Ballari Banner War; 26 Accused have been Arrested | ರೆಡ್ಡಿಗಳ ರಕ್ತ ಚರಿತ್ರೆ, 26 ಮಂದಿ ಅಂದರ್ !!

Ballari banner clash claims Congress worker’s life. 26 arrested, 6 FIRs filed

ಬ್ಯಾನರ್ ಕಟ್ಟುವ ವಿಚಾರಕ್ಕೆ ಕೈ ಕಾರ್ಯಕರ್ತ ಬಲಿಯಾಗಿದ್ದಾರೆ.  ಘಟನೆಗೆ ಜಿಲ್ಲಾ ಎಸ್ಪಿ ಕರ್ತವ್ಯ ನಿರ್ಲಕ್ಷ್ಯವೇ ಕಾರಣವೆಂದು ಸರ್ಕಾರ ಆರೋಪಿಸಿ ಎಸ್ಪಿ ಅವರನ್ನು ಸಸ್ಪೆಂಡ್ ಮಾಡಿದ್ರೆ, ಸಸ್ಪೆಂಡ್ ಆದ ಎಸ್ಪಿ ಅತ್ಮಹತ್ಯೆಗೆ ಯತ್ನಿಸಿದ್ದಾರೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೊಸ ಬಾಂಬ್ ಸಿಡಿಸಿದ್ದಾರೆ.  ಅದ್ರೆ ನಿಜಕ್ಕೂ ಆಗಿದ್ದಾರೂ ಏನು…?

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೊಸ ಬಾಂಬ್ …??

ಬ್ಯಾನರ್​ ಕಟ್ಟುವ ವಿಚಾರ ಸಂಬಂಧ ಜನವರಿ 1ರಂದು ಬಳ್ಳಾರಿನಗರ ಶಾಸಕ ಭರತ್ ರೆಡ್ಡಿ ಹಾಗೂ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಬೆಂಬಲಿಗರ ಸಂಘರ್ಷದಲ್ಲಿ ಕೈ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಬಲಿಯಾಗಿದ್ದಾರೆ. ಈ ಪ್ರಕರಣ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಈ ನಡುವೆ ಬಳ್ಳಾರಿಯ ಬ್ರೂಸ್​ಪೇಟೆ ಠಾಣೆ ಪೊಲೀಸರು, ಘಟನಾ ಸಂಬಂಧ ಒಟ್ಟು 26ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ 6 ಎಫ್​​ಐಆರ್ ದಾಖಲಾಗಿವೆ. ಒಟ್ಟು 26 ಮಂದಿಯ ಪೈಕಿ 13 ಕಾಂಗ್ರೆಸ್ ಹಾಗೂ ಬಿಜೆಪಿ 10 ಕಾರ್ಯಕರ್ತರನ್ನು ಪೊಲೀಸ್ರು ಬಂಧಿಸಿದ್ದಾರೆ.

ಇಬ್ಬರು ಬಲಿತವರ ಪ್ರತಿಷ್ಠೆಗೆ ಬಡುಪಾಯಿ ಬಲಿ !!

