ICC Champions Trophy|ಏಷ್ಯಾ ಕಪ್ ತಂಡ ಇವರೆಲ್ಲ ಯಾಕಿಲ್ಲ?

ಫಾರ್ಮ್ ಇಲ್ಲದ ರಿಂಕು ಬೇಕಿತ್ತಾ?
ರಾಹುಲ್, ಶ್ರೇಯಸ್ ಯಾಕಿಲ್ಲ?
ಸಿರಾಜ್, ಜೈಸ್ವಾಲ್ ಯಾಕೆ ಬೇಡ?
ಏನು ಮಾಡಿದ್ರಿ ಅಜಿತ್ ಅಗರ್ಕರ್?

ಇತ್ತೀಚೆಗಷ್ಟೇ ಇಂಗ್ಲೆAಡ್ ಟೆಸ್ಟ್ ಸರಣಿಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದ ನಂತರ ಇದೀಗ ಏಷ್ಯಾ ಕಪ್‌ಗೆ ತಯಾರಾಗ್ತಿದೆ. ಬಿಸಿಸಿಐ ಏಷ್ಯಾ ಕಪ್ ಪಂದ್ಯಾವಳಿಗಾಗಿ ತಂಡವನ್ನೂ ಪ್ರಕಟ ಮಾಡಿದೆ. ಪ್ರಕಟಿತ ತಂಡದಲ್ಲಿ ನಿರೀಕ್ಷೆಗಿಂತ ಅನಿರೀಕ್ಷಿತವಾಗಿ ಕೈಬಿಟ್ಟವರ ಬಗ್ಗೆಯೇ ಈಗ ಚರ್ಚೆ ಶುರುವಾಗಿದೆ. ಆಯ್ಕೆ ಸಮಿತಿಯ ಅಜಿತ್ ಅಗರ್ಕರ್, ಕೋಚ್ ಗೌತಮ್ ಗಂಭೀರ್ ಅವರ ನಡೆಗಳ ಬಗ್ಗೆ ಈಗ ಒಂದಿಷ್ಟು ಅಸಮಾಧಾನಗಳೂ ಶುರುವಾಗಿವೆ. ಇಂಗ್ಲೆAಡ್ ಟೆಸ್ಟ್ ಸರಣಿಗೂ ಮೊದಲು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಿವೃತ್ತಿ ತಗೊಂಡಿದ್ದಕ್ಕೂ ಇವರ ಒತ್ತಡವೇ ಕಾರಣ ಅನ್ನೋ ಸಂಶಯವೂ ಇದೆ. ಕೊಹ್ಲಿಯಂಥ ಮಹಾನ್ ಆಟಗಾರರಿಗೆ ಒಂದು ವಿದಾಯ ಪಂದ್ಯಕ್ಕೂ ಅವಕಾಶ ಕೊಡದೆ ನಿವೃತ್ತಿ ಪಡೆಯೋ ಹಾಗೆ ಮಾಡಿದ ಬಿಸಿಸಿಐ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಇದೀಗ ಏಷ್ಯಾ ಕಪ್‌ಗೆ ಕೆಲವು ಪ್ರಮುಖ ಆಟಗಾರರನ್ನು ಕೈಬಿಟ್ಟಿದ್ದೂ ಕೂಡ ಚರ್ಚೆಗೆ ಗ್ರಾಸವಾಗಿದೆ.
ಈಗ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಹದಿನೈದು ಆಟಗಾರರ ತಂಡ ಪ್ರಕಟವಾಗಿದೆ. ಟೆಸ್ಟ್ ಪಂದ್ಯದ ನಾಯಕ ಶುಭ್‌ಮನ್ ಗಿಲ್‌ಗೆ ಇಲ್ಲಿ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ತಂಡದಲ್ಲಿ ಹೆಚ್ಚಿನವರು ಟಿಟ್ವೆಂಟಿ ಸ್ಪೆಷಲಿಸ್ಟ್ಗಳೇ ಇದ್ದಾರೆ ಅನ್ನೋದೇನೊ ನಿಜ. ಆದರೆ ತಂಡದ ಬಲಾಬಲ ಸಮತೋಲನದಲ್ಲಿದೆಯೇ ಅನ್ನೋ ಪ್ರಶ್ನೆಯೂ ಎದುರಾಗಿದೆ. ಆರ್‌ಸಿಬಿ ತಂಡದಲ್ಲಿ ಈ ಬಾರಿ ಉತ್ತಮ ಪ್ರದರ್ಶನ ನೀಡಿ ಕಪ್ ಗೆಲ್ಲೋದ್ರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಿತೇಶ್ ಶರ್ಮಾ ಆಯ್ಕೆ ಅನಿರೀಕ್ಷಿತವಾದರೂ ಉಚಿತವೂ ಹೌದು. ಕೊಟ್ಟ ಅವಕಾಶಗಳನ್ನೆಲ್ಲ ಕೈಚೆಲ್ಲಿ ಹಾಳು ಮಾಡಿಕೊಳ್ಳೋ ಸಂಜು