ತಪ್ಪೊಪ್ಪಿಕೊಂಡ ಪಾಪಿಸ್ತಾನ | Finally Pakistan admits the Mistake…!

ತಪ್ಪೊಪ್ಪಿಕೊಂಡ ಪಾಪಿಸ್ತಾನ | Finally Pakistan admits the Mistake...!

2025ರ ಮೇ 7 ಸಮಸ್ತ ಭಾರತೀಯರ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದ ದಿನ. ಯಾಕೆಂದರೆ, ಪಹಾಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್‌ ಪೋಷಿತ ಉಗ್ರರಿಗೆ ತಕ್ಕ ಪಾಠ ಕಲಿಸಿದ ದಿನ. ಇಷ್ಟಾದರೂ ಪಾಕಿಸ್ತಾನ ಮಾತ್ರ ತನ್ನ ಷಡ್ಯಂತ್ರದ ತಪ್ಪೊಪ್ಪಿಕೊಂಡಿರಲಿಲ್ಲ.ಈಗ ತಡವಾಗಿ ಪಾಕಿಸ್ತಾನಕ್ಕೆ ಜ್ಞಾನೋದಯವಾಗಿದೆ. ಇದು ಹೇಗೆ ಅಂತೀರಾ..?

ಹೌದು, ಭಾರತೀಯ ಸೇನೆ ಪಹಾಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಉಗ್ರರ ಮೇಲೆ ಆಪರೇಷನ್‌ ಸಿಂಧೂರ ದಾಳಿ ಮಾಡಿ ಪಾಕಿಸ್ತಾನಕ್ಕೆ ಗಟ್ಟಿಪಾಠ ಕಲಿಸಿತ್ತು. ಆಗ ಭಾರತೀಯ ಯೋಧರು ಪಾಕ್‌ ನೆಲಕ್ಕೆ ನುಗ್ಗಿ ಆ ದೇಶಕ್ಕೆ ನೀಡಿದ ಪ್ರತೀಕಾರದ ಹೊಡೆತ ಪಾಕಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರದಲ್ಲಿರುವವರಿಗೆ ಕನಸಿನಲ್ಲೂ ಪದೇ ಪದೇ ನೆನಪಾಗುತ್ತದೆ. ಆಗ ಭಾರತ ಮತ್ತೆ ಮತ್ತೆ ಎಷ್ಟೇ ಹೇಳಿದರೂ ತಪ್ಪೊಪ್ಪಿಕೊಳ್ಳದೆ ಮೊಂಡಾಟವಾಡಿದ್ದ ಪಾಕ್‌ ಕೊನೆಗೂ ತಪ್ಪೊಪ್ಪಿಕೊಂಡಿದೆ. ಆ ದೇಶದ ರಕ್ಷಣಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್‌ಗೆ ತಡವಾಗಿ ಜ್ಞಾನೋದಯವಾಗಿದೆ. ಆಪರೇಷನ್‌ ಸಿಂಧೂರ ಕಾರ್ಯಾಚರಣೆಯೇ ಸುಳ್ಳೆಂದು ಹೇಳುತ್ತಿದ್ದ ಪಾಕಿಸ್ತಾನ ಈಗ ಆಪರೇಷನ್‌ ಸಿಂಧೂರ ನಡೆದಿದೆ ಎಂಬಂತೆ ತಪ್ಪೊಪ್ಪಿಕೊಂಡಿದೆ. ಪಹಲ್ಗಾಮ್ ದಾಳಿ ನಂತರ ಭಾರತ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ನಂತರ ನಡೆದ ಉಭಯ ದೇಶಗಳ ಮಿಲಿಟರಿ ಸಂಘರ್ಷದ ವೇಳೆಯಲ್ಲಿ ಪಾಕಿಸ್ತಾನವನ್ನು ದೈವೀಶಕ್ತಿಯೇ ಕಾಪಾಡಿದೆ ಎಂದು ಮುನೀರ್‌ ಹೇಳಿದ್ದಾರೆ. ಹೀಗೆ ಆಪರೇಷನ್‌ ಸಿಂಧೂರ ಬಗ್ಗೆ ಮುನೀರ್‌ ಹೇಳಿಕೆ ನೀಡಿರುವ ವಿಡಿಯೋ ವೈರಲ್‌ ಆಗಿದೆ.

