Actor Yash’s Mother Pushpa’s House Demolished in Hassan | ಯಶ್‌ ತಾಯಿಗೆ ಭೂ ಕಂಟಕ, ಟಾಕ್ಸಿಕ್‌ಗೆ ಮುಳುವಾಗುತ್ತಾ ?

Actor Yash’s Mother Pushpa’s House Demolished in Hassan | ಯಶ್‌ ತಾಯಿಗೆ ಭೂ ಕಂಟಕ, ಟಾಕ್ಸಿಕ್‌ಗೆ ಮುಳುವಾಗುತ್ತಾ ?

ಸ್ಯಾಂಡಲ್​ವುಡ್​ನ ರಾಕಿಂಗ್ ಸ್ಟಾರ್ ಯಶ್ ತಾಯಿಯಿಂದ ಅಕ್ರಮವಾಗಿ ಜಾಗ ಒತ್ತುವರಿ‌ ಮಾಡಿರುವ ಆರೋಪ ಕೇಳಿ ಬಂದಿದೆ. ವಾರಸುದಾರರು ಒತ್ತುವರಿ ಮಾಡಿದ್ದ ಕಾಂಪೌಡ್ ತೆರವುಗೊಳಿಸಿದ್ದಾರೆ. ಬೆಳ್ಳಂ ಬೆಳಿಗ್ಗೆ ಮೂಲ ಮಾಲೀಕನಿಂದ ಕಾಂಪೌಂಡ್ ತೆರವು ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ಯಶ್‌ ತಾಯಿ ಅವರ ಈ ವಿವಾದ ಸದ್ಯ ಟಾಕ್ಸಿಕ್‌ ಸಿನಿಮಾಗೆ ಮುಳುವಾಗುತ್ತಾ….?

ಬೆಳಂಬೆಳಿಗ್ಗೆ ನಟ ಯಶ್‌ ಅವರಿಗೆ ಭೂ ಒತ್ತುವರಿ ತೆರವು ಶಾಕ್‌ ನೀಡಿದೆ. ನಟ ಯಶ್ ಅವರ ತಾಯಿಗೆ ಸೇರಿದ ಮನೆಯ ಕಾಂಪೌಂಡ್ ಅನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ವಿದ್ಯಾನಗರದ ಲಕ್ಷ್ಮ್ಮಮ್ಮ ಎಂಬ ಜಾಗದಲ್ಲಿರುವ ಯಶ್ ತಾಯಿ ಪುಷ್ಪಾ ಅವರಿಗೆ ಸೇರಿದ ಮನೆಯ ಸುತ್ತಲು ಅಕ್ರಮವಗಿ ಕಾಂಪೌಂಡ್ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸುಮಾರು 100/50 ಅಡಿ ಅಕ್ರಮವಾಗಿ ಜಾಗ ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಿಸಲಾಗಿದೆ ಎಂದು ಜಾಗದ ಮಾಲೀಕರು ಕೋರ್ಟ್ ಮೆಟ್ಟಿಲೇರಿ, ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದಾರೆ.

ನಟ ಯಶ್ ಅವರ ತಾಯಿಗೆ ಸೇರಿದ ಮನೆಯ ಕಾಂಪೌಂಡ್ ಅನ್ನು ಜೆಸಿಬಿ ಮೂಲಕ ಧ್ವಂಸ ??

ಪಕ್ಕದ ಮನೆ ಲಕ್ಷ್ಮಮ್ಮ ಎಂಬುವರ ಜಾಗವನ್ನು ಯಶ್‌ ಅವರ ತಾಯಿ ಪುಷ್ಪಾ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಜಾಗದ ಒಡತಿ ಲಕ್ಷ್ಮಮ್ಮ ಎಂಬುವರು ಮೈಸೂರಿನಲ್ಲಿ ನೆಲೆಸಿದ್ದು, ವಯಸ್ಸಾಗಿರುವ ಹಿನ್ನೆಲೆ ಸ್ಥಳೀಯರಾದ ದೇವರಾಜ್‌ ಎಂಬುವರಿಗೆ ಜಿಪಿಎ ಹೋಲ್ಡರ್‌ ಆಗಿ ಮಾಡಲಾಗಿದೆ. ಈ ಸಂಬಂಧ ದೇವರಾಜ್‌ ಅವರು ಕೋರ್ಟ್‌ ನಿಂದ ಆದೇಶ ತಂದು ಐದು ಗುಂಟೆ ಜಾಗವನ್ನು ತೆರವುಗೊಳಿಸಿದ್ದಾರೆ. ಜಿಪಿಎ ಹೋಲ್ಡರ್‌ ದೇವರಾಜ್‌ ಹೇಳುವಂತೆ ಲಕ್ಷ್ಮಮ್ಮ ಅವರ ಜಾಗದಲ್ಲಿ ಯಶ್‌ ತಾಯಿ ಪುಷ್ಪಾ ಅವರು ಕಾಂಪೌಂಡ್‌ ನಿರ್ಮಿಸಿಕೊಂಡಿದ್ದಾರೆ.

ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಹಾಗಾಗಿ 2022ರಲ್ಲಿ ನ್ಯಾಯಾಲಯಕ್ಕೆ ಎಲ್ಲಾ ದಾಖಲಾತಿಗಳನ್ನು ನೀಡಿದ್ದು, ತೀರ್ಪು ಲಕ್ಷ್ಮಮ್ಮ ಅವರ ಕಡೆಯಾಯ್ತು. ತೀರ್ಪು ಬಂದ ಬಳಿಕ ಹಲವು ಬಾರಿ ಚರ್ಚೆಗೆ ಆಹ್ವಾನಿಸಿದರೂ ಪ್ರಯೋಜನವಾಗಲಿಲ್ಲ. ಸಭೆ ಏರ್ಪಡಿಸಿದರೂ ಪುಷ್ಪ ಅವರು ಬರಲಿಲ್ಲ. ಹಾಗಾಗಿ ನಾವು ತೆರವುಗೊಳಿಸುವ ಕ್ರಮ ಕೈಗೊಳ್ಳಲಾಯ್ತು ಎಂದು ವಿವರಿಸಿದ್ದಾರೆ. ಇದೀಗ ಕೋರ್ಟ್ ನಿಂದ ಅನುಮತಿ ಪಡೆದು ಅಧಿಕಾರಿಗಳ ಸಮ್ಮುಖದಲ್ಲಿ ಜೆಸಿಬಿ ಮೂಲಕ ಅಕ್ರಮನಾವಿ ನಿರ್ಮಿಸಿದ್ದ ಕಾಂಪೌಂಡ್ ತೆರವುಗೊಳಿಸಲಾಗಿದೆ.

ಚರ್ಚೆಗೆ ಆಹ್ವಾನಿಸಿದರೂ, ಸಭೆ ಏರ್ಪಡಿಸಿದರೂ ಪುಷ್ಪ ಅವರು ಬರಲಿಲ್ಲ, ಏಕೆ ??

ಕಾಂಪೌಂಡ್ ತೆರವು ಮಾಡುತ್ತಿದ್ದಂತೆ ಪುಷ್ಪ ಪರ ವಕೀಲರು ಸ್ಥಳಕ್ಕೆ ಆಗಮಿಸಿದ್ದು, ಕಾಂಪೌಂಡ್ ತೆರವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪುಷ್ಪಾ ಅವರು ಕೂಡ ಮಾತನಾಡಿ, ಪಿಡಿಓ ನಟರಾಜ್‌ ಮತ್ತು ದೇವರಾಜ್‌ ಸೇರಿಕೊಂಡು ದುಡ್ಡಿಗಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಯಶ್‌ ಅವರ ತಾಯಿ ಆಗಾಗ ವಿವಾದಗಳಿಂದಲೇ ಸುದ್ದಿಯಾಗುತ್ತಿರುತ್ತಾರೆ. ಈ ಹಿಂದೆ ಮನೆ ಬಾಡಿಗೆ ವಿಚಾರ ಹಾಗೂ ಕೊತ್ತಲವಾಡಿ ಚಿತ್ರದ ಸಹ ಕಲಾವಿದರಿಬ್ಬರಿಗೆ ಸಂಭಾವನೆಯನ್ನೇ ನೀಡಿಲ್ಲ ಎಂದು ಕೂಡ ಆರೋಪ ಕೇಳಿ ಬಂದಿತ್ತು. ಇದೀಗ ಅಕ್ರಮವಾಗಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ನಲ್ಲಿ ಯಶ್‌ ತಾಯಿ ಅವರ ಈ ವಿವಾದ ಸದ್ಯ ಟಾಕ್ಸಿಕ್‌ ಸಿನಿಮಾಗೆ ಮುಳುವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Must Read : Home Meals: Pavithra Gowda & Darshan | ಪವಿತ್ರಾ ಗೌಡಗೆ ಮನೆಯೂಟ, ದರ್ಶನ್‌ಗೆ ಯಾಕಿಲ್ಲ?

Leave a Reply

Your email address will not be published. Required fields are marked *