆ 2010ರಲ್ಲಿ ಆಗಿನ ವಿಪಕ್ಷ ನಾಯಕರಾಗಿದ್ದ ಈಗಿನ ಸಿಎಂ ಸಿದ್ದರಾಮಯ್ಯ ಸರ್ಕಾರವೇ ಹೀಗೆ ಗಲಾಟೆ ಎಬ್ಬಿಸಿ ನನ್ನನ್ನು ಮುಗಿಸುವ ಹುನ್ನಾರ ನಡೆಸಿದೆ ಎಂಬ ಅನುಮಾನ ನನಗೆ ವ್ಯಕ್ತವಾಗುತ್ತಿದೆ ಎಂದು ಜನಾರ್ದನರೆಡ್ಡಿ ಆತಂಕ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ವಿವಿಧ ಬಿಜೆಪಿ ಮುಖಂಡರು ಜನಾರ್ದನರೆಡ್ಡಿಗೆ ಬೆಂಬಲವಾಗಿ ನಿಂತಿದ್ದರು. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದರು. ಇದು ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ.
Kanakapura Kuber Enters Reddy War | ಡಿಸಿಎಂ ಡಿಕೆ ಶಿವಕುಮಾರ್ ಬ್ಯಾನರ್ ಬಡಿದಾಟಕ್ಕೆ ಎಂಟ್ರಿಯಾಗಿದ್ದಾರೆ…..!
ಬಳ್ಳಾರಿ ಬಾಬುಗಳ ಗಲಾಟೆಯ ಎಲ್ಲ ಬೆಳವಣಿಗೆಗಳನ್ನು ಸೈಲೆಂಟಾಗಿಯೇ ನೋಡಿದ ಬಳಿಕ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಕಿ ಹಚ್ಚುವವರು ಕಾಂಗ್ರೆಸ್ಸಿನವರಲ್ಲ. ಬಿಜೆಪಿಯವರು. ಅಂದು ಗಲಾಟೆ ನಡೆದ ಗುರುವಾರದಂದು ಜನಾರ್ದನರೆಡ್ಡಿ ಅಲ್ಲಿಗೆ ಹೋಗುವವರೆಗೂ ಯಾವುದೇ ಗಲಾಟೆಗಳು ಆಗಿರಲಿಲ್ಲ. ಅವರು ಅಲ್ಲಿಗೆ ಹೋದ ನಂತರ ಗಲಾಟೆಗಳಾಗಿವೆ. ರೆಡ್ಡಿ ಹಾಗೂ ರಾಮುಲು ಡ್ರಾಮಾ ಮಾಸ್ಟರ್ಸ್. 2023ರ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಸೋತಿದ್ದಕ್ಕಾಗಿ ಹೀಗೆ ಡ್ರಾಮಾ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಆದರೆ, ಜನಾರ್ದನರೆಡ್ಡಿ ಮಾತ್ರ ಬೇರೆನೆ ಹೇಳುತ್ತಿದ್ದಾರೆ. ಅಲ್ಲದೆ, ಘಟನೆಗೆ ಸಂಬಂಧಿಸಿ ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಎಲ್ಲಾ ಘಟನೆಗೆ ಬಳ್ಳಾರಿ ಡಿವೈಎಸ್‌ಪಿ ಕಾರಣ. ಮೊದಲು ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಬಳ್ಳಾರಿ ನಗರದ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿಯನ್ನು ಬಂಧಿಸಬೇಕೆಂದು ಗಂಗಾವತಿ ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
ಒಟ್ಟಾರೆ ಬಳ್ಳಾರಿ ಬಾಬುಗಳ ಬ್ಯಾನರ್ ಬಡಿದಾಟಕ್ಕೆ ಬಡವ ಬಲಿಯಾಗಿದ್ದು, ಇದು ಕಾಂಗ್ರೆಸ್ ಬಿಜೆಪಿ ರಾಜಕೀಯ ಸಂಘರ್ಷಕ್ಕೆ ದಾರಿ ಮಾಡಿದೆ. ಈಗ ರೆಡ್ಡಿಗಳ ಕದನಕ್ಕೆ ಕನಕಪುರ ಕುಬೇರ ಎಂಟ್ರಿಯಾಗಿದ್ದು,ಬಿಜೆಪಿಯನ್ನು ಕೆರಳಿಸಿದೆ.ಇದು ಮತ್ತೆಲ್ಲಿಗೆ ಹೋಗಿ ನಿಲ್ಲಲಿದೆ ಎಂಬುದೇ ಸದ್ಯದ ಪ್ರಶ್ನೆ.
Related News : Ballari Banner Clash: The Secret Behind Blood Politics…! | ಬಳ್ಳಾರಿ ಬ್ಯಾನರ್ ಬಡಿದಾಟ, ರಕ್ತ ರಾಜಕೀಯದ ಸೀಕ್ರೆಟ್…!