ಶಾಸಕರಿಬ್ಬರ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಪ್ರಾಣ ಚೆಲ್ಲಿದ್ದಾನೆ. ಈತನ ಬೆನ್ನು ಹೊಕ್ಕಿದ್ದ 12 ಎಂಎಂ ಬುಲೆಟ್ ಯಾರ ಗನ್​ನಿಂದ ಹಾರಿ ಬಂದಿದ್ದು ಅನ್ನೋದು ನಿಗೂಢವಾಗಿಯೇ ಉಳಿದಿತ್ತು. ಆದ್ರೆ, ಇದೀಗ ರಾಜಶೇಖರನ ಜೀವ ಬಲಿ ಪಡೆದಿದ್ದು, ಸತೀಶ್ ರೆಡ್ಡಿ ಅಂಗರಕ್ಷಕ ಗುರುಚರಣ್ ಸಿಂಗ್ ಹಾರಿಸಿದ್ದ ಗುಂಡು ಎಂದು ತಿಳಿದು ಬಂದಿದೆ. ಈ ಸಂಬಂಧ ಪೊಲೀಸರು ಗುರುಚರಣ್ ಸಿಂಗ್​ನನ್ನ ವಶಕ್ಕೆ ಪಡೆದಿದ್ದಾರೆ. ಸತೀಶ್ ರೆಡ್ಡಿಯ ಇನ್ನುಳಿದ ಇಬ್ಬರು ಖಾಸಗಿ ಅಂಗರಕ್ಷಕರು, ಬಲ್ಜಿತ್‌ ಸಿಂಗ್, ಗುರುಚರಣ್​ ಸಿಂಗ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಪಂಜಾಬ್ ಮೂಲದ ಈ ಮೂವರು ಖಾಸಗಿ ಗನ್​ಮ್ಯಾನ್​ಗಳು, ಜನವರಿ 1ನೇ ತಾರೀಕು ಫೈರಿಂಗ್ ನಡೆಸಿದ್ದರು.

ಬಡಿಗೆ ಬಡಿದಾಟದ ನಡುವೆ ಗುಂಡಿನ ಸುರಿಮಳೆ !!

ಈ ನಡುವೆ  ಶಾಸಕ ಭರತ್ ರೆಡ್ಡಿ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೂ ಸಂಕಷ್ಟ ಶುರುವಾಗಿದೆ. ಗಲಾಟೆಗೆ ಕುಮ್ಮಕ್ಕು ಕೊಟ್ಟ ಆರೋಪದಲ್ಲಿ ಬಂಧನ ಮಾಡೋ ಸಾಧ್ಯತೆಯಿದೆ. ಪೊಲೀಸರು ಸುಮಟೋ ಕೇಸ್ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ. ಈ ನಡುವೆ ಗಲಭೆಯ ಒಂದೊಂದೇ ದೃಶ್ಯಗಳು ಹೊರಬೀಳ್ತಿವೆ. ಜನಾರ್ದನ ರೆಡ್ಡಿ ಮನೆ ಮೇಲೆ ದಾಳಿಗೆ ಮೊದಲೇ ಪ್ಲ್ಯಾನ್ ಆಗಿತ್ತಾ ಎಂಬ ಪ್ರಶ್ನೆ ವ್ಯಕ್ತವಾಗಿದೆ. ಈ ವಿಡಿಯೋದಲ್ಲಿ ಪುಂಡರ ಗುಂಪೊಂದು ಆಟೋದಲ್ಲಿ ಬಾಟಲ್ ಹಾಗೂ ಪೆಟ್ರೋಲ್ ಬಾಂಬ್ ತುಂಬಿಸಿಕೊಂಡು ಬಂದಿತ್ತು. ಜನವರಿ 1ರಂದು ನಡೆದ ಗಲಾಟೆ ವೇಳೆ ಕಲ್ಲು ತೂರಾಟ, ಬಡಿಗೆ ಬಡಿದಾಟದ ನಡುವೆ ಗುಂಡಿನ ಸುರಿಮಳೆಗೈಯಲಾಗಿತ್ತು. ಭರತ್ ಆಪ್ತ ಸತೀಶ್ ರೆಡ್ಡಿಯ ಖಾಸಗಿ ಅಂಗರಕ್ಷಕರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಪೊಲೀಸರು ಕೂಡ ಪರಿಸ್ಥಿತಿ ತಿಳಿಗೊಳಿಸಲು ಫೈರಿಂಗ್ ಮಾಡಿದ್ದರು.

ಬಳ್ಳಾರಿ ಎಸ್‌.ಪಿ ಪವನ್ ನೆಜ್ಜೂರ್ ಸಸ್ಪೆಂಡ್ & ಆತ್ಮ*ಹತ್ಯೆಗೆ ಯತ್ನ ??

