Finally, BJP opens its account in Kerala | ಕೊನೆಗೂ ಕೇರಳದಲ್ಲಿ ಖಾತೆ ತೆರೆದ ಬಿಜೆಪಿ…!
ಕೇರಳ ಅಂದರೆ ಹಾಗೆನೇ..ಅಲ್ಲಿ ರಾಜಕೀಯ ನೆಲೆ ಸಾಧಿಸಲು ರಾಷ್ಟ್ರೀಯ ಪಕ್ಷಗಳು ನಾನಾ ಪ್ರಯತ್ನಗಳನ್ನು ಮಾಡಿವೆ. ಅದರಲ್ಲೂ ದೇಶದ ಆಡಳಿತಾರೂಢ ಬಿಜೆಪಿ ಹಾಗೂ ಪ್ರಧಾನಿ ಮೋದಿ ನಾನಾ ಕಸರತ್ತು ಮಾಡಿದರು. ಆದರೂ ಕೇರಳ ಜನತೆ ಮಾತ್ರ ಮೋದಿ ಮಾತನ್ನು ಮಾನ್ಯ ಮಾಡಲಿಲ್ಲ. ಕೊನೆಗೂ ಹಾಗೋ ಹೀಗೋ ಕೇರಳದಲ್ಲಿ ಬಿಜೆಪಿ ಗೆದ್ದು ಬೀಗಿದೆ.. ಅರೆ..!ಇದು ಯಾವುದು ಚುನಾವಣೆ.. ಅಲ್ಲಿ ಬಿಜೆಪಿ ಗೆದ್ದಿದ್ದಾದರೂ ಹೇಗೆ..? ಅಂತೀರಾ..?
ಹೌದು, ಕೇರಳದಲ್ಲಿ ಹೇಗಾದರೂ ಗೆಲುವು ಸಾಧಿಸಲು ಪ್ರಧಾನಿ ಮೋದಿ ನಾನಾ ಕಸರತ್ತುಗಳನ್ನು ಮಾಡಿದ್ದರು. ಆದರೆ, ಅದ್ಯಾವುದೂ ವರ್ಕೌಟ್ ಆಗಿರಲಿಲ್ಲ. ಆದರೂ ಪ್ರಯತ್ನಂ ಸರ್ವತ್ರ ಸಾಧನಂ ಎಂಬಂತೆ ಬಿಜೆಪಿ ನಾಯಕರು ನಾನಾ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದರು. ಈಗ ಕೊನೆಗೂ ಕೇಸರಿ ವೀರರ ಪ್ರಯತ್ನ ಫಲಿಸಿದೆ. ಕೊನೆಗೂ ಕೇರಳದಲ್ಲಿ ಗೆಲುವು ಸಾಧಿಸುವಲ್ಲಿ ಬಿಜೆಪಿ ಸಕ್ರಿಯಗೊಂಡಿದೆ. ಇಷ್ಟಕ್ಕೂ ಕೇರಳದಲ್ಲಿ ಬಿಜೆಪಿ ಗೆದ್ದಿದ್ದಾದರೂ ಹೇಗೆ..? ಅದು ಗೆದ್ದು ಬೀಗಿರುವ ಆ ಚುನಾವಣೆಯಾದರೂ ಯಾವುದು..? ಅದರಲ್ಲಿ ಪ್ರಧಾನಿ ಮೋದಿ ಪಾತ್ರ ಇದ್ಯಾ..? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೋಡುವುದಾದರೆ..
ಕೇರಳ ರಾಜಧಾನಿಯಲ್ಲಿ ಪಾರುಪತ್ಯ ಸಾಧಿಸುವಲ್ಲಿ ಬಿಜೆಪಿಗರು ಯಶಸ್ಸು ಸಾಧಿಸಿದ್ದಾರೆ. ತಿರುವನಂತಪುರದ ಬಿಜೆಪಿ ನಾಯಕ ವಿವಿ ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. ತಿರುವನಂತಪುರದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇವರು ಕೇರಳ ರಾಜ್ಯದಲ್ಲಿ ಬಿಜೆಪಿಯಿಂದ ಆಯ್ಕೆಯಾದ ಮೊದಲ ಮೇಯರ್ ಆಗಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ತಿರುವನಂತರಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿತ್ತು. 101 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 50 ಸ್ಥಾನಗಳಲ್ಲಿ ಜಯ ದಾಖಲಿಸಿ ಕೇರಳದ ಎಡಪಕ್ಷಗಳು ಹಾಗೂ ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸಿತ್ತು.ಈಗ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ರಾಜೇಶ್ ದಾಖಲೆ ಬರೆದಿದ್ದಾರೆ. ಅಲ್ಲದೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಿರುವನಂತಪುರದ ಜೊತೆ, ತ್ರಿಪುನಿತುರ ಹಾಗೂ ಪಾಲಕ್ಕಾಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ.