ಇಸ್ಲಾಮಾಬಾದ್ ನಲ್ಲಿ ನಡೆದ ರಾಷ್ಟ್ರೀಯ ಉಲೇಮಾ ಸಮಾವೇಶದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಭಾರತ ನಡೆಸಿದ ದಾಳಿಯಲ್ಲಿ ಪಾಕಿಸ್ತಾನ ತೀವ್ರವಾಗಿ ಹೊಡೆತ ತಿಂದಿದೆ. ಸೈನಿಕರಿಗೆ ದೈವೀಶಕ್ತಿ ನೆರವಾಗಿದೆ. ಪಾಕಿಸ್ತಾನ-ಅಫ್ಘಾನಿಸ್ತಾನ ಸೇನಾ ಸಂಘರ್ಷದ ಬಗ್ಗೆ ಮಾತನಾಡುತ್ತಿದ್ದಾಗ ಮುನೀರ್‌ ಬಾಯಿ ತಪ್ಪಿ ಆಪರೇಷನ್‌ ಸಿಂದೂರವನ್ನು ಒಪ್ಪಿಕೊಂಡಿದ್ದಾರೆ. ಅಫ್ಘನ್‌ ಸೇನೆಯು ಪಾಕಿಸ್ತಾನದ ಮಕ್ಕಳ ರಕ್ತವನ್ನು ನೋಡುತ್ತಿದೆ. ಪಾಕಿಸ್ತಾನದ ಹುಟ್ಟಿಕೊಂಡಿರುವ ತೆಹರೀಕ್‌ ಇ ತಾಲಿಬಾನ್‌ ಸಂಘಟನೆಯಲ್ಲಿ 70% ಅಫ್ಘನ್‌ ಪ್ರಜೆಗಳೇ ಇದ್ದಾರೆ. ಅಫ್ಘನ್‌ ಸರ್ಕಾರ ಇನ್ನಾದರೂ ಈ ಬಗ್ಗೆ ತಿಳಿದುಕೊಳ್ಳಲಿ ಎಂದು ಮುನೀರ್‌ ಹೇಳಿದ್ದಾರೆ.

2025ರ ಮೇನಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ 26 ಜನರು ಸಾವಿಗೀಡಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕ್‌  ನೆಲದಲ್ಲೇ ಆಪರೇಷನ್‌ ಸಿಂದೂರ ಕಾರ್ಯಾಚರಣೆ ನಡೆಸಿ ಉಗ್ರರ ನೆಲೆಗಳನ್ನು ದ್ವಂಸ ಮಾಡಿತ್ತು. ಇಲ್ಲಿ ಉಗ್ರರ ನೆಲೆಗಳು ಮಾತ್ರವಲ್ಲದೆ ಪಾಕಿಸ್ತಾನದ ಸೇನಾ ನೆಲೆಗಳೂ ಹಾನಿಗೀಡಾಗಿದ್ದವು. ನಾಲ್ಕು ದಿನಗಳ ಈ ಕಾರ್ಯಾಚರಣೆಯಲ್ಲಿ ಪತರಗುಟ್ಟಿದ್ದ ಪಾಕ್‌ ಸೇನೆ ಕೊನೆಗೂ ಯುದ್ಧವಿರಾಮಕ್ಕೆ ಬಂದಿತ್ತು. ಈ ಮೂಲಕ ಶರಣಾಗತಿ ಕೋರಿತ್ತು.

ಒಟ್ಟಾರೆ ಅಸಲಿಗೆ ತನ್ನ ನೆಲದಲ್ಲಿ ಭಾರತೀಯ ಯೋಧರಿಂದ ಆಪರೇಷನ್‌ ಸಿಂದೂರ ಕಾರ್ಯಾಚರಣೆಯೇ ನಡೆದಿಲ್ಲ ಎನ್ನುತ್ತಿದ್ದ ಪಾಕಿಸ್ತಾನ ಕೊನೆಗೂ ತಪ್ಪೊಪ್ಪಿಕೊಂಡಿದೆ. ಇದು ಭಾರತೀಯ ಸೇನೆಗೆ ಹೆಮ್ಮೆಯ ವಿಚಾರ. ಜೈ ಜವಾನ್‌ ಜೈ ಕಿಸಾನ್‌.

Leave a Reply

Your email address will not be published. Required fields are marked *