Reddy House Raid | Explosive Info? | Search at Janardhana Reddy’s house, explosive information revealed…?

Ballari Reddy blood politics investigation at Janardhana Reddy house

ಬಳ್ಳಾರಿ ಬ್ಯಾನರ್‌ ಬಡಿದಾಟ ಪ್ರಕರಣದಲ್ಲಿ ಇಬ್ಬರು ಬಲಿತ ಶಾಸಕರ ಪ್ರತಿಷ್ಠೆಯ ಕದನದಲ್ಲಿ ಬಡಪಾಯಿ ರಾಜಶೇಖರರೆಡ್ಡಿಯ ಬಲಿಯಾಗಿದೆ. ಈ ಪ್ರಕರಣದಲ್ಲಿ ಅಧಿಕಾರ ವಹಿಸಿಕೊಂಡ 24 ತಾಸುಗಳಲ್ಲೇ ಎಸ್‌ಪಿ ಪವನ್‌ ನೆಜ್ಜೂರ್ ತಲೆದಂಡವನ್ನೂ ಪಡೆಯಲಾಗಿದೆ. ‌ಇಬ್ಬರೂ ಶಾಸಕರ ಬೆಂಬಲಿಗರೂ ಸೇರಿದಂತೆ 26 ಮಂದಿಯನ್ನು ಬಂಧಿಸಲಾಗಿದೆ. ಈ ಬೆನ್ನಲ್ಲೇ ಜನಾರ್ದನರೆಡ್ಡಿ ನಿವಾಸದಲ್ಲಿ ತನಿಖಾಧಿಕಾರಿಗಳು ಶೋಧ ಮುಂದುವರಿಸಿದ್ದಾರೆ. ಹಾಗಾದರೆ ಜನಾರ್ದನರೆಡ್ಡಿ ಮನೆಯಲ್ಲಿ ಏನಿದೆ..? ಸ್ಫೋಟಕಗಳಿದ್ದವಾ..? ಏನಿದರ ಮರ್ಮ..? 

ಬಳ್ಳಾರಿ ಬ್ಯಾನರ್‌ ಬಡಿದಾಟ, ಮಾನವೀಯತೆ ಮೆರೆದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್!!

ಹೌದು, 2026ರ ಹೊಸ ವರ್ಷ ಆರಂಭವಾಗುವ ಮೊದಲ ದಿನವೇ ಬಳ್ಳಾರಿಯಲ್ಲಿ ಬ್ಯಾನರ್‌ ಬೆಂಕಿ ಆವರಿಸಿತ್ತು. ಬಲಿತ ರೆಡ್ಡಿಗಳಿಬ್ಬರ ಪ್ರತಿಷ್ಠೆಯ ಸಮರದಲ್ಲಿ ಬಡಪಾಯಿ ರೆಡ್ಡಿ ಬಲಿಯಾಗಿದ್ದ. ಆತನ ಕುಟುಂಬ ಬೀದಿಗೆ ಬಿದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ನೊಂದ ಮೃತನ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಿದ್ದರು. ಈ ಘಟನೆಗೆ ಕಾರಣವಾದ  ದೊಂಬಿ, ಗಾಳಿಯಲ್ಲಿ ಗುಂಡು ಹಾರಿಸಿದ್ದಕ್ಕೆ ಸಂಬಂಧಿಸಿ ಶಾಸಕ ಭರತ್‌ರೆಡ್ಡಿ ಆಪ್ತ ಸತೀಶ್‌ ರೆಡ್ಡಿಯ ನಾಲ್ವರು ಗನ್‌ಮ್ಯಾನ್‌ಗಳು ಸೇರಿದಂತೆ 26 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದೊಂಬಿ, ಘರ್ಷಣೆಗೆ ಸಂಬಂಧಿಸಿದಂತೆ 6 ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದು, ಅದರಲ್ಲಿ ಉಲ್ಲೇಖಿಸಿದ್ದವರ ಪೈಕಿ ಯಾರೊಬ್ಬರೂ ಈಗ ಪೊಲೀಸರು ಬಂಧಿಸಿರುವ ಆರೋಪಿಗಳ ಪಟ್ಟಿಯಲ್ಲಿ ಸೇರಿಸಿಲ್ಲ ಎಂಬ ಆರೋಪವೂ ಇದೆ.

ಬಳ್ಳಾರಿ -ಸಿರುಗುಪ್ಪ ರಸ್ತೆಯ ಅವ್ವಂಬಾಯಿಯಲ್ಲಿ ಅಸಲಿಗೆ ಆಗಿದ್ದೇನು..?

ಈ ಬೆನ್ನಲ್ಲೇ ತನಿಖಾ ತಂಡಗಳು ಬಾಂಬ್‌ ನಿಷ್ಕ್ರಿಯ ದಳ ಅಧಿಕಾರಿಗಳು ಜನಾರ್ದನರೆಡ್ಡಿ ಮನೆಯಲ್ಲಿ ಶೋಧ ಮುಂದುವರಿಸಿದ್ದಾರೆ. ಬಳ್ಳಾರಿ -ಸಿರುಗುಪ್ಪ ರಸ್ತೆಯ ಅವ್ವಂಬಾವಿಯಲ್ಲಿರುವ ಜನಾರ್ದನ ರೆಡ್ಡಿ ನಿವಾಸದಲ್ಲಿ ಬಾಂಬ್‌ ನಿಷ್ಕ್ರಿಯ ದಳ ಅಧಿಕಾರಿಗಳು ಶೋಧ ಮಾಡಿದ್ದಾರೆ. ಹುಬ್ಬಳ್ಳಿಯಿಂದ ಬಂದಿದ್ದ ಬಾಂಬ್‌ ನಿಷ್ಕ್ರಿಯ ದಳಕ್ಕೆ DSMD ಹಾಗೂ ವಿಧಿ ವಿಜ್ಞಾನ ತಜ್ಞರು ಸಾಥ್‌ ನೀಡಿದ್ದಾರೆ. ಬ್ಯಾನರ್‌ ಬಡಿದಾಟ ವೇಳೆ ಜನಾರ್ದನರೆಡ್ಡಿ ಮನೆಯಲ್ಲಿ ಪತ್ತೆಯಾದ ಬುಲೆಟ್‌ ಸ್ಥಳ ಸೇರಿದಂತೆ ಜನಾರ್ದನರೆಡ್ಡಿ ನಿವಾಸದ ಇಂಚಿಂಚೂ ಶೋಧಿಸುತ್ತಿದ್ದಾರೆ. ಜನಾರ್ದನರೆಡ್ಡಿ ಮನೆಯಲ್ಲಿರುವ ಭೌತಿಕ ಅಂದ್ರೆ ಫಿಸಿಕಲ್‌ ಎವಿಡೆನ್ಸ್‌ ಹಾಗೂ ಡಿಜಿಟಲ್‌ ಎವಿಡೆನ್ಸ್‌ ಅಂದ್ರೆ ಸಿಸಿಟಿವಿ ಫುಟೇಜ್‌ ಸೇರಿದಂತೆ ಇದರ ಸಾಕ್ಷಗಳನ್ನು ತನಿಖಾಧಿಕಾರಿಗಳು ಸಂಗ್ರಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಗುರುಚರಣ್‌ ಸಿಂಗ್‌ ಸೇರಿದಂತೆ ಸತೀಶ್‌ ರೆಡ್ಡಿಯ ಇತರೆ ಮೂವರು ಖಾಸಗಿ ಗನ್‌ ಮ್ಯಾನ್‌ಗಳು Arrest ???

ದಾಳಿ ವೇಳೆ ಬಳ್ಳಾರಿ ನಗರ ಶಾಸಕ ಭರತ್‌ರೆಡ್ಡಿ ಅವರ ಆಪ್ತ ಗ್ರ್ಯಾನೈಟ್‌ ಉದ್ಯಮಿ ಸತೀಶ್‌ ರೆಡ್ಡಿ ಅವರ ಖಾಸಗಿ ಗನ್‌ಮ್ಯಾನ್‌ ಗುರುಚರಣ್‌ ಸಿಂಗ್‌ ಎಂಬಾತ ಜನಾರ್ದನ ರೆಡ್ಡಿ ಅವರ ಮನೆಯನ್ನು ಗುರಿಯಾಗಿಸಿ ಬಂದೂಕಿನಿಂದ ಫೈರ್‌ಮಾಡಿದ್ದ ದೃಶ್ಯ ವೈರಲ್‌ ಆಗಿತ್ತು. ಈ ಬೆನ್ನಲ್ಲೇ ಗುರುಚರಣ್‌ ಸಿಂಗ್‌ ಸೇರಿದಂತೆ ಸತೀಶ್‌ ರೆಡ್ಡಿಯ ಇತರೆ ಮೂವರು ಖಾಸಗಿ ಗನ್‌ ಮ್ಯಾನ್‌ಗಳನ್ನೂ ಬಂಧಿಸಲಾಗಿದೆ. ಅಲ್ಲದೆ, ಶಾಸಕ ಭರತ್‌ ರೆಡ್ಡಿ ಕಡೆಯ 11 ಹಾಗೂ ಜನಾರ್ದನರೆಡ್ಡಿ ಕಡೆಯ 15 ಬೆಂಬಲಿಗರನ್ನು ಬಂಧಿಸಲಾಗಿದೆ. ಇದಕ್ಕೆ ಸಂಬಂಧಿಸಿ ಭರತ್‌ರೆಡ್ಡಿ ಹಾಗೂ ಜನಾರ್ದನರೆಡ್ಡಿ ಇಬ್ಬರೂ ಕಡೆಯವರಲ್ಲಿ ಯಾರ ತಪ್ಪು ಎಷ್ಟೆಷ್ಟು ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖಾಧಿಕಾರಿಗಳು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕರ್ನಾಟಕ ಮಾತ್ರವಲ್ಲದೆ, ದೇಶದೆಲ್ಲೆಡೆ ಸದ್ದು ಮಾಡಿರುವ ಬಳ್ಳಾರಿ ರೆಡ್ಡಿಗಳ ರಕ್ತರಾಜಕಾರಣ ??

Who is to blame for the blood politics of the two Bellary Babus, Bharat Reddy and Janardhana Reddy? What is the real reason for the blood politics of the Bellary Reddies, which has caused a stir not only in Bellary, but also in Karnataka, but all over the country? To find out and prove it, the investigators have continued to search Janardhana Reddy’s house. Later, they will continue the investigation elsewhere. But. Who is wrong in this? Who is right? The answer to what evidence the investigators have found will be found soon.

=======================

Also More : VB-G RAM G Act, We Want MGNREGA — Congress Protest Against BJP | ವಿಬಿ-ಜಿ ರಾಮ್‌ಜಿ ಬೇಡ.. ಮನರೇಗಾ ಬೇಕು. ಕಮಲ ವಿರುದ್ಧ ಕೈ ಹೋರಾಟ!

Leave a Reply

Your email address will not be published. Required fields are marked *