ರಾಜ್ಯ

ಸ್ವಾತಿ – ನಿಖಿಲ್ ಮದ್ವೆಗೆ ಬ್ರೇಕ್..!

ಮುಖ್ಯಮಂತ್ರಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಮದ್ವೆಯಾಗ್ತಿದ್ದಾರಂತೆ. ಎಂಗೇಜ್​ಮೆಂಟ್ ಆಗಿದ್ದು ಮುರಿದು ಬಿದ್ದಂತೆ. ಹೈದ್ರಾಬಾದ್​​ ಉದ್ಯಮಿ ಮಗಳನ್ನು ಮನೆ ತುಂಬಿಸಿಕೊಳ್ಳೋದಕ್ಕೆ ಕುಮಾರಸ್ವಾಮಿ ದಂಪತಿಗಳು ತಯಾರಿ ನಡೆಸಿದ್ದಾರಂತೆ. ಹೀಗೆ ನಿಖಿಲ್ ಕುಮಾರಸ್ವಾಮಿ ಮದ್ವೆ ಕುರಿತು ಅಂತೆ ಕಂತೆಗಳ ಸುದ್ದಿ ಕೆಲ ದಿನಗಳ ಹಿಂದೆ ಹರಿದಾಡಿತ್ತು. ಕೊನೆಗೂ ನಿಖಿಲ್ ಕುಮಾರಸ್ವಾಮಿ ಮದ್ವೆ ವಿಷಯಕ್ಕೆ ಕೊನೆಗೂ ಬ್ರೇಕ್​ ಬಿದ್ದಿದೆ. ನಿಖಿಲ್ ನಿಶ್ಚಿತಾರ್ಥ ಮಾಡ್ಕೊಂಡ ಹುಡುಗಿ ಬೇರೊಬ್ಬನ ಎಂಗೇಜ್​ಮೆಂಟ್​ ಮಾಡ್ಕೊಳ್ಳೋದ್ರ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

2015 ಮೇ 20 ರಲ್ಲಿ ಚಿತ್ರ ನಿರ್ಮಾಪಕ ಕೆ.ಸಿ.ಎನ್​ ಮೋಹನ್​ ಮಗಳು ಸ್ವಾತಿ ಜೊತೆ ನಿಖಿಲ್ ಕುಮಾರ್ ನಿಶ್ಚಿತ್ತಾರ್ಥ ಆಗಿತ್ತು. ಕಾಲೇಜು ದಿನಗಳಲ್ಲಿ ಪರಸ್ಪರ ಪ್ರೀತಿಸ್ತಿದ್ದ ನಿಖಿಲ್ , ಸ್ವಾತಿ ಕುಟುಂಬಸ್ಥರ ಸಮ್ಮುಖದಲ್ಲಿ ರಿಂಗ್​ ಎಕ್ಸೇಂಜ್ ಮಾಡ್ಕೊಂಡಿದ್ರು. ಇವರದ್ದು ಲವ್ ಕಮ್ ಅರೇಂಜ್​  ಮ್ಯಾರೇಜ್ ಅನ್ನೋ ಗುಸು ಗುಸು ಕೂಡಾ ಕೇಳಿ ಬಂದಿತ್ತು. ದೇವೇಗೌಡರ ಫ್ಯಾಮಿಲಿ ಕಾರ್ಯಕ್ರಮದಲ್ಲೂ ಸ್ವಾತಿ ಕಾಣಿಸಿದ್ರು. ಆ ನಂತ್ರ ನಿಖಿಲ್ ಕುಮಾರಸ್ವಾಮಿ ಸ್ಯಾಂಡಲ್ ವುಡ್​ಗೆ ಪಾದಾರ್ಪಣೆ ಮಾಡಿದ್ರು. ಆಮೇಲೆ ಅದೇನಾಯ್ತೋ ಗೊತ್ತಿಲ್ಲ. ಇಬ್ಬರೂ ಪರಸ್ಪರ ದೂರವಾದ್ರು.

ಇದೀಗ ಶ್ರೀಕಂಠಯ್ಯ ಮೊಮ್ಮಗ, ರವಿ ಶ್ರೀಕಂಠಯ್ಯ ಮಗ ನೇಹಾನೀಶ್​ ಜೊತೆ ನಿನ್ನೆ ಸ್ವಾತಿ ನಿಶ್ಚಿತಾರ್ಥ ಮಾಡ್ಕೊಂಡಿದ್ದಾರೆ.  ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರೋ ಶ್ರೀಕಂಠಯ್ಯ ಕುಟುಂಬಕ್ಕೂ ಜೆಡಿಎಸ್​ ದೇವೇಗೌಡರ ಕುಟುಂಬಕ್ಕೂ ಮೊದಲಿನಿಂದಲೂ ಅಷ್ಟಕಷ್ಟೆ ಹೀಗೆ ದೇವೇಗೌಡರ ವಿರೋಧಿ ಕುಟುಂಬದವರ ಜೊತೆ ನಿರ್ಮಾಪಕ ಕೆಎಸ್​ಎನ್​ ಗೌಡರ ಫ್ಯಾಮಿಲಿ ಸಂಬಂಧ ಬೆಳೆಸೋದ್ರ ಮೂಲಕ ದೇವೇಗೌಡರ ಕುಟುಂಬಕ್ಕೆ ಟಾಂಗ್ ನೀಡಿದೆ.

 

Click to comment

Leave a Reply

Your email address will not be published. Required fields are marked *

Most Popular

To Top