2026 New Year Rules | Celebration Break | ಹೊಸ ವರ್ಷಾಚರಣೆಗೆ ರೂಲ್ ಸೆಲಬ್ರೇಷನ್ಸ್‌ಗೆ ಬ್ರೇಕ್ | Focus TV Kannada

ಈಗಾಗಲೇ ನಗರದಾದ್ಯಂತ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಸೇರಿದಂತೆ ಎಲ್ಲಾ ಠಾಣೆಗಳ ಪೊಲೀಸರು ರೌಂಡ್​ಸ್​ ಹಾಕುತ್ತಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆ ನಗರದಾದ್ಯಂತ ಎಲ್ಲಾ ಬಾರ್‌ಗಳು, ರೆಸ್ಟೋರೆಂಟ್‌ಗಳು, ಪಬ್‌ಗಳು ಹಾಗೂ ಕ್ಲಬ್‌ಗಳು ರಾತ್ರಿ 1 ಗಂಟೆಯೊಳಗೆ ಮುಚ್ಚಲೇಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

2026ರ ಆಗಮನಕ್ಕೆ ಈಗಾಗಲೇ ದಿನಗಣನೆ ಶುರುವಾಗಿದೆ. ಈ ಮಧ್ಯೆ ಪೊಲೀಸರು ಕೂಡಾ ಹೊಸ ವರ್ಷಾಚಣೆಗೆ ಕಟ್ಟೆಚ್ಚರ ವಹಿಸಿದ್ದಾರೆ. ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಇರಲು ಪಬ್ ಅಂಡ್ ಕ್ಲಬ್, ಬಾರ್ ಅಂಡ್ ರೆಸ್ಟೋರೆಂಟ್‌ಗೆ 30 ಮಾರ್ಗಸೂಚಿಗಳನ್ನು ಬೆಂಗಳೂರು ಪೊಲೀಸರು ಬಿಡುಗಡೆ ಮಾಡಿದ್ದಾರೆ.     

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷ ಸ್ವಾಗತಿಸಲು ಜನತೆ ಸಜ್ಜಾಗಿದ್ದಾರೆ. ಇತ್ತ ಪೊಲೀಸ್ ಇಲಾಖೆಯೂ ಹೈ ಅಲರ್ಟ್‌ ಆಗಿದೆ. ಯಾವುದೇ ಅಹಿತಕರ ಘಟನೆ ಆಗದಂತೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಈಗಾಗಲೇ ನಗರದಾದ್ಯಂತ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಸೇರಿದಂತೆ ಎಲ್ಲಾ ಠಾಣೆಗಳ ಪೊಲೀಸರು ರೌಂಡ್​ಸ್​ ಹಾಕುತ್ತಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆ ನಗರದಾದ್ಯಂತ ಎಲ್ಲಾ ಬಾರ್‌ಗಳು, ರೆಸ್ಟೋರೆಂಟ್‌ಗಳು, ಪಬ್‌ಗಳು ಹಾಗೂ ಕ್ಲಬ್‌ಗಳು ರಾತ್ರಿ 1 ಗಂಟೆಯೊಳಗೆ ಮುಚ್ಚಲೇಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಹೊಸ ವರ್ಷಾಚರಣೆಗೆ ಏನೇನು ರೂಲ್ಸ್‌:

