ರಾಜ್ಯಾಧ್ಯಕ್ಷ ಸ್ಥಾನಕ್ಕಿಲ್ಲ ಸರ್ಜರಿ ಈಗ ವರಿಷ್ಠರ ಬಂಟ ವಿಜಯೇಂದ್ರ | Vijayendra | Focus Tv Kannada
ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಈಗ ಕಾಲ ಕೂಡಿ ಬಂದಿದೆ. ಇದೇ ತಿಂಗಳು ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ರಾಜ್ಯ ಘಟಕದ ಅಧ್ಯಕ್ಷರ ನೇಮಕವಾಗಿದ್ದು, ಕರ್ನಾಟಕ ಮಾತ್ರವೇ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಮುಂದುವರೆಯುತ್ತಾರಾ ಅಥವಾ ವರಿಷ್ಠರು ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸುತ್ತಾರಾ ಎಂಬ ಕುತೂಹಲ ಮೂಡಿದೆ. ಬಿಜೆಪಿಯಲ್ಲಿ ಈಗ ಜನರೇಷನ್ ಚೇಂಜ್ ಆಗ್ತಿದೆ. ಪಕ್ಷದಲ್ಲಿ ದೊಡ್ಡ ಮಟ್ಟದ ಬದಲಾವಣೆಯ ಗಾಳಿ ಬೀಸುತ್ತಿದೆ. ಕಳೆದ ತಿಂಗಳಷ್ಟೇ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನಿತಿನ್ ನಬಿನ್ ರನ್ನು ಬಿಜೆಪಿ ನೇಮಿಸಿತ್ತು. ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಇದೇ 20ರಂದು ಚುನಾವಣೆ ನಡೆಯಲಿದೆ. ರಾಷ್ಟ್ರೀಯ ಕಾರ್ಯಾಧ್ಯಕ್ಷ ನಿತಿನ್ ನಬಿನ್ ನೂತನ ಅಧ್ಯಕ್ಷರಾಗಲು ವೇದಿಕೆಯೂ ಸಜ್ಜಾಗಿದೆ. ರಾಷ್ಟ್ರಾಧ್ಯಕ್ಷರ ಎಲೆಕ್ಷನ್‌ಗೂ ಮುನ್ನ ಪ್ರಮುಖ ರಾಜ್ಯಗಳ ಘಟಕಕ್ಕೆ ನೂತನ ಸಾರಥಿಗಳನ್ನೂ ನೇಮಿಸಿದ್ದಾಗಿದೆ. ಆದ್ರೆ ಕರ್ನಾಟಕ ಮಾತ್ರವೇ ಬಾಕಿ ಉಳಿದಿದೆ. ಜ.19ರೊಳಗೆ ರಾಜ್ಯ ಘಟಕಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ಎರಡು ವರ್ಷ ಪೂರ್ಣಗೊಳಿಸಿದ್ದಾಗಿದೆ. ಅದಾಗಲೇ ಅಧ್ಯಕ್ಷನಾಗಿ ಮುಂದುವರೆಯಲು ವಿಜಯೇಂದ್ರ ಸಾಕಷ್ಟು ಬಾರಿ ದೆಹಲಿಗೆ ತೆರಳಿ ವರಿಷ್ಠರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನೂ ಮಾಡಿದ್ದಾಗಿದೆ. ಸದ್ಯ ವಿಜಯೇಂದ್ರನಿಗೆ ಇನ್ನಷ್ಟು ಸಮಯ ಕೊಡಲು ವರಿಷ್ಠರು ಮನಸ್ಸು ಮಾಡಿದ್ದಾರೆ. 2028ರ ವಿಧಾನಸಭಾ ಚುನಾವಣೆಗೂ ಮುನ್ನ ವಿಜಯೇಂದ್ರ ಸಾಧನೆಗಳನ್ನು ನೋಡಿಕೊಂಡು ಅದ್ಯಕ್ಷ ಸ್ಥಾನ ಹಸ್ತಾಂತರದ ಬಗ್ಗೆ ನಿರ್ಧರಿಸಲು ವರಿಷ್ಠರು ಯೋಜಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
Also Read | Big shock to Siddu! | ಡಿಕೆ ಟೀಮ್ ಆಕ್ಟಿವ್ ಸಿದ್ದುಗೆ ಬಿಗ್ ಶಾಕ್.! | Focus TV Kannada