ಸ್ಯಾಮ್ಸನ್‌ಗೂ ಮತ್ತೊಂದು ಅವಕಾಶ ಕೊಡಲಾಗಿದೆ. ಆದರೆ ಹನ್ನೊಂದರ ಬಳಗದಲ್ಲಿ ಸಂಜು ರ‍್ತಾರಾ ಅನ್ನೋ ಡೌಟ್ ಇದ್ದೇ ಇದೆ. ಇನ್ನು ಫಾರ್ಮ್ ಕಳೆದುಕೊಂಡಿರೊ ರಿಂಕು ಸಿಂಗ್ ಆಯ್ಕೆ ಸ್ವಲ್ಪ ಆಶ್ಚರ್ಯ ತಂದಿದೆ. ಹನ್ರ‍್ನೆಂದರ ಬಳಗದಲ್ಲಿದ್ದರೂ ರಿಂಕು ಸಿಂಣ್ ಬಳಕೆ ಅಷ್ಟರಲ್ಲೇ ಇರುತ್ತದೆ. ಇನ್ನು ಅಭಿಷೇಕ್ ಶರ್ಮ, ಶಿವಂ ದುಬೆ, ತಿಲಕ್ ವರ್ಮ ಅಯ್ಕೆ ಸರಿ ಅನ್ನಿಸಿದರೂ ಇವರಿಗೆ ಐಪಿಎಲ್‌ಗೂ ಮೀರಿದ ಕ್ರಿಕೆಟ್ ಮೆಚುರಿಟಿ ಇನ್ನೂ ಬಂದಿಲ್ಲ ಅನ್ನೋದೂ ಸತ್ಯ. ಹೀಗಾಗಿ ಕೈಬಿಟ್ಟವರ ಬಗ್ಗೆ ಚರ್ಚೆ ಶುರುವಾಗಿದೆ.
ಇದರಲ್ಲಿ ಮುಖ್ಯವಾದ ಇಬ್ಬರು ಆಟಗಾರರು ಅಂದರೆ ಶ್ರೇಯಸ್ ಶರ್ಮ ಹಾಗೂ ಕೆ.ಎಲ್ ರಾಹುಲ್. ಇಬ್ಬರೂ ಪ್ರಸ್ತುತ ಉತ್ತಮ ಫಾರ್ಮ್ನಲ್ಲೂ ಇದ್ದಾರೆ. ಜೊತೆಗೆ ಏಷ್ಯಾ ಕಪ್‌ಗೆ ಇವರ ಅನುಭವ ಹಾಗೂ ಪ್ರೌಢಿಮೆ ಅಗತ್ಯವಾಗಿತ್ತು. ಆದರೂ ಹೊಸಬರ ಅಲೆಯಲ್ಲಿ ಇಂಥ ಆಟಗಾರರು ಕೊಚ್ಚಿಕೊಂಡು ಹೋಗಿದ್ದಾರೆ. ಇನ್ನು ರಿಷಭ್ ಪಂತ್ ಆಯ್ಕೆ ಮಾಡಬೇಕಾದ ಆಟಗಾರನೇ ಆದರೂ ಜವಾಬ್ದಾರಿ ಹಾಗೂ ಸ್ಥಿರತೆಯ ವಿಚಾರಕ್ಕೆ ಬಂದಾಗ ಏಷ್ಯಾಕಪ್‌ಗೆ ಪರಿಗಣಿಸದೇ ಇದ್ದಿದ್ದು ಅಂತ ವಿಶೇಷವೇನೂ ಅಲ್ಲ. ಆದರೆ ತಂಡದ ಉತ್ತಮ ಆರಂಭಕ್ಕಾಗಿ ಯಶಸ್ವಿ ಜೈಸ್ವಾಲ್ ತಂಡದಲ್ಲಿ ಇರಬೇಕಾಗಿತ್ತು. ಆದರೆ ಜೈಸ್ವಾಲ್‌ನನ್ನು ಕೈಬಿಟ್ಟಿದ್ದು ನಿಜಕ್ಕೂ ಆಶ್ಚರ್ಯ. ಇನ್ನು ಈಗಷ್ಟೇ ಇಂಗ್ಲೆAಡ್ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ಮಾಡಿದ್ದ ಸಿರಾಜ್‌ಗೆ ತಂಡದಲ್ಲಿ ಸ್ಥಾನ ನೀಡಬಹುದಾಗಿತ್ತು. ಬುಮ್ರಾ ಜೊತೆ ಸಿರಾಜ್ ಕೂಡ ಇದ್ದಿದ್ದರೆ ಬೌಲಿಂಗ್ ಪಡೆ ಇನ್ನೂ ಗಟ್ಟಿಯಾಗ್ತಿತ್ತು. ಇನ್ನು ಯಜುವೇಂದ್ರ ಚಹಾಲ್ ಪರಿಗಣಿಸಬಹುದಾದ ಮತ್ತೊಬ್ಬ ಆಟಗಾರನಾಗಿದ್ದರೂ, ಆಯ್ಕೆ ಆಗಿರುವ ವರುಣ್ ಚಕ್ರವರ್ತಿ ಹಾಗೂ ಕುಲ್ದೀಪ್ ಯಾದವ್ ಕೂಡ ಕಡೆಗಣಿಸಬಹುದಾದ ಆಟಗಾರರೇನಲ್ಲ. ಒಟ್ಟಾರೆಯಾಗಿ ಈ ಬಾರಿಯ ಏಷ್ಯಾ ಕಪ್‌ಗೆ ಆಯ್ಕೆ ಮಾಡಿದ ತಂಡದ ಪ್ರದರ್ಶನ ಕಳಪೆಯಾದರೆ ಆಯ್ಕೆ ಸಮಿತಿಗೆ ಟೀಕೆಗಳ ಸುರಿಮಳೆ ಮಾತ್ರ ಗ್ಯಾರಂಟಿ.

Leave a Reply

Your email address will not be published. Required fields are marked *