Ayodhya: 2nd Anniversary of Ram Lalla Pran Pratishtha | ರಾಮಲಲ್ಲಾ ಪ್ರತಿಷ್ಠಾಪನೆಯ 2ನೇ ವಾರ್ಷಿಕೋತ್ಸವ

Ayodhya: 2nd Anniversary of Ram Lalla Pran Pratishtha | ರಾಮಲಲ್ಲಾ ಪ್ರತಿಷ್ಠಾಪನೆಯ 2ನೇ ವಾರ್ಷಿಕೋತ್ಸವ

ಅದು ಕೋಟಿ ಕೋಟಿ ಭಾರತೀಯ ಕನಸು ನನಸಾದ ದಿನ. ಶ್ರೀರಾಮನ ಜನ್ಮಸ್ಥಳ ಎಂದೇ ನಂಬಲಾಗಿರುವ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪಿಸಿ 2 ವರ್ಷಗಳೇ ನಡೆದಿವೆ. ಈಗ ಸಂಭ್ರಮ ಮನೆ ಮಾಡಿದೆ. ಹೌದು, ಅಯೋಧ್ಯೆಯಲ್ಲಿ ಶ್ರೀರಾಮನ ನಾಮ ಸ್ಮರಣೆಗೆ ಲಕ್ಷಾಂತರ ಜನ ಸಾಕ್ಷಿಯಾದರು.

ಹೌದು, ಅದು 2024ರ ಜನವರಿ 22. ಸ್ಥಳ ಉತ್ತರ ಪ್ರದೇಶದ ಅಯೋಧ್ಯೆ. ಎಲ್ಲೆಲ್ಲೂ ಶ್ರೀರಾಮನಾಮ ಸ್ಮರಣೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಅದಾದ ಬಳಿಕ ಮಂದಿರ ನಿರ್ಮಾಣ ಪೂರ್ಣಗೊಂಡಿದ್ದರ ಸಂಕೇತವಾಗಿ 2025ರ ನವೆಂಬರ್ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು ‘ರಾಮ ಧ್ವಜ’ದ ಧ್ವಜಾರೋಹಣ ನೆರವೇರಿಸಿದ್ದರು. ಈಗ ಶ್ರೀರಾಮನ ಹುಟ್ಟೂರು ಅಯೋಧ್ಯೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹೌದು, ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯ 2ನೇವಾರ್ಷಿಕೋತ್ಸವ ವಿಜೃಂಭಣೆಯಿಂದ ನೆರವೇರಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಮ ಮಂದಿರ ಸಂಕೀರ್ಣದಲ್ಲಿರುವ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಹಲವು ಪ್ರಮುಖರು ಈ ಕ್ಷಣಕ್ಕೆ ಸಾಕ್ಷಿಯಾದರು.

ರಾಮ ಮಂದಿರ ಸಂಕೀರ್ಣದಲ್ಲಿರುವ ಏಳು ದೇವಾಲಯಗಳಲ್ಲಿ ಅನ್ನಪೂರ್ಣೇಶ್ವರಿ ದೇವಸ್ಥಾನವು ಒಂದಾಗಿದೆ. ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಯ 2ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಎರಡು ದಿನ   ಪ್ರಮುಖ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಅಲ್ಲದೆ, ‘ಪ್ರಾಣ ಪ್ರತಿಷ್ಠಾ ದ್ವಾದಶಿ’ ಆಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ. ಧ್ವಜಾರೋಹಣದ ಬಳಿಕ ರಾಜನಾಥ್ ಸಿಂಗ್ ಅವರು ರಾಮಲಲ್ಲಾ ವಿಗ್ರಹದ ಮುಂದೆ ಪ್ರಾರ್ಥನೆ ಸಲ್ಲಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳನ್ನುದ್ದೇಶಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಭಗವಾನ್ ಶ್ರೀ ರಾಮನ ಅಪಾರ ಕೃಪೆ ಮತ್ತು ಆಶೀರ್ವಾದದಿಂದ, ಅಸಂಖ್ಯಾತ ಭಕ್ತರ ಐದು ಶತಮಾನಗಳ ಕನಸು ನನಸಾಗಿದೆ . ರಾಮಲಲ್ಲಾ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವವನ್ನು ಅಯೋಧ್ಯೆಯ ಪವಿತ್ರ ಭೂಮಿಯಲ್ಲಿ ಆಚರಿಸಲಾಗುತ್ತಿದೆ. ಈ ವಾರ್ಷಿಕೋತ್ಸವವು ನಮ್ಮ ನಂಬಿಕೆ ಮತ್ತು ಮೌಲ್ಯಗಳ ದೈವಿಕ ಆಚರಣೆಯಾಗಿದೆ. ಈ ವೇಳೆ ಭಾರತ ಮತ್ತು ವಿದೇಶಗಳಲ್ಲಿರುವ ಎಲ್ಲಾ ರಾಮ ಭಕ್ತರ ಪರವಾಗಿ, ಭಗವಾನ್ ಶ್ರೀ ರಾಮನಿಗೆ ನನ್ನ ಹೃತ್ತೂರ್ವಕ ನಮನಗಳು ಅರ್ಪಿಸುತ್ತೇನೆ. ಅಲ್ಲದೇ ಈ ವಿಶೇಷ ದಿನದಂದು ಎಲ್ಲಾ ದೇಶವಾಸಿಗಳಿಗೆ ನನ್ನ ಶುಭಾಶಯಗಳು ಎಂದು ಮೋದಿ ಹೇಳಿದ್ದಾರೆ. 

======================

Read Must : Indo-Pak War | US-China Credit War | ಇಂಡೋ-ಪಾಕ್‌ ಯುದ್ಧ ನಿಲ್ಲಿಸಿದ್ದೇ ನಾವೆಂದ ಚೀನಾ..!

Leave a Reply

Your email address will not be published. Required fields are marked *