Chitradurga: Major Twist in Darshan Case — Witness Flips Sides | ದರ್ಶನ್ ಕೇಸಿಗೆ ಬಿಗ್ ಟ್ವಿಸ್ಟ್, ಉಲ್ಟಾ ಹೊಡೆದ ಸಾಕ್ಷಿ.!

RenukaSwamy Murder Case

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ತಾಯಿ ರತ್ನಪ್ರಭಾ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಹೀಗಾಗಿ ರತ್ನಪ್ರಭಾರನ್ನು ಕೇಸ್ ನಲ್ಲಿ ಪ್ರತಿಕೂಲ ಸಾಕ್ಷಿಯನ್ನಾಗಿ ಪರಿಗಣಿಸಲು ಎಸ್ ಪಿಸಿ ಮನವಿ ಮಾಡಿದ್ದಾರೆ. ಇದೇ ವೇಳೆ ಪ್ರಕರಣದ ಆರೋಪಿ ಪ್ರವಿತ್ರಾಗೌಡ ಸೇರಿಮೂವರಿಗೆ ಮನೆಯೂಟಕ್ಕೆ ಕೋರ್ಟ್ ಅನುಮತಿ ನೀಡಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸ್ವಾಮಿ ಕೊಲೆ ಕೇಸಲ್ಲಿ ಟ್ರಯಲ್ ಆರಂಭವಾಗಿದ್ದು, ರೇಣುಕಾಸ್ವಾಮಿ ತಂದೆ-ತಾಯಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಇದೇ ಹೊತ್ತಿನಲ್ಲಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಾಸಿಕ್ಯೂಷನ್ ವಿರುದ್ಧವೇ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಹೇಳಿಕೆ ನೀಡಿದ್ದಾರೆ.  ರತ್ನಪ್ರಭಾರ ಹಿಂದಿನ ಹೇಳಿಕೆಗೂ ಈಗಿನ ಹೇಳಿಕೆಗೂ ದ್ವಂದ್ವ ಕಂಡು ಬಂದ ಹಿನ್ನೆಲೆಯಲ್ಲಿ ರತ್ನಪ್ರಭಾರನ್ನು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಲು ಎಸ್‌ಪಿಪಿ ಮನವಿ ಮಾಡಿದ್ದಾರೆ. ಎಸ್‌ಪಿಪಿ ಪ್ರಸನ್ನಕುಮಾರ್ ಸಲ್ಲಿಸಿದ ಮನವಿ ಬಗ್ಗೆ ಕೋರ್ಟ್ ಜನವರಿ 5 ರಂದು ವಿಚಾರಣೆ ನಡೆಯಲಿದೆ.

ರೇಣುಕಾ ತಾಯಿ ಉಲ್ಟಾ ಹೇಳಿಕೆ, ಪಾಟಿ ಸವಾಲಿಗೆ SPP ಮನವಿ….!

ರತ್ನಪ್ರಭಾ 8 ಅಂಶಗಳಲ್ಲಿ ಪ್ರಾಸಿಕ್ಯೂಷನ್ ವಿರುದ್ಧವೇ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಮಗನ ಮೊಬೈಲ್ ಬಗ್ಗೆ ಗೊತ್ತಿಲ್ಲ ಎಂದು ಕೋರ್ಟಿನಲ್ಲಿ ಹೇಳಿದ್ದು,  ಪೊಲೀಸರ ಮುಂದೆ ಇದೇ ಮೊಬೈಲ್ ಅಂತ ಹೇಳಿದ್ದರು. ಜೊತೆಗೆ ಹತ್ಯೆಯಾದ ದಿನ 2 ಬಾರಿ ರೇಣುಕಾಗೆ ಕರೆ ಮಾಡಿದ್ದರು. ಆದರೆ,  ಕರೆ ಮಾಡಿಲ್ಲ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು.ಈ ಎಲ್ಲಾ ಹೇಳಿಕೆಗಳ ಆಧಾರದಲ್ಲಿ ರತ್ನಪ್ರಭಾರನ್ನು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಲು ಕೋರಲಾಗಿದೆ. ಒಂದು ವೇಳೆ ರೇಣುಕಾಸ್ವಾಮಿ ತಾಯಿಯನ್ನು ಪ್ರತಿಕೂಲ ಸಾಕ್ಷಿಯನ್ನಾಗಿ ಪರಿಗಣಿಸಿದ್ರೆ ಎಸ್‌ಪಿಪಿ ಪಾಟಿ ಸವಾಲು ಮಾಡಲಿದ್ದಾರೆ. ಖುದ್ದು ಎಸ್‌ಪಿಪಿಯೇ ರತ್ನಪ್ರಭಾ ವಿಚಾರಣೆ ನಡೆಸಲಿದ್ದಾರೆ.

ಇದೇ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ಪವಿತ್ರಾ ಗೌಡ ಸೇರಿದಂತೆ  ಮೂವರಿಗೆ ಮನೆಯೂಟಕ್ಕೆ ಅವಕಾಶ ನೀಡಿ, ಕೋರ್ಟ್ ಆದೇಶಿಸಿದೆ. ಜೈಲಿನಲ್ಲಿ ಒಳ್ಳೆಯ ಊಟ ಇಲ್ಲ, ಹೀಗಾಗಿ ಅನಾರೋಗ್ಯ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಮನೆಯೂಟಬೇಕೆಂದು ಆರೋಪಿ ಪವಿತ್ರಗೌಡ ಮನವಿ ಮಾಡಿದ್ದರು. ಜೊತೆಗೆ ನಾಗರಾಜು, ಲಕ್ಷ್ಮಣ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮೂವರ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಮೂವರಿಗೆ ದಿನಕ್ಕೊಂದು ಬಾರಿ ಮನೆಯೂಟ ನೀಡಲು ಅವಕಾಶ ನೀಡಿದೆ.

==========

Must Read : New Year Celebration Guidlines | ಹೊಸ ವರ್ಷಕ್ಕೆ ಕಠಿಣ ರೂಲ್ಸ್ ಕಾನೂನು ಮೀರಿದ್ರೆ ದಂಡಾಸ್ತ್ರ…!

Leave a Reply

Your email address will not be published. Required fields are marked *