Dec 31 Deadline Alert : Link Aadhaar–PAN or Ready to Face Money Trouble! | ಡಿ.31ರೊಳಗೆ ಆಧಾರ್‌-ಪ್ಯಾನ್‌ ಲಿಂಕ್‌ ಮಾಡಿ ಇಲ್ಲದಿದ್ರೆ ನಿಮ್ಮ ಹಣಕ್ಕೆ ಸಂಚಕಾರ.

Aadhaar - PAN Link Deadline | ಆಧಾರ್‌-ಪ್ಯಾನ್‌ ಲಿಂಕ್‌ ಮಾಡಿ... ನಿಮ್‌ ಹಣ ಉಳಿಸಿಕೊಳ್ಳಿ

ನಿಮ್ಮ ಆಧಾರ್‌ ಕಾರ್ಡ್‌ಗೆ ಪ್ಯಾನ್‌ ಕಾರ್ಡ್‌ ಲಿಂಕ್‌ ಮಾಡಿದ್ದೀರಾ.? ಇಲ್ಲ ಅಂದ್ರೆ ಈಗಲೇ ಆ ಕೆಲಸ ಮಾಡಿ. ನಾಳೆ ಮಾಡೋಣ ಬಿಡಿ ಅಂತ ನೆಗ್ಲೆಕ್ಟ್ ಮಾಡ್ಬೇಡಿ. ಡಿಸೆಂಬರ್ 31ರ ಡೆಡ್‌ಲೈನ್ ಮಿಸ್‌ ಮಾಡಿದ್ರೋ ಇನ್ನೊಂದು ವಾರದಲ್ಲಿ ದಂಡ ಕಟ್ಟೋದ್ರ ಜೊತೆಗೆ ಪಜೀತಿಗೆ ಸಿಕ್ಕಿ ಬೀಳೋದು ಗ್ಯಾರೆಂಟಿ.     

ಈಗ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇಲ್ಲದೆ ಜೀವನ ನಡೆಸೋದು ಕಷ್ಟ. ಬ್ಯಾಂಕ್ ಅಕೌಂಟ್ ಓಪನ್ ಮಾಡೋದ್ರಿಂದ ಹಿಡಿದು, ವರ್ಷದ ಕೊನೆಯಲ್ಲಿ ಇನ್ಕಮ್ ಟ್ಯಾಕ್ಸ್ ಫೈಲ್ ಮಾಡೋವರೆಗೂ ಪ್ರತಿಯೊಂದು ಫೈನಾನ್ಷಿಯಲ್ ಟ್ರಾನ್ಸಾಕ್ಷನ್‌ಗೂ ಇವೆರಡು ದಾಖಲೆಗಳು ಬೇಕೇ ಬೇಕು. ನೀವಿನ್ನೂ ಇವೆರಡನ್ನೂ ಲಿಂಕ್ ಮಾಡಿಲ್ಲ ಅಂದ್ರೆ, ಎಚ್ಚರ! ನಿಮ್ಮ ಕೈಯಲ್ಲಿ ಇರೋದು ಇನ್ನು ಕೆಲವೇ ದಿನಗಳು ಮಾತ್ರ. ಡಿಸೆಂಬರ್ 31, 2025 ರ ಒಳಗೆ ನೀವು ಲಿಂಕ್ ಮಾಡ್ಲಿಲ್ಲ ಅಂದ್ರೆ, ಜನವರಿ 1, 2026 ರಿಂದ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತೆ. ಅಂದ್ರೆ ಅದು ಬರೀ ಪ್ಲಾಸ್ಟಿಕ್ ಕಾರ್ಡ್‌ ಅಷ್ಟೇ.

ಸರ್ಕಾರ ಈ ಬಗ್ಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದೆ. ಒಮ್ಮೆ ಕಾರ್ಡ್ ಬಂದ್ ಆದ್ರೆ, ಅದನ್ನ ಮತ್ತೆ ಆಕ್ಟಿವ್ ಮಾಡ್ಸೋದು ಅಂದ್ರೆ ದೊಡ್ಡ ತಲೆನೋವು. ಸುಮ್ನೆ ಕಚೇರಿಗೆ ಸುತ್ತಿ ಸುತ್ತಿ ಸುಸ್ತಾಗಬೇಕಾಗುತ್ತೆ. ಒಮ್ಮೆ ಪ್ಯಾನ್ ಕಾರ್ಡ್ ಕೆಲಸ ಮಾಡೋದು ನಿಲ್ಲಿಸಿದ್ರೆ, ನಿಮ್ಮ ದೈನಂದಿನ ಹಣಕಾಸಿನ ವ್ಯವಹಾರಗಳೆಲ್ಲಾ ನಿಂತು ಹೋಗುತ್ತೆ. ಲೋನ್ ಸಿಗಲ್ಲ, ಹೊಸ ಅಕೌಂಟ್ ಓಪನ್ ಮಾಡೋಕಾಗಲ್ಲ, ಕ್ರೆಡಿಟ್ ಕಾರ್ಡ್ ಸಿಗಲ್ಲ. ಅಷ್ಟೇ ಯಾಕೆ, ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್‌ನಲ್ಲಿ ಹಾಕಿರೋ ದುಡ್ಡು ಕೂಡ ಸಿಕ್ಕಾಕೊಳ್ಳುತ್ತೆ. ಆದಾಯ ತೆರಿಗೆ ಕಟ್ಟೋಕು ಆಗಲ್ಲ, ರೀಫಂಡ್ ಕೂಡ ಬರೋಲ್ಲ.