1. ರಾತ್ರಿ 1 ಗಂಟೆಗೆ ಎಲ್ಲವೂ ಬಂದ್‌. 2. ನಿಗದಿತ ಜಾಗಕ್ಕಿಂತ ಹೆಚ್ಚು ಜನರು ಪಬ್ & ಬಾರ್‌ನಲ್ಲಿ ಸೇರುವಂತಿಲ್ಲ. 3. ಅಪ್ರಾಪ್ತರಿಗೆ ನೋ ಎಂಟ್ರಿ, ಐಡಿ ಕಾರ್ಡ್ ಪರಿಶೀಲನೆ ಕಡ್ಡಾಯ. 4. ಡ್ರಿಂಕ್ ಅಂಡ್ ಡ್ರೈವ್‌ಗೆ ಅವಕಾಶವಿಲ್ಲ. 5. ಎಂಟ್ರಿ ಹಾಗೂ ಎಕ್ಸಿಟ್ ಪಾಯಿಂಟ್‌ಗಳಲ್ಲಿ ಸಿಸಿಟಿವಿ ಕಡ್ಡಾಯ. 6. ಮ್ಯೂಸಿಕ್ ಹಾಕಿದರೂ 50 DB ಮಿತಿಗಿಂತ ಹೆಚ್ಚು ಸೌಂಡ್ ಇಡುವಂತಿಲ್ಲ. 7. ಅನೈತಿಕ ಚಟುವಟಿಕೆಗಳು ನಡೆಸುವಂತಿಲ್ಲ, ಮಾದಕ ವಸ್ತು ಸಂಪೂರ್ಣ ನಿಷೇಧ. 8. ಧೂಮಪಾನಕ್ಕಾಗಿ ಪ್ರತ್ಯೇಕ ಜಾಗ ಮೀಸಲಿರಬೇಕು. ಪೊಲೀಸರು ಪರಿಶೀಲನೆಗೆ ಬಂದಾಗ ಸಹಕರಿಸಬೇಕು. 9. ಬಾರ್ & ಪಬ್‌ಗಳಲ್ಲಿ ಕ್ರೌಡ್ ಕಂಟ್ರೋಲ್‌ಗಾಗಿ ಬಾರ್ ಕೋಡ್, ಟೋಕನ್ ಸಿಸ್ಟಮ್ ಕಡ್ಡಾಯ. 10. ತುರ್ತು & ಅಗ್ನಿಶಾಮಕ ವ್ಯವಸ್ಥೆ ಸರಿಯಾಗಿ ನೋಡಿಕೊಳ್ಳಬೇಕು. 11. ಎಲ್ಲೆಂದರಲ್ಲಿ ಪಾರ್ಕಿಂಗ್‌ ಮಾಡದೇ, ಪ್ರತ್ಯೇಕ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿರಬೇಕು. 12. ಎಮರ್ಜೆನ್ಸಿ ಕಾಂಟ್ಯಾಕ್ಟ್ ಡೀಟೆಲ್ಸ್ ಡಿಸ್ಪ್ಲೇ ಮಾಡಿರಬೇಕು. 13. ಪಬ್ ಒಳಗೆ ಪಟಾಕಿ ನಿರ್ಬಂಧ, ಚೂಪಾದ ಮಾರಕ ಆಯುಧಗಳ ಪಬ್ ಬಾರ್ ಒಳಗೆ ತರುವಂತಿಲ್ಲ. 14. ಲೈಸೆನ್ಸ್ ಇಲ್ಲದ ಬೌನ್ಸರ್ಸ್ ಏಜೆನ್ಸಿಗಳನ್ನು ಬಳಸುವಂತಿಲ್ಲ. 15. ಕರೆಂಟ್ ಹೋದ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಕಡ್ಡಾಯ. 16. ಪಬ್ ಆವರಣ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. 17. ರಾಜಕೀಯ ಹಾಗೂ ಧರ್ಮಕ್ಕೆ ಸಂಬಂಧಿಸಿದ ಡಿಜೆ ಪ್ಲೇ ಮಾಡದಿರಲು ಸೂಚನೆ. 18. ಗ್ರಾಹಕರ ಜೊತೆ‌ ಬೌನ್ಸರ್ಸ್ ಅನುಚಿತವಾಗಿ ವರ್ತಿಸಬಾರದು. 19. ಮಹಿಳಾ ಸುರಕ್ಷತೆಗೆ ಹೆಚ್ಚು ಗಮನ ಕೊಡಬೇಕು. 20. ಮಹಿಳೆಯರಿಗಾಗಿ ಸಹಾಯವಾಣಿ ಅಳವಡಿಕೆ ಕಡ್ಡಾಯ. 21. ಪೊಲೀಸರ ಜೊತೆ ಹೊಂದಣಿಕೆ ಮಾಡಿಕೊಂಡು ನಿರ್ವಹಣೆ ಮಾಡಲು ಸೂಚನೆ. 22. ಒಟ್ಟಾರೆ ಪಬ್ ಹಾಗೂ ಬಾರ್ ಗಳಲ್ಲಿ ಗ್ರಾಹಕರ ಸುರಕ್ಷಿತ, ಶಾಂತಿ‌ ಕಾಪಾಡಲು ಸೂಚನೆ.

Also Read : Dec 31 Deadline Alert : Link Aadhaar–PAN or Ready to Face Money Trouble! | ಡಿ.31ರೊಳಗೆ ಆಧಾರ್‌-ಪ್ಯಾನ್‌ ಲಿಂಕ್‌ ಮಾಡಿ ಇಲ್ಲದಿದ್ರೆ ನಿಮ್ಮ ಹಣಕ್ಕೆ ಸಂಚಕಾರ.

One thought on “2026 New Year Rules | Celebration Break | ಹೊಸ ವರ್ಷಾಚರಣೆಗೆ ರೂಲ್ ಸೆಲಬ್ರೇಷನ್ಸ್‌ಗೆ ಬ್ರೇಕ್ | Focus TV Kannada

Leave a Reply

Your email address will not be published. Required fields are marked *