Alone Women are being Targeted | ಒಂಟಿ ಮಹಿಳೆಯರೇ ಟಾರ್ಗೆಟ್ ! ಅಪ್ಪ-ಮಕ್ಕಳು ಬರ್ತಾರೆ ಹುಷಾರ್ ! | focus tv
ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ ದೋಚುತ್ತಿದ್ದ ಖತರ್ನಾಕ್ ಖದೀಮ ಅಪ್ಪ-ಮಕ್ಕಳು ಇದೀಗ ಕಂಬಿಲಾಕ್ ಆಗಿದ್ದಾರೆ. ಕೇವಲ 11 ದಿನಗಳಲ್ಲಿ ಅಪ್ಪ-ಮಕ್ಕಳ ಗ್ಯಾಂಗ್ ಹಿಡಿದು ಪೊಲೀಸ್ರು ಜೈಲಿಗೆ ಅಟ್ಟಿದ್ದಾರೆ.
ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ದೋಚುತ್ತಿದ್ದ ಅಪ್ಪ-ಮಕ್ಕಳಿಬ್ಬರನ್ನು ಪೊಲೀಸ್ರು ಆರೆಸ್ಟ್ ಮಾಡಿದ್ದಾರೆ. ಡಿಸೆಂಬರ್ 11 ರಂದು ಶಿಡ್ಲಘಟ್ಟದಲ್ಲಿ ಭಾರೀ ದರೋಡೆಯೊಂದು ನಡೆದು ಹೋಗಿತ್ತು. ಮಹಿಳೆ ಬಾಯಿಗೆ ಟೇಪ್ ಹಾಕಿ, ಭೀಕರವಾಗಿ ಹಲ್ಲೆ ನಡೆಸಿ, ಮನೆಯಲ್ಲಿದ್ದ3 ಕೋಟಿಗೂ ಅಧಿಕ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಕಳವಾಗಿತ್ತು. ಇದೀಗ ದರೋಡೆ ಪ್ರಕರಣದಲ್ಲಿ ಅಪ್ಪ-ಮಕ್ಕಳನ್ನು ಪೊಲೀಸ್ರು ಬಂಧಿಸಿ, ಜೈಲಿಗಟ್ಟಿದ್ದಾರೆ.
ಬಂಗಾರ ಕದ್ದ ಕಳ್ಳರನ್ನು 54 ವರ್ಷದ ಇನಾಯತ್ ಪಾಷಾ ಹಾಗೂ ಆತನ ಮಕ್ಕಳಾದ 25 ವರ್ಷದ ಶಾರುಖ್ ಪಾಷಾ, 24 ವರ್ಷದ ಸಾಹಿತ್ ಪಾಷಾನನ್ನು ಪೊಲೀಸ್ರು ಬಂಧಿಸಿದ್ದಾರೆ. ಈ ತಿಂಗಳ 11 ರಂದು ನಸುಕಿನ 3 ಗಂಟೆ ವೇಳಯಲ್ಲಿ ಶಿಡ್ಲಘಟ್ಟ ಪಟ್ಟಣದ ಇಲಾಹಿ ನಗರದಲ್ಲಿ ಭಾರೀ ದರೋಡೆಯೊಂದು ನಡೆದಿತ್ತು. ಮನೆಯವರೆಲ್ಲರೂ ರಾಜಸ್ಥಾನದ ಆಜ್ಮೀರಕ್ಕೆ ಹೋಗಿದ್ದಾಗ, ಮನೆಯಲ್ಲಿ ಮುಬಾರಕ್ ಎಂಬ ಮಹಿಳೆ ಮಾತ್ರವೇ ಇದ್ದರು.
ನಸುಕಿನಲ್ಲಿ ಮನೆಗೆ ನುಗ್ಗಿದ ತಂದೆ ಹಾಗೂ ಮಕ್ಕಳು ಒಂಟಿ ಮನೆಯಲ್ಲಿದ್ದ ಮಹಿಳೆ ಮುಬಾರಕ್ ಮೇಲೆ ಮಚ್ಚು, ದೊಣ್ಣೆಗಳಿಂದ ಭೀಕರವಾಗಿ ಹಲ್ಲೆ ನಡೆಸಿ, ಆಕೆ ಕೂಗಿಕೊಳ್ಳದಂತೆ ಬಾಯಿಗೆ ಗಮ್ ಟೇಪ್ ಅಂಟಿಸಿ, ಮನೆಯಲ್ಲಿದ್ದ 3 ಕೆಜಿ ಬಂಗಾರ ಹಾಗೂ ಬೆಳ್ಳಿ ದರೋಡೆ ಮಾಡಿದ್ದರು ಎಂದು ಮಹಿಳೆ ಆರೋಪಿಸಿದ್ದ 11 ದಿನಗಳಲ್ಲಿ ತಂದೆ-ಮಕ್ಕಳ ಬಂಧನವಾಗಿದೆ.
ದರೋಡೆಗೂ ಮುನ್ನ ತಂದೆ ಮನೆ ಮೇಲಿನ ಗೇಟ್ ನಿಂದ ಬಂದು, ಸಿಸಿಟಿವಿ ವೈರ್ ಕಟ್ ಮಾಡಿದ್ದನು ಮಕ್ಕಳು, ಬಳಿಕ ದರೋಡೆ ಮಾಡಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಶಿಡ್ಲಘಟ್ಟ ಠಾಣೆ ಪೊಲೀಸರು, ದರೋಡೆಕೋರರ ಬೆನ್ನು ಬಿದ್ದಿದ್ದರು. ಇದೀಗ ದರೋಡೆ ಮಾಡಿದ್ದ ತಂದೆ, ಮಕ್ಕಳನ್ನು ಪೊಲೀಸರು ಆರೆಸ್ಟ್ ಬಂಧಿಸಿದ್ದಾರೆ. ಡಿಸೆಂಬರ್ 11 ರಂದು ಇಲಾಯಿ ನಗರದಲ್ಲಿ 3 ಕೆಜಿ ಚಿನ್ನ – ಬಂಗಾರ ಕಳ್ಳತನವಾದ ಬಗ್ಗೆ ವರದಿಯಾಗಿತ್ತು.