ಇದನ್ನ ಲಿಂಕ್ ಮಾಡೋಕೆ ನೀವು ರಜೆ ಹಾಕಿ ಸರ್ಕಾರಿ ಆಫೀಸ್‌ಗಳಿಗೆ ಅಲಿಯೋ ಅವಶ್ಯಕತೆ ಇಲ್ಲ. ಸೋ ಈಗಲೇ ನಿಮ್ಮ ಪ್ಯಾನ್‌ ಕಾರ್ಡ್‌ ಅನ್ನು ಆಧಾರ್‌ಗೆ ಲಿಂಕ್‌ ಮಾಡಿಬಿಡಿ. ನಿಮ್ಮ ಬಳಿ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಇದ್ರೆ ಸಾಕು. ಕೆಲವೇ ನಿಮಿಷಗಳಲ್ಲಿ ಮನೇಲೇ ಕೂತು ಲಿಂಕ್ ಮಾಡ್ಬೋದು. ಆದಾಯ ತೆರಿಗೆ ಇಲಾಖೆಯ ಅಫೀಶಿಯಲ್ ವೆಬ್‌ಸೈಟ್ incometax.gov.in ಗೆ ಹೋಗಿ ಲಾಗಿನ್ ಆಗಿ. ಹೋಮ್ ಪೇಜ್‌ನಲ್ಲಿ ಕ್ವಿಕ್ ಲಿಂಕ್ಸ್ ಸೆಕ್ಷನ್‌ನಲ್ಲಿ ಲಿಂಕ್ ಆಧಾರ್ ಅಂತ ಇರುತ್ತೆ, ಅದನ್ನ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಪ್ಯಾನ್ ಮತ್ತು ಆಧಾರ್ ನಂಬರ್ ಹಾಕಿ. ನಿಮ್ಮ ಫೋನ್‌ಗೆ ಒಂದು ಓಟಿಪಿ ಬರುತ್ತೆ, ಅದನ್ನ ಎಂಟರ್ ಮಾಡಿ ವೆರಿಫೈ ಮಾಡಿದ್ರೆ ಕೆಲ್ಸ ಮುಗೀತು.

ಬೇಕಿದ್ರೆ ಎಸ್‌ಎಂಎಸ್ ಮೂಲಕನೂ ಮಾಡ್ಬೋದು, ಆದ್ರೆ ವೆಬ್‌ಸೈಟ್ ಬೆಸ್ಟ್ ಆಪ್ಷನ್. ಇನ್ನು ಒಂದು ವಾರದೊಳಗೆ ಲಿಂಕ್‌ ಮಾಡದೇ ಹೋದ್ರೆ ಮ್ನೆ 1,000 ರೂಪಾಯಿ ದಂಡ ಕಟ್ಟಬೇಕಾಗುತ್ತೆ. ಜೊತೆಗೆ ಪ್ಯಾನ್‌ ಕಾರ್ಡ್‌ ಮತ್ತೆ ಪಡೆಯಲು ಹರಸಾಹಸವನ್ನೇ ಮಾಡ್ಬೇಕಾಗುತ್ತೆ. ಅದರ ಬದಲು ಈಗಲೇ ಆಧಾರ್‌ ಕಾರ್ಡ್‌ ಗೆ ಪ್ಯಾನ್‌ ಲಿಂಕ್‌ ಮಾಡಿ, ಮುಂದೆ ಬರೋ ತಲೆನೋವಿನಿಂದ ಎಸ್ಕೇಪ್‌ ಆಗಿ.

Also Read : Film Festival at Lulu Mall | ಸಿನಿಮೋತ್ಸವದ ಸ್ಪ್ಯಾನರ್‌ ಹಿಡಿದ ಡಿಕೆ, ಫಿಲಂ ಫೆಸ್ಟಿವಲ್‌ ಶಿಫ್ಟ್‌ ಆಗಿದ್ದೇಕೆ ?

Leave a Reply

Your email address will not be published. Required fields are marked *