ಇದೇ ವೇಳೆ ಸಸ್ಪೆಂಡ್ ಆದ ಬಳ್ಳಾರಿ ಎಸ್‌.ಪಿ ಪವನ್ ನೆಜ್ಜೂರ್ ಆತ್ಮ*ಹತ್ಯೆಗೆ ಯತ್ನ ವದಂತಿ ಬಗ್ಗೆ ಕೇಂದ್ರ‌ ಸಚಿವೆ ಶೋಭಾ ಕರಂದ್ಲಾಜೆ ಹೊಸ ಬಾಂಬ್‌ ಸಿಡಿಸಿದ್ದಾರೆ. ಪವನ್ ನೆಜ್ಜೂರ್ ಆತ್ಮಹತ್ಯೆ ಯತ್ನಕ್ಕೂ ಮುನ್ನ ಡೆತ್‌ನೋಟ್ ಬರೆದಿದ್ರು ಅಂತ ಸ್ಫೋಟಕ ಹೇಳಿಕೆ ನೀಡಿದ್ದಾರೆ.ರಾಜ್ಯ ಸರ್ಕಾರ ಪವನ್ ಅವರ ಡೆತ್‌ನೋಟ್ ಮುಚ್ಚಟ್ಟಿದೆ. ಅಧಿಕಾರಿಗಳು ನಿನ್ನೆ ಡೆತ್‌ನೋಟ್ಕೈಯಲ್ಲಿ ಮುಚ್ಚಿಟ್ಕೊಂಡು ಮಾತಾಡಿದ್ರು. ಅದರಲ್ಲಿ‌ ಏನಿದೆ ಅಂತ ಬಹಿರಂಗಪಡಿಸಬೇಕು ಅಂತ ಆಗ್ರಹಿಸಿದ್ದಾರೆ. ನಮಗೆ ಬಂದಿರುವ ಮಾಹಿತಿ ಪ್ರಕಾರ ಡೆತ್‌ನೋಟ್‌ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರು ಬರೆದಿದ್ದಾರೆ. ಡೆತ್‌ನೋಟ್ ನಲ್ಲಿ ಏನಿದೆ? ಸರ್ಕಾರ ಯಾಕೆ ಮುಚ್ಚಿಡೋ ಪ್ರಯತ್ನ ಮಾಡ್ತಿದೆ ಅಂತ ಸಚಿವೆ ಆಗ್ರಹಿಸಿದ್ರು. ಪವನ್ ನೆಜ್ಜೂರ್ ಆತ್ಮಹತ್ಯೆಗೆ ಯತ್ನಿಸಿಲ್ಲ ಅಂತ ಸರ್ಕಾರ ಹೇಳ್ತಿರುವಾಗ ಶೋಭಾ ಕರಂದ್ಲಾಜೆ ಹೇಳಿಕೆ ನಾನಾ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಗಣಿನಾಡು ಬಳ್ಳಾರಿ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಿದ್ದಾಜಿದ್ದಿನ ರಾಜಕಾರಣ !!

ಒಟ್ಟಾರೆ, ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಗಲಭೆಯೊಂದು ಕೈ ಕಾರ್ಯಕರ್ತನ ಬಲಿ ಪಡೆದುಕೊಂಡಿದೆ. ಅದ್ರೆ, ಸದ್ಯ ತಣ್ಣಗಿದ್ದ ಗಣಿನಾಡು ಬಳ್ಳಾರಿ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಿದ್ದಾಜಿದ್ದಿನ ರಾಜಕಾರಣ ಅನಾವರಣಗೊಂಡಿದೆ. ಕ್ಷುಲ್ಲಕ ಘಟನೆಯೊಂದು ಎರಡು ಪಕ್ಷಗಳ ನಡುವೆ ತೀವ್ರ ಸಂಘರ್ಷ ಉಂಟುಮಾಡಿದ್ದು ಮಾತ್ರ ವಿಷಾದನೀಯ.

=======================

Related News : Ballari Banner War:Zameer has given ₹25 lakh to Victim family | ಗಣಿ-ಗನ್ನು ದುರಂತ ಜಮೀರ್‌ 25 ಲಕ್ಷ ನೆರವು

Leave a Reply

Your email address will not be published. Required fields are marked *