Ballari Banner War:Zameer has given ₹25 lakh to Victim family | ಗಣಿ-ಗನ್ನು ದುರಂತ ಜಮೀರ್ 25 ಲಕ್ಷ ನೆರವು
ಗಣಿ-ಗನ್ನು ಗಲಾಟೆ ಗಣಿನಾಡನ್ನು ಕಂಗೆಡಿಸಿದೆ. ಬಳ್ಳಾರಿ ಬಾಬುಗಳ ಬ್ಯಾನರ್ ಬಡಿದಾಟದಲ್ಲಿ ಬಡಪಾಯಿ ಬಲಿಯಾಗಿದ್ದಾನೆ. ಆತನ ಕುಟುಂಬ ಬೀದಿಗೆ ಬಿದ್ದಿದೆ. ಕಾಂಗ್ರೆಸ್, ಬಿಜೆಪಿ ನಾಯಕರು ರಕ್ತರಾಜಕಾರಣದ ನಡುವೆಯೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಮಾನವೀಯತೆ ಮೆರೆದಿದ್ದಾರೆ.
ಬಳ್ಳಾರಿ ಬ್ಯಾನರ್ ಬಡಿದಾಟ, ಮಾನವೀಯತೆ ಮೆರೆದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್!
ಹೌದು, ಬಳ್ಳಾರಿಯಲ್ಲಿ ಬಲಿತ ಶಾಸಕರ ಬ್ಯಾನರ್ ಬಡಿದಾಟಕ್ಕೆ ಕುಟುಂಬಕ್ಕೆ ಆಸರೆಯಾಗಿದ್ದ ಬಡಪಾಯಿ ಬಲಿಯಾಗಿದ್ದಾರೆ. ಈಗ ಆತನ ಕುಟುಂಬಕ್ಕೆ ಚಿಂತೆಗೀಡಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪ್ರತ್ಯೇಕವಾಗಿ ಸತ್ಯಶೋಧನಾ ಸಮಿತಿಗಳನ್ನು ರಚಿಸಿವೆ. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ನೊಂದ ಕುಟುಂಬಕ್ಕೆ ನೆರವು ನೀಡಿದ್ದಾರೆ. ಬಳ್ಳಾರಿ ಬ್ಯಾನರ್ ಗಲಭೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಅವರ ಕುಟುಂಬಕ್ಕೆ 25 ಲಕ್ಷ ರೂ. ವೈಯಕ್ತಿಕ ನೆರವು ನೀಡಿದ್ದಾರೆ.
ಮೃತಪಟ್ಟ ರಾಜಶೇಖರ್ ರೆಡ್ಡಿ ಕುಟುಂಬಕ್ಕೆ ಮನೆ ಕಟ್ಟಿಸಿಕೊಡುವ ಭರವಸೆ…?
ಈ ವೇಳೆ ಮಾತನಾಡಿದ ಜಮೀರ್, ಜನಾರ್ದನ ರೆಡ್ಡಿ ಅವರ ಚಿಲ್ಲರೆ ತನದಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ. ನೊಂದ ರಾಜಶೇಖರ್ ರೆಡ್ಡಿ ಕುಟುಂಬಕ್ಕೆ ಮನೆ ಕಟ್ಟಿಸಿಕೊಡುವ ಭರವಸೆಯನ್ನೂ ನೀಡಿದ್ದಾರೆ. ‘ರಾಜಶೇಖರ್ ನಿಧನದಿಂದ ಅವರ ಕುಟುಂಬ ಆಧಾರಸ್ತಂಭವನ್ನೇ ಕಳೆದುಕೊಂಡಿದೆ. ತಂದೆ ಸಣ್ಣ ಹೋಟೆಲ್ ನಡೆಸುತ್ತಿದ್ದರು, ಮಗ ಆಸರೆಯಾಗಿದ್ದ. ಹಣದಿಂದ ಪ್ರಾಣ ತರಲು ಸಾಧ್ಯವಿಲ್ಲ, ಆದರೆ ಅವರ ಕುಟುಂಬಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ನಾನು, ಶಾಸಕ ಭರತ್ ರೆಡ್ಡಿ ಹಾಗೂ ಗಣೇಶ್ ಸೇರಿ ಈ ಸಹಾಯ ಮಾಡಿದ್ದೇವೆ. ಸ್ಲಂ ಬೋರ್ಡ್ ವತಿಯಿಂದ ಅವರಿಗೆ ಸುಸಜ್ಜಿತ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದೇನೆ. ಪಕ್ಷದ ವತಿಯಿಂದಲೂ ಹೆಚ್ಚಿನ ನೆರವು ನೀಡಲಾಗುವುದು’ ಎಂದು ತಿಳಿಸಿದ್ದಾರೆ.
ಇಬ್ಬರು ಬಲಿತವರ ಪ್ರತಿಷ್ಠೆಗೆ ಬಡುಪಾಯಿ ಬಲಿ !!
ಒಟ್ಟಾರೆ ಬಳ್ಳಾರಿಯಲ್ಲಿ ಬ್ಯಾನರ್ ಬಡಿದಾಟಕ್ಕೆ ಬಡಪಾಯಿ ಬಲಿಯಾಗಿದ್ದು, ನೊಂದ ಕುಟುಂಬಕ್ಕೆ ಜಮೀರ್ ನೆರವಾಗಿದ್ದಾರೆ. ಅವರಿಗೆ ಮನೆಯನ್ನೂ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಏನೇ ಆದರೂ ಹೋದ ರಾಜಶೇಖರ್ ಮಾತ್ರ ಬರಲ್ಲ. ಇಬ್ಬರು ಬಲಿತವರ ಪ್ರತಿಷ್ಠೆಗೆ ಬಡುಪಾಯಿ ಬಲಿಯಾಗಿದ್ದು ಮಾತ್ರ ವಿಪರ್ಯಾಸ.
=================================
Read More : DK Entry: Ballari Banner War | ಬಳ್ಳಾರಿ ಬಾಬುಗಳ ಬಡಿದಾಟಕ್ಕೆ ಬಂಡೆ ಎಂಟ್ರಿ
