Love was killed by the Age Difference | ಪ್ರಿಯತಮೆ ದೊಡ್ಡವಳು ಅಂತ ಕೊಂದೇಬಿಟ್ಟ.!

Love was killed by the Age Difference | ಪ್ರಿಯತಮೆ ದೊಡ್ಡವಳು ಅಂತ ಕೊಂದೇಬಿಟ್ಟ.!

ಅವರಿಬ್ಬರೂ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುತ್ತಲೇ ಪ್ರೀತಿಯ ಬಲೆಗೆ ಸಿಲುಕಿದ್ರು. ಇತ್ತೀಚೆಗೆ ಪ್ರಿಯತಮೆ ದೊಡ್ಡವಳು ಎಂದು ತಿಳಿದ ಪ್ರಿಯಕರ ಬೇರೆ ಹುಡುಗಿ ಜೊತೆಗೆ ಎಂಗೇಜ್‌ ಆಗ್ಬಿಟ್ಟ. ಪ್ರೀತಿಸಿ ಮೋಸ ಮಾಡಬೇಡ ಎಂದು ಪ್ರೇಯಸಿ ಪೀಡಿಸಿದ್ದಕ್ಕೆ ಸಿಟ್ಟುಗೊಂಡ ಪ್ರಿಯಕರ ಕತ್ತು ಸೀಳಿ ಕೊಂದೇಬಿಟ್ಟ.     

ಮೂಲತಃ ಚಿತ್ರದುರ್ಗದ ಮಮತಾ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಳು. ಅದೇ ಆಸ್ಪತ್ರೆಯಲ್ಲಿ ಸುಧಾಕರ್‌ ಎಂಬಾತ ಕೂಡ ಕೆಲಸಮಾಡುತ್ತಿದ್ದ. ಕಳೆದ ಒಂದು ವರ್ದಿಂದ ಇಬ್ಬರೂ ಪ್ರೀತಿ ಮಾಡುತ್ತಿದ್ದರು. ಮೊದಲು ಸುಧಾಕರ್‌ಗೆ ಮಮತಾ ತನಗಿಂತ ದೊಡ್ಡವಳು ಎಂಬ ವಿಚಾರ ಗೊತ್ತಿರಲಿಲ್ಲ. ಮಮತಾಳಿಗೆ 39 ವರ್ಷವ ಯಸ್ಸಾಗಿತ್ತು. ಇತ್ತೀಚೆಗಷ್ಟೇ ಸುಧಾಕರ್‌ ಕುಟುಂಬಸ್ಥರು ತೋರಿಸಿದ ಹುಡುಗಿ ಜೊತೆಗೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದ.

ಈ ಸತ್ಯ ಗೊತ್ತಾಗುತ್ತಿದ್ದಂತೆ ಮಮತಾ ಸುಧಾಕರ್‌ ಬಳಿ ಮದುವೆಯಾಗು ಎಂದು ಪೀಡಿಸಲು ಶುರು ಮಾಡಿದ್ದಳು. ನನ್ನನ್ನು ಮದುವೆಯಾಗದಿದ್ದರೆ, ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಹೇಳಿ ಬೆದರಿಕೆ ಹಾಕಿದ್ದಳು. ಮುಂದೆ ಮಮತಾ ತನಗೆ ತಲೆ ನೋವಾಗಬಹುದು ಎಂದು ಅರಿತ ಸುಧಾಕರ್‌ ಪ್ರೇಯಸಿಯ ಉಸಿರು ನಿಲ್ಲಿಸಲುಪ್ಲಾನ್‌ ಮಾಡಿಕೊಂಡಿದ್ದ. ಮಮತಾ ತನ್ನ ಗೆಳತಿಯೊಂದಿಗೆ ಕುಮಾರಸ್ವಾಮಿ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಡಿ.24ರ ರಾತ್ರಿ ಮಮತಾ ಒಬ್ಬಳೇ ಇರುವ ಸಮಯವನ್ನು ನೋಡಿಕೊಂಡ ಸುಧಾಕರ್‌ ಮನೆಗೆ ಹೋಗಿ ಕತ್ತು ಸೀಳಿಕೊಂದು ಬಿಟ್ಟಿದ್ದಾನೆ.

ಈ ಘಟನೆ ಡಿ.25ರಂದು ಬೆಳಕಿಗೆ ಬಂದಿದೆ. ಮಾಹಿತಿ ತಿಳಿದ ಪೊಲೀಸರು ಶೋಧ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆಕೆ ಒಬ್ಬರೇ ಇರುವುದನ್ನು ನೋಡಿಕೊಂಡು ಬಂದಿದ್ದ ಆಕೆಯ ಪ್ರಿಯಕರ ಈ ಕೃತ್ಯವೆಸಗಿದ್ದಾನೆಂದು ತನಿಖೆ ವೇಳೆ ತಿಳಿದು ಬಂದಿದೆ. ಅತ್ತ ಪ್ರೀತಿಸಿದಾಕೆಯ ಜೀವವನ್ನೂ ತೆಗೆದ ಸುಧಾಕರ್‌, ಇತ್ತ ತನ್ನ ಬದುಕನ್ನೂ ಕೈಯ್ಯಾರೆ ಹಾಳು ಮಾಡಿಕೊಂಡಿದ್ದಾನೆ. ಇತ್ತೀಚೆಗಂತೂ ಎಲ್ಲಿ ನೋಡಿದರೂ ಪ್ರೀತಿಸೋದು, ಮದುವೆಯಾಗೋದು, ಕೊನೆಗೆ ಆತ್ಮಹತ್ಯೆ, ಕೊಲೆಗಳಲ್ಲಿ ಬದುಕನ್ನೇ ಕೊನೆಯಾಗಿಸಿಕೊಳ್ಳೋದು. ಜೀವನ ಅಂದ್ರೆ ಇಷ್ಟೇನಾ ಅನ್ನೋ ಯೋಚನೆ ಹುಟ್ಟುಕೊಂಡಿದೆ.

Also Read : Negligence of Transport Department | ಸಾರಿಗೆ ಇಲಾಖೆ ನಿರ್ಲಕ್ಷ್ಯ ಮಾಲೀಕರ ಬಸ್‌ ಮಾಫಿಯಾ!

Leave a Reply

Your email address will not be published. Required fields are marked *