ಬಿಜೆಪಿಗೆ ಸ್ವಂತ ಶಕ್ತಿ ಮೇಲೆ ತಿರುವನಂತಪುರಂ ಮೇಯರ್ ಗದ್ದುಗೆ ಹಿಡಿಯಲು ಒಂದು ಸ್ಥಾನ ಕೊರತೆ ಇತ್ತು. ಈ ವೇಳೆ ಪಕ್ಷೇತರ ಸದಸ್ಯರೊಬ್ಬರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ವಿವಿ ರಾಜೇಶ್ ಮೇಯರ್ ಆಗಿ ಗೆಲುವಿನ ನಗೆ ಬೀರಿದ್ದಾರೆ. ಈ ಗೆಲುವಿನಲ್ಲಿ ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಮುಖಂಡರಾದ ಕೆ. ಸುರೇಂದ್ರನ್, ವಿ. ಮುರುಳಿಧರನ್ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜೇಶ್ ಮೇಯರ್ ಆಗಿ ರಾಜೇಶ್ ಪ್ರಮಾಣವಚನ ಸ್ವೀಕರಿಸಿದ ವೇಳೆ ಈ ನಾಯಕರು ಉಪಸ್ಥಿತರಿದ್ದರು.
ವಿವಿ ರಾಜೇಶ್ ಎಲ್ಲ ಬಿಜೆಪಿ ಸದಸ್ಯರ ಜೊತೆಗೆ ಒಬ್ಬ ಪಕ್ಷೇತರರ ಬೆಂಬಲದೊಂದಿಗೆ 51 ಮತ ಪಡೆದರು. ಇವರ ವಿರುದ್ಧ ಸ್ಪರ್ಧಿಸಿದ್ದ ಎಲ್‌ಡಿಎಫ್‌ನ ಅಭ್ಯರ್ಥಿ 29, ಯುಡಿಎಫ್‌ನ ಅಭ್ಯರ್ಥಿ 19 ಮತಗಳನ್ನು ಪಡೆದು ಪರಾಭವಗೊಂಡರು.
40 ವರ್ಷಗಳ ಹಿಂದೆ ತಿರುವನಂತಪುರ ಸಿಟಿ ಕಾರ್ಪೊರೇಷನ್‌ನ ಆದ ಮೇಲೆ ಹಾಗೂ ಕೇರಳದ ಇತರ ಸಿಟಿ ಕಾರ್ಪೊರೇಷನ್‌ಗಳನ್ನೂ ಒಳಗೊಂಡಂತೆ ಇದೇ ಮೊದಲ ಬಾರಿಗೆ ಬಿಜೆಪಿಯ ಅಭ್ಯರ್ಥಿ ಮೇಯರ್ ಆಗಿ ದಾಖಲೆ ನಿರ್ಮಾಣವಾಗಿದೆ. ಒಟ್ಟಾರೆ ಎಡಪಕ್ಷಗಳ ಅಧಿಕಾರ ಇರುವ ಕೇರಳದಲ್ಲಿ ಬಿಜೆಪಿ ಗೆದ್ದು ಬೀರುವ ಮೂಲಕ ದಾಖಲೆ ಬರೆದಿದೆ. ಇದು ವಿಧಾನ ಸಭಾ ಚುನಾವಣೆಯಲ್ಲೂ ವರ್ಕೌಟ್ ಆಗುತ್ತಾ ಎಂಬುದೇ ಸದ್ಯದ ಕುತೂಹಲ.
Also Read : Hasanamba Temple | Faith or Fact? | ದೀಪ ಆರಲ್ಲ.. ಹೂ ಬಾಡಲ್ಲ.. ವಿಜ್ಞಾನಕ್ಕೆ ಸವಾಲಾದ ರೋಚಕ ಕಥೆ
