ಜ್ಯೋತಿಷಿ ಸ್ಫೋಟಕ ಭವಿಷ್ಯ ಡಿಕೆ ಸಿಎಂ, ಸತೀಶ್‌ ಅಧ್ಯಕ್ಷ | Astrology makes a shocking comment on KA politics

ಜ್ಯೋತಿಷಿ ಸ್ಫೋಟಕ ಭವಿಷ್ಯ ಡಿಕೆ ಸಿಎಂ, ಸತೀಶ್‌ ಅಧ್ಯಕ್ಷ | Astrology makes a shocking comment on KA politics

ರಾಜ್ಯದಲ್ಲಿ ನಾಯಕತ್ವ ಬದಲಾವಣೆಗಾಗಿ ಬಣ ಕಿತ್ತಾಟ ಜೋರಾಗಿ ನಡೀತಿದೆ. ಸಿಎಂ ಸಿದ್ದರಾಮಯ್ಯ ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂದು ಕೈ ಕಟ್ಟಿ ಕುಳಿತಿದ್ದರೆ, ಇತ್ತ ಡಿಸಿಎಂ ಡಿಕೆ ಶಿವಕುಮಾರ್‌ ಪಟ್ಟಕ್ಕೇರಲು ಹಲವು ರೀತಿಯ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಬೆಳಗಾವಿ ಅಧಿವೇಶನ ಮುಗಿದಿದ್ದೇ, ಟೆಂಪಲ್‌ ರನ್‌ ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ಜ್ಯೋತಿಷೀ ಒಬ್ಬರು ಡಿಕೆಗೆ ಸಿಎಂ ಪಟ್ಟ ಸಿಕ್ಕೇ ಸಿಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.   

ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಆಗ ಬದಲಾಗುತ್ತೆ, ಈಗ ಬದಲಾಗುತ್ತೆ ಎಂಬ ಚರ್ಚೆಗಳು ದಿನ ಕಳೆದಂತೆ ಜೋರಾಗುತ್ತಲೇ ಇವೆ. ಡಿಸಿಎಂ ಡಿಕೆ ಶಿವಕುಮಾರ್‌ ಅವರು ಸಿಎಂ ಪಟ್ಟಕ್ಕಾಗಿ ಬಣ ಬಡಿದಾಟ, ಈಟಿಂಗ್‌ ಮೀಟಿಂಗ್‌, ಡೆಲ್ಲಿ ಟ್ರಿಪ್‌, ಹೈಕಮಾಂಡ್‌ ಭೇಟಿ ಎಲ್ಲಾ ಪ್ರಯೋಗವನ್ನೂ ಮಾಡಿದರು. ಆದರೂ ಯಾವುದೂ ಕೆಲಸ ಮಾಡಲಿಲ್ಲ. ಸದ್ಯ ದೇವರಿಂದ ವರ ಬಯಸುತ್ತಿದ್ದು, ಟೆಂಪಲ್‌ ರನ್‌ ಮಾಡುತ್ತಿದ್ದಾರೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆ ಬಾಗಲಕೋಟೆಯ ಜ್ಯೋತಿಷಿಯೊಬ್ಬರು ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಬಬಲೇಶ್ವರ ಜ್ಯೋತಿಷಿ‌ ಮನೆತನದ ಬಾಗಲಕೋಟೆಯ ‌ಖ್ಯಾತ ಜ್ಯೋತಿಷಿ‌ ಉಲ್ಲಾಸ್​ ಜೋಶಿ ಡಿಕೆ ಸಿಎಂ ಭವಿಷ್ಯವನ್ನು ನುಡಿದಿದ್ದಾರೆ. 2026ರ ಜನವರಿ 15ರೊಳಗೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ. ಇವರೊಂದಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಅಧಿಕಾರವೂ ಬದಲಾಗುತ್ತದೆ. ಜಾರಕಿ ಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎಂದು ಉಲ್ಲಾಸ್ ಭವಿಷ್ಯ ನುಡಿದಿದ್ದಾರೆ. ಈಗ ಈ ವೀಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.

ರಾಘವೇಂದ್ರ ಸ್ವಾಮಿಗಳೇ ನನ್ನ ನಾಲಿಗೆಯಿಂದ ನುಡಿಸುತ್ತಾರೆ. ನಾನು ಮೊದಲಿಗೆ ಜಪಮಣಿ ಪಠಿಸುತ್ತಾ ರಾಘವೇಂದ್ರಸ್ವಾಮಿಗೆ ಪ್ರಶ್ನೆ ಹಾಕುತ್ತೇನೆ. ಅದಕ್ಕೆ ರಾಘವೇಂದ್ರ ಸ್ವಾಮಿಗಳು ಉತ್ತರಿಸೋದನ್ನೇ ಭವಿಷ್ಯ ಹೇಳುತ್ತೇನೆ. ಈವರೆಗೂ ಅನೇಕ‌ ಜನರಿಗೆ ಭವಿಷ್ಯ ಹೇಳಿದ್ದೇನೆ, ಒಂದು ಸಲವೂ ಸುಳ್ಳಾಗಿಲ್ಲ. ಯಾರೊಬ್ಬರೂ ಸುಳ್ಳಾಗಿದೆ ಅಂತ ಬಂದಿಲ್ಲ ಎಂದ ಹೇಳಿದ್ದಾರೆ.

ಚಳಿಗಾಲದ ಅಧಿವೇಶನ ಮುಗಿಯುತ್ತಿದ್ದಂತೆಯೇ ಸಿಎಂ ಕುರ್ಚಿ ಕದನ ಶುರುವಾಗಿದೆ. ಅದರಲ್ಲೂ ಡಿಕೆ ಶಿವಕುಮಾರ್ ಮತ್ತೆ ಆ್ಯಕ್ಟೀವ್ ಆಗಿದ್ದು, ನಾನಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಅಲ್ಲದೇ, ಸಚಿವ ಡಾ.ಜಿ ಪರಮೇಶ್ವರ್‌ ಅವರು ಕೂಡ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಕುರ್ಚಿ ಕದನ ಅಂತ್ಯವಾಗೋದು ಯಾವಾಗ ಅನ್ನೋ ಪ್ರಶ್ನೆ ಎದ್ದಿರುವಾಗಲೇ ಉಲ್ಲಾಸ್‌ ಅವರು ನುಡಿದಿರುವ ಭವಿಷ್ಯ ಎಷ್ಟು ನಿಜವಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *